ಸುದ್ದಿ ನಿಯಂತ್ರಣಕ್ಕೆ ಮಾಧ್ಯಮ ನಿಯಂತ್ರಣ ಕೇಂದ್ರ ಆರಂಭಿಸಿದ ಮಹಾರಾಷ್ಟ್ರ ಸರ್ಕಾರ

ಮುಂಬೈ: ಪತ್ರಿಕೆ, ಟಿ.ವಿ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಪ್ರಕಟವಾಗುವ ಸುದ್ದಿಗಳನ್ನು ಪರಿಶೀಲಿಸಲು ‘ಮಾಧ್ಯಮ ನಿಯಂತ್ರಣ ಕೇಂದ್ರ’ವನ್ನು ಸ್ಥಾಪಿಸಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದ್ದು, ಇದಕ್ಕಾಗಿ ರೂ.10 ಕೋಟಿ ಮೀಸಲಿಟ್ಟಿದೆ.

ಈ ಕೇಂದ್ರವು ಮುದ್ರಣ ಮತ್ತು ಪ್ರಸಾರ ಮಾಧ್ಯಮಗಳಲ್ಲಿನ ಎಲ್ಲಾ ವಾಸ್ತವಿಕ ಮತ್ತು ದಾರಿತಪ್ಪಿಸುವ ಸುದ್ದಿ ವರದಿಗಳನ್ನು ಸಂಗ್ರಹಿಸಿ ವಿಶ್ಲೇಷಿಸುತ್ತದೆ. ಬಳಿಕ ವಾಸ್ತವಿಕ ವರದಿಯನ್ನು ಸಿದ್ಧಪಡಿಸಲಿದೆ ಎಂದು ಸರ್ಕಾರ ತಿಳಿಸಿದೆ.

ದಾರಿತಪ್ಪಿಸುವ ಸುದ್ದಿ ಇದ್ದರೆ, ಅದನ್ನು ನೈಜ ಸಮಯದಲ್ಲಿ ಸ್ಪಷ್ಟಪಡಿಸಲಾಗುತ್ತದೆ. ನಕಾರಾತ್ಮಕ ಸುದ್ದಿ ಇದ್ದರೆ, ಸ್ಪಷ್ಟೀಕರಣವನ್ನು ತ್ವರಿತವಾಗಿ ನೀಡಲಾಗುವುದು ಎಂದು ಅದು ಹೇಳಿದೆ. ಪ್ರತಿದಿನ ಬೆಳಿಗ್ಗೆ 8 ರಿಂದ ರಾತ್ರಿ 10 ರವರೆಗೆ ಈ ಕೇಂದ್ರವು ಕಾರ್ಯ ನಿರ್ವಹಿಸಲಿದೆ. ಕೇಂದ್ರವನ್ನು ಸ್ಥಾಪಿಸಲು ಸರ್ಕಾರ ಆಡಳಿತಾತ್ಮಕ ಮತ್ತು ಆರ್ಥಿಕ ಅನುಮೋದನೆ ನೀಡಿದೆ.

More articles

Latest article

Most read