86 ಮಂದಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ

Most read

 

ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿಯು 2023 ಮತ್ತು 2024ನೇ ಸಾಲಿನ ಜೀವಮಾನ ಸಾಧನೆ, ವಾರ್ಷಿಕ ಮತ್ತು ವಿವಿಧ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಎರಡು ವರ್ಷಗಳ ಪ್ರಶಸ್ತಿಗೆ 86 ಮಂದಿ ಆಯ್ಕೆಯಾಗಿದ್ದಾರೆ. ‘ಜೀವಮಾನದ ಸಾಧನೆ ಪ್ರಶಸ್ತಿ’ಗೆ ಅ.ಚ.ಶಿವಣ್ಣ, ವಾರ್ತಾ ಭಾರತಿಯ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ ಆಯ್ಕೆಯಾಗಿದ್ದಾರೆ.

ವಿವಿಧ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವ 30 ಪತ್ರಕರ್ತರನ್ನು 2023 ಮತ್ತು 2024ನೇ ಸಾಲಿನ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ. ಫೆಬ್ರವರಿಯಲ್ಲಿ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದ್ದು, ಸಿಎಂ ಸಿದ್ದರಾಮಯ್ಯ ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

2023 ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪುರಸ್ಕೃತರು

ಗಂಗಾಧರ ಮೊದಲಿಯಾರ್​​, ಪ್ರೊ. ಉಷಾರಾಣಿ.ಎನ್. ಸುಶೀಲೇಂದ್ರ ನಾಯಕ್, ವಾಸುದೇವ ಹೊಳ್ಳ, ಆಲೈಡ್ ಟೆನ್ನಿಸನ್, ಮಾಲತಿ ಭಟ್, ಮನು ಅಯ್ಯಪ್ಪ, ಹರಿಯ ಹೆಂಜಾರಪ್ಪ, ವಿಲಾಸ್ ನಾಂದೋಡ್ಕರ್, ಶಿವಕುಮಾರ್ ಬೆಳ್ಳಿತಟ್ಟೆ, ಸಿದ್ದಯ್ಯ ಹಿರೇಮಠ, ಶಶಿಕಾಂತ್ ಶೆಂಬೆಳ್ಳಿ, ಮನೋಜ್‌ಗೌಡ ಪಾಟೀಲ, ಆನಂದ ಬೈದನಮನೆ, ಮಧು ಜವಳಿ, ಎಂ.ಆರ್. ದಿನೇಶ್, ತಾರಾನಾಥ್, ಕೆ. ಮಲ್ಲಿಕಾರ್ಜುನ ಸಾಣಾಪೂರ, ಜಯಪ್ರಕಾಶ್, ಪುಂಡಲೀಕ ಭೀ. ಬಾಳೋಜಿ, ಇಬ್ರಾಹಿಂ ಅಡ್ಕಸ್ಥಳ, ಅನ್ನು ಮಂಗಳೂರು (ಪುಂಡಲೀಕ ಪೈ) ಭಾವನಾ ನಾಗಯ, ಹನುಮಾನ್ ಸಿಂಗ್ ಜಮಾದಾರ್, ಜೈಮುನಿ, ಶಿವಮೂರ್ತಿ ಗುರುಮಠ, ಸಿರಾಜ್ ಬಿಸ್ಸಳ್ಳಿ.

2024ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪುರಸ್ಕೃತರು

ಪ್ರೊ. ಎ.ಎಸ್. ಬಾಲಸುಬ್ರಹ್ಮಣ್ಯ, ರಿಷಿಕೇಷ್ ಬಹದ್ದೂರ್ ದೇಸಾಯಿ, ಸುಭಾಷ್ ಹೂಗಾರ, ಟಿ. ಗುರುರಾಜ್, ಕುಮಾರನಾಥ್ ಯುಕೆ, ಸಿದ್ದು ಕಾಳೋಜಿ, ಆ‌ರ್.ಕೆ. ಜೋಷಿ, ಪ್ರಕಾಶ್ ಶೇರ್, ಆರುಂಡಿ ಶ್ರೀನಿವಾಸ ಮೂರ್ತಿ, ರವೀಶ್ ಹೆಚ್.ಎಸ್, ಭಾನುಪ್ರಕಾಶ್, ಮಹೇಶ ಶೆಟಗಾರ, ರಮೇಶ್ ಜಹಗೀರದಾರ, ನಿರುಪಮಾ, ದಿನೇಶ್ ಗೌಡಗೆರೆ, ಡಿ.ಸಿ. ಮಹೇಶ್, ಹೆಚ್.ಎಸ್.ಹರೀಶ್, ಶರಣಯ್ಯ ಒಡೆಯರ್, ಅಶ್ವಿನಿ ಎಂ. ಶ್ರೀಪಾದ, ರಿಜ್ಞಾನ್ ಅಸದ್, ಬನ್ಸಿ ಕಾಳಪ್ಪ, ಮನುಜಾ ವೀರಪ್ಪ, ಜಯಂತ್ ಜಿ, ವಿಖಾ‌ರ್ ಅಹ್ಮದ್ ಸಯೀದ್, ಡಿ.ಎನ್. ಶಾಂಭವಿ ನಾಗರಾಜ್, ರಮೇಶ್ (ಹಾಬಿ ರಮೇಶ್), ಸೋಮಶೇಖರ ಕಿಲಾರಿ, ನಾರಾಯಣಸ್ವಾಮಿ, అನೀಸ್​​​ ನಿಸಾರ್​ ಹಮೀದ್​, ಸಂದೀಪ್ ಸಾಗರ್.

