ಕೊಪ್ಪಳ: ಮೇ ಸಾಹಿತ್ಯ ಮೇಳ ನಡೆಯುತ್ತಿರುವ ಇಲ್ಲಿನ ಶಿವಶಾಂತವೀರ ಮಂಗಲ ಭವನದ ಆವರಣದಲ್ಲಿ ಆಯೋಜಿಸಿರುವ ಪುಸ್ತಕ ಹಾಗೂ ಚಿತ್ರಕಲಾ ಪ್ರದರ್ಶನಕ್ಕೆ ಬೆಳಿಗ್ಗೆ ಚಾಲನೆ ದೊರೆಯಿತು
ಕೊಪ್ಪಳದಲ್ಲಿ ಪುಸ್ತಕ ಹಾಗೂ ಓದುವ ಸಂಸ್ಕೃತಿ ಬೆಳಸಲು ಶ್ರಮಿಸಿದ ಶಿಕ್ಷಕ ಬಿ.ಆರ್.ತುಬಾಕಿ ಹಾಗೂ ನಿವೃತ್ತ ಗ್ರಂಥಪಾಲಕ ದೇವೇಂದ್ರಪ್ಪ ಎನ್.ಡೊಳ್ಳಿನ ಅವರ ಹೆಸರಿನಲ್ಲಿ ನಿರ್ಮಿಸಲಾಗಿರುವ ಪುಸ್ತಕ ಮಳಿಗೆಗಳನ್ನು ಸಿ.ಚನ್ನಬಸವಣ್ಣ, ಈರಪ್ಪ ಕಂಬಳಿ, ರವಿತೇಜ ಅಬ್ಬಿಗೇರಿ ಅವರು ಭೀಮನಮನ ಹಾಗೂ ಧಮ್ಮಯಾನ ಕೃತಿಗಳನ್ನು ತೆರೆದು ಉದ್ಘಾಟಿಸಿದರು.
ಸನತ್ ಕುಮಾರ ಬೆಳಗಲಿ, ಬಿ.ಮಾರುತಿ, ಲಿಂಗರಾಜನವಲಿ, ಎ.ಎಂ.ಮದರಿ, ಎ.ಬಿ.ಕೆಂಚರಡ್ಡಿ, ಡಾ.ವಿ.ಬಿ.ರಡ್ಡೇರ, ಡಾ. ಮಹಾಂತೇಶ ಮಲ್ಲನಗೌಡರ, ಬಸವರಾಜ ಹೂಗಾರ, ಬಸವರಾಜ ಸೂಳಿಭಾವಿ, ಅನಿಲ ಹೊಸಮನಿ ಮತ್ತಿತರರು ಇದ್ದರು.
ಶರಣು ಶೆಟ್ಟರ್ ಕಾರ್ಯಕ್ರಮ ಸಂಯೋಜಿಸಿದರು.
ಪುಸ್ತಕ ಪ್ರದರ್ಶನದಲ್ಲಿ ಗದಗಿನ ಲಡಾಯಿ, ಕವಲಕ್ಕಿಯ ಕವಿ ಪ್ರಕಾಶನ, ಗಣೇಶ ಅಮೀನಗಡ ಅವರ ಕವಿತಾ ಪ್ರಕಾಶನ, ಅಭಿನವ, ಕ್ರಿಯಾ, ಜನಶಕ್ತಿ ಸೇರಿದಂತೆ ನಾಡಿನ ಪ್ರಮುಖ ಪ್ರಕಾಶನಗಳು ಮೇಳದಲ್ಲಿವೆ.
ಕಾಳಪ್ಪ ಪತ್ತಾರ ಚಿತ್ರಕಲಾ ಪ್ರದರ್ಶನ ಮಳಿಗೆ
ಭಾನಾಪುರದ ಹೆಸರಾಂತ ಕಲಾವಿದ ಕಾಳಪ್ಪ ಪತ್ತಾರ ಹೆಸರಿನಲ್ಲಿ ಆಯೋಜಿಸಿರುವ ಚಿತ್ರಕಲಾ ಪ್ರದರ್ಶನವನ್ನು, ಬಿ.ಮಾರುತಿ, ಏಕಪ್ಪ ಚಿತ್ರಗಾರ, ಪ್ರಕಾಶ ಕಂದಕೂರ ಹಾಗೂ ಶರಣಪ್ಪ ವಡಿಗೇರಿ ಅವರು ಸಸಿಗೆ ನೀರೆರೆದು ಉದ್ಘಾಟಿಸಿದರು. ರುದ್ರಪ್ಪ ಭಂಡಾರಿ ಕಾರ್ಯಕ್ರಮ ಸಂಯೋಜಿಸಿದರು.