Saturday, July 27, 2024

ಇಸ್ರೇಲ್‌ ನಲ್ಲಿ ಮಿಸೈಲ್‌ ದಾಳಿಗೆ ಭಾರತೀಯನ ಸಾವು, ಇಬ್ಬರಿಗೆ ಗಾಯ

Most read

ಜೆರುಸಲೆಮ್:‌ ಮಿಸೈಲ್‌ ದಾಳಿಗೆ ಭಾರತೀಯನೊಬ್ಬ ಸಾವನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಆಘಾತಕಾರಿ ಘಟನೆ ಇಸ್ರೇಲ್‌ (israel) ನ ಉತ್ತರ ಗಡಿಯಲ್ಲಿ ನಡೆದಿದೆ.

ಇಸ್ರೇಲ್‌ ನ ಉತ್ತರ ಗಡಿಗೆ ಹೊಂದಿಕೊಂಡಿರುವ ಲೆಬನಾನ್‌ನ ಹೆಜ್ಬೊಲ್ಲಾ ಸಂಘಟನೆಯ ದಾಳಿಯೊಂದರಿಂದ ಈ ದುರ್ಘಟನೆ ಸಂಭವಿಸಿದೆ. ಇದೇ ಸಂಘಟನೆ ಕಳೆದ ಅಕ್ಟೋಬರ್‌ 8ರಿಂದ ಸತತವಾಗಿ ಇಸ್ರೇಲ್‌ ಮೇಲೆ ರಾಕೆಟ್‌, ಮಿಸೈಲ್‌ ಮತ್ತು ದ್ರೋಣ್‌ ದಾಳಿಗಳನ್ನು ಸಂಘಟಿಸುತ್ತಿದೆ. ಹೆಜ್ಬೊಲ್ಲಾ ಸಂಘಟನೆ ಗಾಜಾಪಟ್ಟಿಯಲ್ಲಿ ಇಸ್ರೇಲ್‌ ವಿರುದ್ಧ ಸಮರ ಸಾರಿದ್ದ ಹಮಾಸ್‌ ಅನ್ನು ಬೆಂಬಲಿಸಿ ಈ ದುಷ್ಕೃತ್ಯಗಳನ್ನು ಎಸಗುತ್ತಿದೆ.

ಕೇರಳದ ಕೊಲ್ಲಮ್‌ ನವರಾದ ಪತ್ನಿಬಿನ್‌ ಮ್ಯಾಕ್ಸ್‌ ವೆಲ್‌ ಸಾವೀಗೀಡಾದ ದುರ್ದೈವಿ. ಅವರ ದೇಹವನ್ನು ಜಿವ್‌ ಆಸ್ಪತ್ರೆಯಲ್ಲಿ ಗುರುತಿಸಲಾಯಿತು. ಗಾಯಗೊಂಡಿರುವ ಇನ್ನಿಬ್ಬರೂ ಸಹ ಕೇರಳ ಮೂಲದವರು ಎಂದು ತಿಳಿದುಬಂದಿದೆ. ಗಾಯಗೊಂಡಿರುವ ಬುಷ್‌ ಜೋಸೆಫ್‌ ಜಾರ್ಜ್‌ ಮತ್ತು ಪಾಲ್‌ ಮೆಲ್ವಿನ್‌ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಗಾಯಗೊಂಡವರ ಪೈಕಿ ಬುಷ್‌ ಜೋಸೆಫ್‌ ಜಾರ್ಜ್‌ ಅವರನ್ನು ಪೇಟ ಟಿಕ್ವಾ ಎಂಬಲ್ಲಿನ ಬೆಲ್ಲಿನ್ಸನ್‌ ಆಸ್ಪತ್ರೆಗೆ ಸೇರಿಸಲಾಗಿದ್ದು ಅವರ ಮುಖ ಮತ್ತು ದೇಹದಲ್ಲಿ ಹಲವಾರು ಗಾಯಗಳಾಗಿವೆ. ಜಾರ್ಜ್‌ ಅವರಿಗೆ ಶಸ್ತ್ರಚಿಕಿತ್ಸೆಯನ್ನೂ ಸಹ ಮಾಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭಾರತದಲ್ಲಿರುವ ತಮ್ಮ ಕುಟುಂಬ ಸದಸ್ಯರೊಂದಿಗೆ ಅವರು ಮಾತನಾಡುತ್ತಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೇರಳದ ಇಡುಕ್ಕಿ ಎಂಬ ಸ್ಥಳದವರಾದ ಮೆಲ್ವಿನ್‌ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಜಿವ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಇಸ್ರೇಲ್‌ ರಕ್ಷಣಾ ಪಡೆ (IDF) ಈಗಾಗಲೇ ಪ್ರತಿಕಾರದ ದಾಳಿ ನಡೆಸಿದ್ದು, ಯಾವ ಸ್ಥಳದಿಂದ ಕ್ಷಿಪಣಿ ದಾಳಿ ನಡೆಸಲಾಯಿತೋ ಅದರ ಮೇಲೆ ಆರ್ಟಿಲರಿಗಳಿಂದ ದಾಳಿ ನಡೆಸಿದೆ. ಇದಲ್ಲದೆ ಹೆಜ್ಬೊಲ್ಲಾ ಸಂಘಟನೆಯ ಕಟ್ಟಡವೊಂದರ ಬಳಿಯೂ ಆರ್ಟಿಲರಿ ದಾಳಿ ನಡೆಸಿದೆ.

More articles

Latest article