ಮರಾಠಿ ಕಲಿಯುವವುದಿಲ್ಲ ಎಂದ ಮುಂಬೈ ಉದ್ಯಮಿ ಕಚೇರಿ ಮೇಲೆ ದಾಂಧಲೆ ನಡೆಸಿದ ಎಂ ಎನ್ ಎಸ್ ಕಾರ್ಯಕರ್ತರು

Most read

ಮುಂಬೈ: ಮರಾಠಿ ಕಲಿಯುವುದಿಲ್ಲ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಉದ್ಯಮಿ ಸುಶೀಲ್ ಕೇಡಿಯಾ ಅವರ ಕಚೇರಿ ಮೇಲೆ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂ ಎನ್ ಎಸ್) ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಕಚೇರಿ ಆವರಣದಲ್ಲಿ ದಾಂಧಲೆ ನಡೆಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಈ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಮರಾಠಿ ಕಲಿಕೆಯ ವಿಷಯಕ್ಕೆ  ಸಂಬಂಧಪಟ್ಟಂತೆ ಇತ್ತೀಚೆಗೆ ಕೇಡಿಯಾ ಅವರು 30 ವರ್ಷದಿಂದ ಮುಂಬೈನಲ್ಲಿ ವಾಸಿಸುತ್ತಿದ್ದರೂ ನನಗೆ ಮರಾಠಿ ಸರಿಯಾಗಿ ಬರುತ್ತಿಲ್ಲ. ಭಾಷೆ ಉಳಿಸುವ ಸೋಗು ಹಾಕಿಕೊಂಡಿರುವ ನಿಮ್ಮಂತವರನ್ನು ನೋಡಿದ ಮೇಲಂತೂ ಮರಾಠಿ ಕಲಿಯಬಾರದು ಎಂದು ನಾನು ಪ್ರತಿಜ್ಞೆ ಮಾಡಿದ್ದೇನೆ. ಏನು ಮಾಡೋಣ ಹೇಳು? ಎಂದು ರಾಜ್‌ ಠಾಕ್ರೆ ಅವರನ್ನು ಟ್ಯಾಗ್ ಮಾಡಿದ್ದರು.

ಇದರಿಂದ ಕೆರಳಿದ ಎಂಎನ್‌ಎಸ್‌ ಕಾರ್ಯಕರ್ತರು, ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಖಳೆದ ವಾರವೂ ಮರಾಠಿ ಮಾತನಾಡಲಿಲ್ಲ ಎಂಬ ಕಾರಣಕ್ಕೆ ಠಾಣೆ ನಗರದ ಅಂಗಡಿ ಮಾಲೀಕರೊಬ್ಬರ ಮೇಲೆ ಎಂ ಎನ್‌ ಎಸ್‌ ಕಾರ್ಯಕರ್ತರು ಹಲ್ಲೆ ನಡೆಸಿದ್ದರು. ಮಾಲೀಕನ ಕೆನ್ನೆಗೆ ಹೊಡೆದು ಮರಾಠಿ ಕಲಿಯುವಂತೆ ಬೆದರಿಕೆ ಹಾಕಿದ್ದರು.  ಆ ವಿಡಿಯೋವನ್ನು ವಿಡಿಯೊ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು.

More articles

Latest article