ಒಳಮೀಸಲಾತಿಗೆ ಆಗ್ರಹಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ

ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಕೆ

ಶಿವಮೊಗ್ಗ : ಮಾದರ ಮಹಾಸಭಾ ಹಾಗೂ ಅಲೆಮಾರಿ ಸಂಘಟನೆ ಹಾಗೂ ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಒಳಮೀಸಲಾತಿಗೆ ಅನುಷ್ಠಾನಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ನಡೆಸಲಾಯಿತು. 

ಪರಿಶಿಷ್ಟ ಜಾತಿಯ ಮಾದಿಗ ಸಂಬಂಧಿತ ಜಾತಿಗೆ ಶೇಕಡಾ 6 ಒಳಮೀಸಲಾತಿ ನೀಡಬೇಕು ಮತ್ತು ಸರ್ಕಾರ ಡಿಪಿಆರ್ ಸಿದ್ಧಪಡಿಸಿರುವ 56342 ಹುದ್ದೆಗಳನ್ನು ಒಳಮೀಸಲಾತಿ ಜಾರಿ ಮಾಡಿ ನೇಮಕಾತಿ ಮಾಡಿಕೊಳ್ಳಬೇಕು ಎಂದು ಈ ಸಂದರ್ಭದಲ್ಲಿ ಸರ್ಕಾರವನ್ನು ಆಗ್ರಹಿಸಲಾಯಿತು. 

ಮಹಾ ನಗರ ಪಾಲಿಕೆಯ ಆವರದಲ್ಲಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಶಿವಪ್ಪ ನಾಯಕ ವೃತ್ತದಿಂದ  ಗೋಪಿ ವೃತ್ತದ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಯ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಯಿತು.ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.

 ಈ ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷರಾದ  ಶಿವಾಜಿ ಹೆಚ್, ಪ್ರಧಾನ ಕಾರ್ಯದರ್ಶಿ ತೇಜೇಶ್ ರಾಮಚಂದ್ರ, ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಎನ್ ಗೋವಿಂದ,ಶಿವಣ್ಣ,ಟೆಲೆಕ್ಸ್ ರವಿಕುಮಾರ್,ಕುಮಾರಸ್ವಾಮಿ ಆರ್ ,ವಿಜಯ್, ಸೂಲಯ್ಯ,ರಂಗಪ್ಪ,ಏ.ಕೆ ಅಣ್ಣಪ್ಪ, ಮಂಜುನಾಥ್ ಎಸ್ ಪ್ರಭು ಹೆಚ್ ಎನ್,ಅಣ್ಣಪ್ಪ ಕೆ.ತ್ಯಾಜವಳ್ಳಿ ಚಂದ್ರಪ್ಪ,ನಿಖಿಲ್ ಮೂರ್ತಿ,ಪ್ರಶಾಂತ್ ಕುಮಾರ್, ಶ್ರೀಧರ್ ಎಲ್,ಸತೀಶ್ ಕೆ,ರಾಮ್ ಕುಮಾರ್ ಆರ್,ಸುನೀಲ್ ಎನ್,ನಿರಂಜನ್ ಮೂರ್ತಿ ಆರ್ ಕೆ,ಅನೂಪ್ ವಿ,ಸುರೇಶ್ ಪಿ,ನವೀನ್ ಎಲ್, ರವಿಕುಮಾರ್,ಮಲ್ಲಿಕಾರ್ಜುನ ಸ್ವಾಮಿ ಹೆಚ್ ಆರ್,ಗಾಜನೂರು ನಾಗರಾಜ್,ನಾಗರಾಜ್ ಎಸ್,ರವಿಕಿರಣ್ ಆರ್, ಶಿವಪ್ರಸಾದ್ ಕೆ,ಕಿಶೋರ್ ಕುಮಾರ್ ,ಮಂಜಪ್ಪ ಬೀರನಕೆರೆ, ವಿಶ್ವನಾಥ್ ಅನಿಲ್ ಆರ್,ಪೌರಕಾರ್ಮಿಕ ಸಂಘದ ಪದಾಧಿಕಾರಿಗಳು,ಪೌರಕಾರ್ಮಿಕರು ,ವಕೀಲರು ಹಲವರು ಪಾಲ್ಗೊಂಡಿದ್ದರು.

More articles

Latest article

Most read