ಸಿನಿಮಾ ಪ್ರೇಮಿಗಳನ್ನು ಕೇಳಿದಾಗ ಹೆಚ್ಚು ಇಷ್ಟಪಡುವಂತ ಮಲಯಾಳಂ ಸಿನಿಮಾಗಳ ಬಗ್ಗೆಯೇ ಹೆಚ್ವು ಮಾತನಾಡುತ್ತಾರೆ. ಅಲ್ಲಿ ಕೊಡುವ ಕಂಟೆಂಟ್ ಗಳು ಎಲ್ಲರಿಗೂ ಇಷ್ಟವಾಗುತ್ತವೆ. ಸಣ್ಣ ಸಣ್ಣ ವಿಚಾರಗಳನ್ನು ಇಟ್ಟುಕೊಂಡು ಮನಸ್ಸಿಗೆ ನಾಟುವಂತೆ ಕಥೆ ಎಣೆಯುತ್ತಾರೆ. ಹೀಗಾಗಿಯೇ ಮಲಯಾಳಂ ಇಂಡಸ್ಟ್ರಿ ಬಿಸಿನೆಸ್ ಮಾಡುವುದರಲ್ಲೂ ಮುಂದಿರುತ್ತೆ. ಇದೀಗ ನಾಲ್ಕೇ ತಿಂಗಳಲ್ಲಿ ಸುಮಾರು ಒಂದು ಸಾವಿರ ಕೋಟಿ ಬಿಸಿನೆಸ್ ಮಾಡಿ ಎಲ್ಲಾ ಇಂಡಸ್ಟ್ರಿ ತಿರುಗಿ ನೋಡುವಂತೆ ಮಾಡಿದೆ.
ಕಳೆದ ನಾಲ್ಕು ತಿಂಗಳಲ್ಲಿ ಮಲಯಾಳಂನಲ್ಲಿ ರಿಲೀಸ್ ಆದಂತ ಸಿನಿಮಾ 985 ಕೋಟಿ ಬಿಸಿನೆಸ್ ಮಾಡಿದೆ. ಫೆಬ್ರವರಿ 22ರಂದು ಮಂಜುಮ್ಮಲ್ ಬಾಯ್ಸ್ ಸಿನಿಮಾ ರಿಲೀಸ್ ಆಗಿತ್ತು. ಈ ಸಿನಿಮಾ ಬಿಸಿನೆಸ್ ಮಾಡಿದ್ದು 250 ಕೋಟಿ. ಜೊತೆಗೆ ಮಲಯಾಳಂ ಸಿನಿಮಾ ಇಂಡಸ್ಟ್ರಿಯಲ್ಲಿಯೇ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಇದಾಗಿದೆ. ಆವೇಶ ಸಿನಿಮಾ ಕೂಡ 151.95 ಕೋಟಿ ಕಲೆಕ್ಷನ್ ಮಾಡಿದೆ. ಒಳ್ಳೆಯ ರೆಸ್ಪಾನ್ಸ್ ಕೂಡ ಸಿಕ್ಕಿತ್ತು. ಆಡು ಜೀವಿತಂ ಕೂಡ 155 ಕೋಟಿ ಕಲೆಕ್ಷನ್ ಮಾಡಿದೆ.
ಪ್ರೇಮುಲು ಸಿನಿಮಾ ಫೆಬ್ರವರಿ 9ರಂದು ಸಿನಿಮಾ ಬಿಡುಗಡೆಯಾಗಿತ್ತು. ಇದು 136 ಕೋಟಿ ಗಳಿಕೆ ಮಾಡಿತ್ತು. ಮಮ್ಮೂಟಿ ನಟನೆಯ ಬ್ರಮಯುಗಂ ಕೂಡ 58.96 ಕೋಟಿ ಕಲೆಕ್ಷನ್ ಮಾಡಿದೆ. ವರ್ಶಂಗಳಕ್ಕು ಶೇಶಂ ಸಿನಿಮಾ 81 ಕೋಟಿ ಬಿಸಿನೆಸ್ ಮಾಡಿದೆ. ಈ ಮೂಲಕ ನಾಲ್ಕು ತಿಂಗಳಲ್ಲಿ ರಿಲೀಸ್ ಆದ ಒಂದೊಂದು ಸಿನಿಮಾ ಕೂಡ ಕೋಟಿ ಕೋಟಿ ಕಲೆಕ್ಷನ್ ಮಾಡಿದೆ. ಮಲಯಾಳಂ ಇಂಡಸ್ಟ್ರಿಯ ಬಿಸಿನೆಸ್ ನೋಡಿ ಎಲ್ಲಾರೂ ಒಂದು ಕ್ಷಣ ತಿರುಗಿ ನೋಡುವಂತೆ ಆಗಿದೆ. ಆದರೆ ಆ ಕಥೆಗಳು ಕೂಡ ಜನರನ್ನ ಆಕರ್ಷಿಸುವಂತೆಯೇ ಇರಲಿದೆ. ಮಲಯಾಳಂ ಕತೆಗಳ ಕಡೆಗೂ ಬೇರೆ ಇಂಡಸ್ಟ್ರಿ ಗಮನ ಕೊಡಬೇಕಿದೆ.