ಕೃಪೆ ತೋರಿದ ವರುಣರಾಯ: ರಾಜ್ಯದ ಹಲವೆಡೆ ಅಬ್ಬರದ ಮಳೆ

ಬೆಂಗಳೂರು: ರಣಬಿಸಿಲಿನಿಂದ ಕಂಗೆಟ್ಟಿದ್ದ ರಾಜ್ಯದ ಹಲವು ಭಾಗಗಳಲ್ಲಿ ಮಳೆ ಸುರಿದು ಧರೆ ತಂಪಾಗಿದೆ. ಈ ಬಾರಿ ಅತಿಹೆಚ್ಚು ತಾಪಮಾನ ಕಂಡಿದ್ದ ಕಲ್ಬುರ್ಗಿ ಜಿಲ್ಲೆಯಲ್ಲಿ ಧಾರಕಾರ ಮಳೆಯಾಗಿದೆ. ಕಲ್ಬುರ್ಗಿ ಜಿಲ್ಲೆಯ ಹಲವು ಭಾಗಗಳಲ್ಲಿ ಮಳೆಯಾಗಿದೆ. ಗಡಿಭಾಗದ ಅಫಜಲಪುರದಲ್ಲಿ ಸಾಧಾರಣ ಮಳೆಯಾಗಿದ್ದು, ಕಲ್ಬುರ್ಗಿ ನಗರದಲ್ಲಿ ಮೋಡ ಕವಿದ ವಾತಾವರಣವಿದ್ದು ಮಳೆ ಬರುವ ಸಂಭವವಿದೆ.

ಮಲೆನಾಡು ಭಾಗದ ಕೊಡಗು ಮತ್ತು ಚಿಕ್ಕಮಗಳೂರು ಭಾಗದಲ್ಲೂ ಮಳೆಯಾಗಿದೆ. ಈ ಬಾರಿ ಅತಿಯಾದ ತಾಪಮಾನ ದಾಖಲಾಗಿತ್ತು. ಮಳೆಯಿಂದಾಗಿ ಇಲ್ಲಿನ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ಮಧ್ಯ ಕರ್ನಾಟಕದ ದಾವಣಗೆರೆ, ಶಿವಮೊಗ್ಗಗಳಲ್ಲೂ ಇಂದು ಮಳೆಯಾಗಿದೆ. ಇದಿಷ್ಟೇ ಅಲ್ಲದೆ ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾಗಿರುವ ವರದಿಗಳು ಬರುತ್ತಿವೆ.

More articles

Latest article

Most read