ಮಕ್ಕಳಿಗೆ ಹೀಗೆ ಮೊಟ್ಟೆ ಮ್ಯಾಗಿ ಮಾಡಿಕೊಟ್ಟು ನೋಡಿ : ಮತ್ತೆ ಮತ್ತೆ ಕೇಳ್ತಾರೆ..!

Most read

ಆಲ್ಮೋಸ್ಟ್ ಎಲ್ಲಾ ಮಕ್ಕಳಿಗೂ ಮ್ಯಾಗಿ ಎಂದರೆ ತುಂಬಾನೇ ಇಷ್ಟವಾಗುತ್ತದೆ. ಮಕ್ಕಳಿಗೆ ಮಾತ್ರವಲ್ಲ ದೊಡ್ಡವರಿಗೂ ಇಷ್ಟ. ಅದರಲ್ಲೂ ಬೆಸ್ಟ್ ಬ್ಯಾಚುಲರ್ ಫುಡ್ ಇದು. ಹಾಗಾದ್ರೆ ಮ್ಯಾಗಿನಲ್ಲಿ ಬರೀ ಮ್ಯಾಗಿ ಮಾಡೋದಲ್ಲ. ವೆರೈಟಿ ಮಾಡಿಕೊಂಡು ತಿನ್ನುವುದು ಸೂಪರ್ ಆಗಿರುತ್ತೆ. ಇವತ್ತು ಮ್ಯಾಗಿ ಆಮ್ಲೇಟ್ ಮಾಡೋದೇಗೆ ಅಂತ ನೋಡ್ಕೊಳಿ.

ಬೇಕಾಗುವ ಪದಾರ್ಥಗಳು:

ಮೊಟ್ಟೆ
ಮ್ಯಾಗಿ
ಮಸಾಲ
ಟಮೋಟೋ
ಕ್ಯಾರೆಟ್
ಕ್ಯಾಪ್ಸಿಕಂ
ಖಾರದ ಪುಡಿ
ಉಪ್ಪು
ಎಣ್ಣೆ

ಮಾಡುವ ವಿಧಾನ: ಮೊದಲಿಗೆ ಬಾಂಡಲಿಗೆ ಸ್ವಲ್ಪ ಎಣ್ಣೆ ಹಾಕಿಕೊಳ್ಳಿ. ಕಾದ ನಂತರ ಅರ್ಧ ಈರುಳ್ಳಿ ಹಾಕಿ, ಸಣ್ಣಗೆ ಹೆಚ್ಚಿದ ಸ್ವಲ್ಪ ಹಸಿಮೆಣಸಿನಕಾಯಿ, ಸ್ವಲ್ಪ ಕ್ಯಾಪ್ಸಿಕಂ, ಟಮೋಟೋ ಹಾಕಿ ಕೊಂಚ ಫ್ರೈ ಮಾಡಿ. ಬಳಿಕ ಒಂದು ಸ್ಪೂನ್ ನಷ್ಟು ಅಚ್ಚಖಾರದ ಪುಡಿ, ಸ್ವಲ್ಪ ಗರಂ ಮಸಾಲ ಹಾಕಿ ಫ್ರೈ ಮಾಡಿಕೊಳ್ಳಿ ಬಳಿಕ ಸ್ವಲ್ಪ ನೀರು ಹಾಕಿ. ಒಂದು ಕುದಿ ಬಂದ ಮೇಲೆ ಮ್ಯಾಗಿ ಹಾಕಿ ಮುಚ್ಚಳ ಮುಚ್ಚಿ. ಮ್ಯಾಗಿ ಬೆಂದ ಮೇಲೆ ಅದಕ್ಕೆ ಮ್ಯಾಗಿ ಮಸಾಲ ಆಡ್ ಮಾಡಿ. ಅದಕ್ಕೆ ಎರಡು ಬೆಂದ ಮೊಟ್ಟೆಯನ್ನು ತುರಿದು ಅಥವಾ ಸ್ಮಾಶ್ ಮಾಡಿ ಹಾಕಿ ಮಿಕ್ಸ್ ಮಾಡಿ. ಮೊಟ್ಟೆ ಮ್ಯಾಗಿ ರೆಡಿ.

ಈಗ ಆಮ್ಲೇಟ್ ಮಾಡಿಕೊಳ್ಳಲು ಎರಡು ಮೊಟ್ಟೆಯನ್ನು ಒಂದು ಬೌಲ್ ಗೆ ಹಾಕಿಕೊಳ್ಳಿ. ಅದನ್ನು ಚೆನ್ನಾಗಿ ಮಿಕ್ಸ್ ಮಾಡಿ, ರುಚಿಗೆ ತಕ್ಕಷ್ಟು ಉಪ್ಪು, ಕಾಲು ಭಾಗದಷ್ಟು ಈರುಳ್ಳಿ, ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಟಮೋಟೋ ಹಾಕಿ ಎಗ್ ಅನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಕಾದ ತವದ ಮೇಲೆ ಎಣ್ಣೆ ಹಾಕಿ ಆಮ್ಲೇಟ್ ಬಿಡಿ. ಆಮ್ಲೇಟ್ ಬೆಂದ ಮೇಲೆ ಮ್ಯಾಗಿಯನ್ನು ಅದರ ಮೇಲೆ ಹಾಕಿ. ಅದರ ಮೇಲೆ ಸ್ವಲ್ಪ ಟಮೋಟೋ, ಕ್ಯಾರೆಟ್ ತುರಿ, ಕೊತ್ತಂಬರಿ ತುರಿಯನ್ನು ಉದುರಿಸಿದರೆ ಮ್ಯಾಗಿ ಆಮ್ಲೇಟ್ ರೆಡಿ.

More articles

Latest article