ಹಾಸನ : ತಾಳಿ ಕಟ್ಟುವಾಗ ಮದುವೆ ಬೇಡ ಎಂದು ವಧು ಹಟ ಹಿಡಿದ ಕಾರಣ ಕೊನೆ ಕ್ಷಣದಲ್ಲಿ ಮದುವೆ ರದ್ದಾದ ಘಟನೆ ಹಾಸನದಲ್ಲಿ ನಡೆದಿದೆ. ನಾನು ಬೇರೆ ಹುಡುಗನನ್ನು ಪ್ರೀತಿಸುತ್ತಿದ್ದು ಮದುವೆ ಬೇಡವೇ ಬೇಡ ಎಂದು ಹಠ ಹಿಡಿದಿದ್ದಾಳೆ. ಹಾಸನ ನಗರದ ಶ್ರೀ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಈ ಘಟನೆ ನಡೆದಿದೆ.
ಹಾಸನ ತಾಲ್ಲೂಕಿನ, ಬೂವನಹಳ್ಳಿ ಗ್ರಾಮದ ಪಲ್ಲವಿ ಹಾಗೂ ಆಲೂರು ತಾಲ್ಲೂಕಿನ ವೇಣುಗೋಪಾಲ.ಜಿ ಅವರ ವಿವಾಹ ಇಂದು ಬೆಳಗ್ಗೆ ನಡೆಯಬೇಕಿತ್ತು. ಕಲ್ಯಾಣಮಂಟಪದಲ್ಲಿ ಸಂಭ್ರಮದ ವಾತಾವರಣವಿತ್ತು. ಪೂಜೆ ಮತ್ತಿತರ ಕಾರ್ಯಕ್ರಮಗಳು ನಡೆಯುತ್ತಿದ್ದವು. ಮಾಂಗಲ್ಯಧಾರಣೆಗೆ ಪುರೋಹಿತರು ಹೇಳಿದಾಗ ವಧು ಪಲ್ಲವಿ ಮದುವೆ ಬೇಡವೇ ಬೇಡ ಎಂದಿದ್ದಾಳೆ.
ಮುಹೂರ್ತ ನಡೆಯುವ ಸಂದರ್ಭದಲ್ಲಿ ವೇಳೆ ಯುವತಿಗೆ ಮೊಬೈಲ್ ಕರೆಯೊಂದು ಬಂದಿದೆ. ಅಗ ಪ್ಲಲವಿ ಮದುವೆಯನ್ನು ನಿರಾಕರಿಸಿ ಕೊಟಡಿಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾಳೆ. ಪಲ್ಲವಿಯ ಮನವೊಲಿಸಲು ಪೋಷಕರು ಮತ್ತು ಬಂಧುಗಳು ಶತಾಯಗತಾಯ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ವಧು ವರನನ್ನು ಹರಸಲು ನೂರಾರು ಬಂಧುಮಿತ್ರರು ಆಗಮಿಸಿದ್ದರು. ಕೊನೆಯ ಕ್ಷಣದಲ್ಲಿ ಹೈಡ್ರಾಮ ನಡೆದಿದೆ. ಮಗಳ ಈ ವರ್ತನೆಗೆ ಪೋಷಕರು ಕಣ್ಣೀರಿಟ್ಟಿದ್ದಾರೆ. ವರ ವೇಣುಗೋಪಾಲ್ ಸರ್ಕಾರಿ ಶಾಲೆ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದರೆ ಪಲ್ಲವಿ ಸ್ನಾತಕೋತ್ತರ ಪದವಿ ಓದಿದ್ದಾರೆ.