ಮೈಕ್ರೊ ಫೈನಾನ್ಸ್‌ ಕಂಪನಿಗೆ 50 ಲಕ್ಷ ರೂ. ವಂಚಿಸಿದ ಅದೇ ಕಂಪನಿ ಉದ್ಯೋಗಿಗಳು

Most read



ಬೆಂಗಳೂರು: ದುಬಾರಿ ಬಡ್ಡಿ ಮತ್ತು ಹಣ ವಸೂಲಿ ಹೆಸರಿನಲ್ಲಿ ಮೈಕ್ರೊ ಫೈನಾನ್ಸ್‌ ಕಂಪನಿಗಳು ಸಾರ್ವಜನಿಕರನ್ನು ವಂಚಿಸುತ್ತಿದ್ದರೆ ಮೈಕ್ರೊ ಫೈನಾನ್ಸ್‌ ಕಂಪನಿಗಳ ಉದ್ಯೋಗಿಗಳೇ ಕೆಲಸ ಮಾಡುತ್ತಿದ್ದ ಕಂಪನಿಗೆ ವಂಚನೆ ಮಾಡಿರುವ ಪ್ರಕರಣವೊಂದು ಮಾಗಡಿಯಲ್ಲಿ ನಡೆದಿದೆ. ಭಾರತ್‌ ಫೈನಾನ್ಷಿಯಲ್‌ ಇನ್‌ ಕ್ಲೂಜನ್‌ ಮೈಕ್ರೊ ಪೈನಾನ್ಸ್‌ ಕಂಪನಿಗೆ ಅಲ್ಲಿ ಕೆಸ ಮಾಡುತ್ತಿದ್ದ ನಾಲವರರು ಉದ್ಯೋಗಿಗಳೇ 53.26 ಲಕ್ಷ ರೂ. ವಂಚಿಸಿ ತಲೆ ಮರೆಸಿಕೊಂಡಿದ್ದಾರೆ.

ಸಾಲಗಾರರಿಂದ ವಸೂಲಿ ಮಾಡಿದ್ದ ರೂ.  ‍53.26 ಲಕ್ಷವನ್ನು ಕಂಪನಿ ಖಾತೆಗೆ ಪಾವತಿಸದೆ ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂದು ನಾಲ್ವರು ಸಿಬ್ಬಂದಿ ವಿರುದ್ಧ ಕಂಪನಿಯ ಏರಿಯಾ ಮ್ಯಾನೇಜರ್ ಎನ್.ಎಸ್. ಸ್ವಾಮಿ ದೂರು ಸಲ್ಲಿಸಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳು ನಾಪತ್ತೆಯಾಗಿದ್ದಾರೆ. ಕಂಪನಿಯ ಮಾಗಡಿ ಶಾಖೆಯ ವ್ಯವಸ್ಥಾಪಕ ಎಂ.ಎನ್. ಮಂಜುನಾಥ 48,39,115 ರೂ, ಬ್ರಾಂಚ್ ಕ್ರೆಡಿಟ್ ಮ್ಯಾನೇಜರ್ ತೇಜಸ್ ಜೆ.ಎ ರೂ.‍1.20 ಲಕ್ಷ, ಕ್ಷೇತ್ರ ಸಹಾಯಕರಾದ ಅಭಿಷೇಕ್ ರೂ.2.57 ಲಕ್ಷ ಹಾಗೂ ಶ್ರೀನಿವಾಸ ಕೆ. ರೂ.1.08 ಲಕ್ಷ ಸಂಗ್ರಹಿಸಿದ್ದರು. ಈ ನಾಲ್ವರ ಪತ್ತೆಗೆ ಹುಡುಕಾಟ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

More articles

Latest article