ಬ್ರೇಕ್ ಫಾಸ್ಟ್ ಮಾಡೋಕೆ ತಲೆ ಓಡ್ತಾ ಇಲ್ವಾ..? ಈ ಜೀರಾ ರೈಸ್ ಜೊತೆಗೆ ಹೆಸರು ಕಾಳು ಗ್ರೇವಿ‌ ಮಾಡಿ

Most read

ಬೆಳಗ್ಗೆ ಆದ್ರೆ ಸಾಕು ತಿಂಡಿಗೇನು ಮಾಡುವುದು ಎಂಬುದೇ ದೊಡ್ಡ ಚಿಂತೆ. ಅದೇ ತಿಂಡಿ ಮಾಡಿ‌ಮಾಡಿ ಬೇಸರ ಆಗಿರುತ್ತೆ. ಅದಕ್ಕೆ ತಲೆ‌ಕೆಟ್ಟಾಗ, ಸಮಯ ಇಲ್ಲದೆ ಇದ್ದಾಗ ರುಚಿಕರವಾಗಿ ಜೀರಾ ರೈಸ್ ಜೊತೆಗೆ, ಹೆಸರು ಕಾಳು ಗ್ರೇವಿ‌ ಮಾಡಿ ತಿನ್ನಿ.

ಬೇಕಾಗುವ ಪದಾರ್ಥಗಳು:

ಜೀರಿಗೆ
ಎಣ್ಣೆ
ಟಮೋಟೋ
ಚಕ್ಕೆ
ಲವಂಗ
ತುಪ್ಪ
ಹೆಸರುಕಾಳು
ಮಸಾಲೆ ಪೌಡರ್ ಗಳು

ಮಾಡುವ ವಿಧಾನ: ಕುಕ್ಕರ್ ನಲ್ಲಿ ಒಂದು ಬೌಲ್ ಹೆಸರು ಕಾಳು, ಅರ್ಧ ಚಕ್ಕೆ, ಒಂದು ಏಲಕ್ಕಿ, ಎರಡು ಲವಂಗ, ರುಚಿಯ ಗೆ ತಕ್ಕಷ್ಟು ಉಪ್ಪು, ಸ್ವಲ್ಪ ಅರಿಶಿನ, ಅರ್ಧ ಚಮಚ ಎಣ್ಣೆ ಹಾಕಿ, ನೀರು ಹಾಕಿ ಬೇಯಿಸಿಕೊಳ್ಳಿ. ಅದು ಬೇಯುವಷ್ಟರಲ್ಲಿ ಜೀರಾ ರೈಸ್ ಮಾಡಿಕೊಳ್ಳಿ.

ಒಂದು ಕುಕ್ಕರ್ ಗೆ ಎಣ್ಣೆ, ಒಂದು ಸ್ಪೂನ್ ಜೀರಿಗೆ ಹಾಕಿಕೊಂಡು ಉರಿಯಿರಿ. ಬಳಿಕ ಅದಕ್ಕೆ ಅಕ್ಕಿ ಎಷ್ಟು ಹಾಕಿಕೊಳ್ಳುತ್ತೀರೋ ಅದಕ್ಕೆ ಬೇಕಾದ ಪ್ರಮಾಣದಲ್ಲಿ ನೀರನ್ನು ಹಾಕಿಕೊಂಡು, ಸ್ವಲ್ಪ ಉಪ್ಪು ಹಾಕಿ ಅದನ್ನು ಕುದಿಯುವುದಕ್ಕೆ ಬಿಡಿ. ಚೆನ್ನಾಗಿ ಕುದಿಯುತ್ತಿದ್ದಾಗ ಅಕ್ಕಿಯನ್ನು ಹಾಕಿ,‌ ಮಿಕ್ಸ್ ಮಾಡಿ ಲಿಡ್ ಕ್ಲೋಸ್ ಮಾಡಿ, ಅನ್ನ ಮಾಡಿಕೊಳ್ಳಿ.

ಮತ್ತೊಂದು ಕಡಾಯಿಗೆ ಮೂರು ಸ್ಪೂನ್ ಎಣ್ಣೆ, ಒಂದು ಸ್ಪೂನ್ ತುಪ್ಪ, ಅರ್ಧ ಸ್ಪೂನ್ ಜೀರಿಗೆ, ಇಂಗು, ಹಸಿಮೆಣಸಿನಕಾಯಿ, ಕರಿಬೇವು, ಈರುಳ್ಳಿ ಹಾಕಿ ಫ್ರೈ ಮಾಡಿ. ಬಳಿಕ ಎರಡು ಟಮೋಟೋವನ್ನು ಸಣ್ಣಗೆ ಕಟ್ ಮಾಡಿ ಹಾಕಿ. ಕಾರದ‌ಪುಡಿ, ಅರಿಶಿನ, ಧನ್ಯಪುಡಿ, ಗರಂ ಮಸಾಲ ಹಾಕಿ ಮೆತ್ತಗೆ ಆಗುವ ತನಕ ಫ್ರೈ ಮಾಡಿಕೊಳ್ಳಿ.

ಹೆಸರುಕಾಳನ್ನು ಸ್ವಲ್ಪ ಸ್ಮಾಶ್ ಮಾಡಿಕೊಳ್ಳಿ. ಆ ಬೆಂದ ಹೆಸರುಕಾಳನ್ನು ಟಮೋಟೋ ಮಸಾಲೆಯೊಂದಿಗೆ ಹಾಕಿ. ನಿಮಗೆ ಎಷ್ಟು ಗ್ರೇವಿ ಬೇಕೋ ಅಷ್ಟು ನೀರನ್ನು ಹಾಕಿಕೊಳ್ಳೊ. ಚೆನ್ನಾಗಿ ಕುದಿಸಿ. ಆ ಕಡೆ ಜೀರಾ ರೈಸ್ ಕೂಡ ರೆಡಿಯಾಗಿರುತ್ತದೆ. ಎರಡನ್ನು ಮಿಕ್ಸ್ ಮಾಡಿಕೊಂಡು ತಿಂದ ಮೇಲೆ ಕಮೆಂಟ್ ಮಾಡಿ.

More articles

Latest article