ಚಲನಚಿತ್ರ ಅಕಾಡೆಮಿಗೆ ಸದಸ್ಯರ ನೇಮಕ

Most read

ಬೆಂಗಳೂರು: ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಸದಸ್ಯರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ನೂತನ ಸದಸ್ಯರೆಂದರೆ  ಸಾವಿತ್ರಿ ಮಜುಂದಾರ್, ಹಿರಿಯ ಪತ್ರಕರ್ತರು (ಕೊಪ್ಪಳ),  ಚಿದಾನಂದ ಪಟೇಲ್, ಹಿರಿಯ ಪತ್ರಕರ್ತರು (ಬೆಂಗಳೂರು), ದೇಶಾದ್ರಿ ಹೆಚ್, ಸಿನಿಮಾ ವಿಶ್ಲೇಷಕರು (ಶಿವಮೊಗ್ಗ), ನಿಖಿತಾಸ್ವಾಮಿ.ಎಸ್. ಸಿನಿಮಾ ಕಲಾವಿದರು (ಬೆಂಗಳೂರು),  ಡಿ.ಜಿ.ವೆಂಕಟೇಶ್‌ , ಸಿನಿಮಾ ಪ್ರಚಾರಕರು (ಬೆಂಗಳೂರು),  ವಿಷ್ಣು ಕುಮಾರ್.ಎಸ್. ಚಿತ್ರೋದ್ಯಮಿ (ಮೈಸೂರು), ಐವಾನ್ ಡಿಸಿಲ್ವ , ಸಿನಿಮಾ ತಂತ್ರಜ್ಞರು (ಬೆಂಗಳೂರು). ಚಲನಚಿತ್ರ ಅಕಾಡೆಮಿಗೆ ಹಿರಿಯ ನಟ ಸಂಗೀತ ನಿರ್ದೇಶಕ ಸಾಧು ಕೋಕಿಲ ಅವರನ್ನು ಸರ್ಕಾರ ಕಳೆದ ವರ್ಷ ಏಪ್ರಿಲ್‌ ನಲ್ಲಿಯೇ ಅಧ್ಯಕ್ಷರನಾಗಿ ನೇಮಕ ಮಾಡಿತ್ತು.

More articles

Latest article