ದತ್ತಿ ಪ್ರಶಸ್ತಿಗಳ ವಿವರ:

‘ಡಾ.ಬಿ.ಆರ್. ಅಂಬೇಡ್ಕರ್ ಮೂಕನಾಯಕ’ ಪ್ರಶಸ್ತಿಗೆ ಕೆ. ನೀಲಾ, ರಹಮತ್ ತರೀಕೆರೆ ಅವರನ್ನು ಆಯ್ಕೆ ಮಾಡಲಾಗಿದೆ. ‘ಅಭಿಮಾನಿ ದತ್ತಿ’ ಪ್ರಶಸ್ತಿಗೆ ರವಿಕುಮಾರ ಚನ್ನಬಸಪ್ಪ ಕಗ್ಗಣ್ಣವರ, ವಿಜಯ್ ಕೋಟ್ಯಾನ್, ಕೆ. ಓಂಕಾರಮೂರ್ತಿ, ಡಿ.ಎಂ. ಕುರ್ಕೆ ಪ್ರಶಾಂತ್, ‘ಮೈಸೂರು ದಿಗಂತ ದತ್ತಿ’ ಪ್ರಶಸ್ತಿಗೆ ಶಿವಾನಂದ ಗೊಂಬಿ, ಬಿ.ಕೆ. ದೇವಯ್ಯ, ನಂದೀಶ್ ಮಲ್ಲೇನಹಳ್ಳಿ, ‘ಅಭಿಮನ್ನು ದತ್ತಿ’ ಪ್ರಶಸ್ತಿಗೆ ಸಂಧ್ಯಾ ಹೆಗಡೆ, ಪ್ರಭು ಬ. ಅಡವಿಹಾಳ, ‘ಪ್ರಜಾ ಸಂದೇಶ ದತ್ತಿ’ ಪ್ರಶಸ್ತಿಗೆ ಶಿಲ್ಪಾ ಪಿ., ಮೊಹಮ್ಮದ್ ಅಖೀಲ್‌ ಉಡೇವು, ಮಾಧ್ಯಮ ಮಹಾಸಾಧಕ ಸಿ.ವಿ. ರಾಜಗೋಪಾಲ್ ದತ್ತಿ’ ಪ್ರಶಸ್ತಿಗೆ ಕ.ಮ. ರವಿಶಂಕರ್, ಮ್ಯುರಿಯಲ್ ನಿರ್ಮಲಾ ಡಿಸಿಲ್ವ, ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕೆಯುಡಬ್ಲ್ಯುಜೆ ದತ್ತಿ’ ಪ್ರಶಸ್ತಿಗೆ ವಿ. ವೆಂಕಟೇಶ್‌, ಎಚ್‌. ಎಸ್. ಸುಧೀಂದ್ರಕುಮಾರ್, ‘ಆಂದೋಲನ’ ಪ್ರಶಸ್ತಿಗೆ ಸಂಜೆ ದರ್ಶನ, ಹೊಸಪೇಟೆ ಟೈಮ್ಸ್, ‘ಬಸವರಾಜ ದೊಡ್ಡಮನಿ ಅವರು ಸ್ಥಾಪಿಸಿರುವ ಕೃಷಿಯಲ್ಲಿ ಅತ್ಯುತ್ತಮ ವರದಿ, ಲೇಖನ, ಅಂಕಣ ಬರಹಗಾರರ ಪ್ರಶಸ್ತಿಗೆ ಎಚ್.ಪಿ. ಪುಣ್ಯವತಿ, ಕೀರ್ತನಾ ಕುಮಾರಿ ಕೆ., ವೆಂಕಟೇಶ್, ‘ಅರಗಿಣಿ’ ಪ್ರಶಸ್ತಿಗೆ ತುಂಗರೇಣುಕ ಹಾಗೂ ಶ್ಯಾಮಪ್ರಸಾದ್ ಆಯ್ಕೆಯಾಗಿದ್ದಾರೆ.

More articles

Latest article