Saturday, July 27, 2024

ಜಪಾನ್‌ನಲ್ಲಿ ಮತ್ತೆ ಪ್ರಬಲ ಭೂಕಂಪ! : ನೂರಾರು ಜನರು ಸಾವು ; ಜನಜೀವನ ಅಸ್ತವ್ಯಸ್ತ!

Most read

ಮಧ್ಯ ಜಪಾನ್‌ನಲ್ಲಿ 6.0 ತೀವ್ರತೆಯ ಭೂಕಂಪ ಸಂಭವಿಸಿದೆ. ಆದರೆ ಸುನಾಮಿ ಎಚ್ಚರಿಕೆಯನ್ನು ಇನ್ನೂ ನೀಡಲಾಗಿಲ್ಲ ಎಂದು ಸರ್ಕಾರವು ಸುದ್ದಿ ಸಂಸ್ಥೆ AFP ತಿಳಿಸಿದೆ.

ಜನವರಿ 1 ರಂದು ಮಧ್ಯ ಜಪಾನ್‌ನ ಕೆಲವು ಭಾಗಗಳಲ್ಲಿ ಪ್ರಬಲ ಭೂಕಂಪ ಆಗಿತ್ತು. ಈಗ ಅದೇ ಭಾಗದಲ್ಲಿ ಭೂಕಂಪ ಸಂಭವಿಸಿದೆ ಎಂದು ಜಪಾನ್ ಹವಾಮಾನ ಏಜೆನ್ಸಿ ತಿಳಿಸಿದೆ. 200ಕ್ಕೂ ಹೆಚ್ಚು ಮಂದಿ ಸಾವನಪ್ಪಿದ್ದು, 100 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೊಸ ವರ್ಷದಂದು 7.5 ತೀವ್ರತೆಯ ಭೂಕಂಪದಿಂದ ಕಟ್ಟಡಗಳನ್ನು ನಾಶವಾಗಿತ್ತು. ಬೆಂಕಿಯನ್ನು ಕೂಡ ಹೊತ್ತೊಕೊಂಡಿತ್ತು.

ರಕ್ಷಣಾ ಕಾರ್ಯ ಮುಂದುವರೆದಿದ್ದು ಸುಮಾರು 3500 ಜನರು ಭೂಕಂಪದ ಜಾಗದಲ್ಲಿ ಸಿಲುಕಿರಬಹುದು. ಈವರೆಗೆ ಇಶಿಕವಾ ಪ್ರದೇಶದಲ್ಲಿ 202 ಜನರು ಮೃತಪಟ್ಟಿದ್ದು,  ಕಳೆದ ದಿನ  102 ಸಾವನಪ್ಪಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುಮಾರು 30,000 ಜನರು 400 ಸರ್ಕಾರಿ ಆಶ್ರಯಗಳಲ್ಲಿ ವಾಸಿಸುತ್ತಿದ್ದರೆ, ಸುಮಾರು 60,000 ಮನೆಗಳು ನೀರಿಲ್ಲದ್ದಂತಾಗಿದೆ. 15,600 ಮನೆಗಳಲ್ಲಿ ವಿದ್ಯುತ್ ಸರಬರಾಜು ಇಲ್ಲದಂತಾಗಿದೆ ಇದನ್ನು ಪರಿಹರಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

More articles

Latest article