Sunday, September 8, 2024

ವಿಶ್ವದ ಅತ್ಯುತ್ತಮ ಬೀಫ್ ಉತ್ಪಾದನೆ ನನ್ನ ಗುರಿ : ಮಾರ್ಕ್ ಝುಕರ್ ಬರ್ಗ್

Most read

ಹಸುಗಳನ್ನು ಸಾಕುವುದು ಮಾತ್ರವಲ್ಲದೆ ಅವುಗಳಿಗೆ ಮಕಾಡಾಮಿಯಾ ಒಣ ಹಣ್ಣುಗಳು ಮತ್ತು ಬಿಯರ್ ಕುಡಿಸಿ ಬೆಳೆಸುವ ಮೂಲಕ ವಿಶ್ವದ ಅತ್ಯುತ್ತಮ ಗೋಮಾಂಸ ಉತ್ಪಾದಿಸಬಹುದು ಎಂದು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನ ಮುಖ್ಯಸ್ಥ ಟೆಕ್ ಬಿಲಿಯನೇರ್ ಮಾರ್ಕ್ ಜುಕರ್‌ಬರ್ಗ್ ಹೇಳಿದ್ದಾರೆ.

ಬುಧವಾರ ತಮ್ಮ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ಪೋಸ್ಟ್‌ನಲ್ಲಿ ಮಾರ್ಕ್ ಜುಕರ್‌ಬರ್ಗ್ ಮಾರ್ಬಲ್ಡ್ ಗೋಮಾಂಸ ಊಟ ತಿನ್ನುತ್ತಿರುವುದನ್ನು ಪೋಟೋ ಶೇರ್ ಮಾಡಿ,  “ಗೋವುಗಳನ್ನು ಬೆಳೆಸುವುದು ಮಾತ್ರವಲ್ಲದೆ ಅವುಗಳ ಆಹಾರ ಶೈಲಿಯಲ್ಲಿ ಬದಲಾವಣೆ ಇರಬೇಕು. ಆಗ ಮಾತ್ರ ವಿಶ್ವದ ಉತ್ತಮ ಗುಣಮಟ್ಟದ ಗೋಮಾಂಸ ಉತ್ಪಾದಿಸಬಹುದು” ಎಂದು ಹೇಳಿಕೊಂಡಿದ್ದಾರೆ

ಮಾರ್ಕ್‌ ಅವರ ಪೋಸ್‌ನಲ್ಲಿ, “ಕೌವೈನಲ್ಲಿರುವ ಕೊಯೊಲೌ ರಾಂಚ್‌ನಲ್ಲಿ ವಾಗ್ಯು ಮತ್ತು ಆಂಗಸ್ ಎಂಬ ಜಾನುವಾರು ತಳಿಗಳನ್ನು ಸಾಕಲು ಪ್ರಾರಂಭಿಸಿದೆ. ನನ್ನ ಗುರಿ ಏನಂದ್ರೆ, ಪ್ರಪಂಚದಲ್ಲೇ ಅತ್ಯುನ್ನತ ಗುಣಮಟ್ಟದ ಗೋಮಾಂಸವನ್ನು ಉತ್ಪಾದಿಸುವುದು. ಜಾನುವಾರುಗಳಿಗೆ ಮಕಾಡಾಮಿಯಾ ಡ್ರೈ ಫ್ರೂಟ್ಸ್‌ ಮತ್ತು ಬಿಯರ್ ನೀಡಲಾಗುತ್ತದೆ. ಅಲ್ಲದೆ, ಪ್ರತಿ ಹಸು ಪ್ರತಿ ವರ್ಷವೂ 5,000-10,000 ಪೌಂಡ್‌ಗಳಷ್ಟು ಆಹಾರವನ್ನು ತಿನ್ನುತ್ತದೆ. ಆದ್ದರಿಂದ ಬಹಳಷ್ಟು ಎಕರೆಗಳಷ್ಟು ಮಕಾಡಾಮಿಯಾ ಮರಗಳನ್ನು ನೆಡಲು ನನ್ನ ಹೆಣ್ಣುಮಕ್ಕಳು ಸಹಾಯ ಮಾಡುತ್ತಾರೆ. ನಾವು ನಮ್ಮ ಗುರಿಯ ಆರಂಭದಲ್ಲಿದ್ದೇವೆ. ನನ್ನ ಎಲ್ಲ ಯೋಜನೆಗಳ ಪೈಕಿ, ಇದು ಅತ್ಯಂತ ವಿಶೇಷವಾದದ್ದು” ಎಂದು ಹೇಳಿಕೊಂಡಿದ್ದಾರೆ.

More articles

Latest article