ಮಹದಾಯಿ ನೀರು ಬಳಕೆ: ಕರ್ನಾಟಕ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ಗೋವಾ ನಿರ್ಧಾರ

ಪಣಜಿ: ಮಹದಾಯಿ ನದಿ ನೀರನ್ನು ತಿರುಗಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ನಡೆಸುತ್ತಿರುವ ಕ್ರಮಗಳನ್ನು ಉದ್ದೇಶಿಸಿ ಸುಪ್ರೀಂಕೋರ್ಟ್‌ ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುವುದಾಗಿ ಗೋವಾ ತಿಳಿಸಿದೆ. ಮುಖ್ಯಮಂತ್ರಿ ಪ್ರಮೋದ್ ಸಾವಂತ್ ವಿಧಾನಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಮಹದಾಯಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಪಕ್ಷೇತರ ಸದಸ್ಯ ಅಲೆಕ್ಸಿಯೊ ರೆಜಿನಾಲ್ಡ್‌ ಲಾರೆನ್ತೋ ಅವರು ಕೇಳಿದ ಪ್ರಶ್ನೆಗೆ ಸಾವಂತ್ ಉತ್ತರಿಸಿದ್ದಾರೆ. ಮಹದಾಯಿ ನದಿ ನೀರನ್ನು ತಿರುಗಿಸುವ ಚಟುವಟಿಕೆಯಲ್ಲಿ ಕರ್ನಾಟಕ ನಿರಂತರವಾಗಿ ತೊಡಗಿದೆ. ಕರ್ನಾಟಕದ ಗಡಿಭಾಗದ ಒಳಗೆ ಕಾಮಗಾರಿ ನಡೆಸುತ್ತಿರುವ ಕಾರಣದಿಂದ ನಿಯಂತ್ರಿಸಲು ನಮಗೆ ಸಾಧ್ಯವಾಗುತ್ತಿಲ್ಲ. ಆದರೆ, ಮಹದಾಯಿ ನದಿ ನೀರನ್ನು ತಿರುಗಿಸಲು ಕರ್ನಾಟಕ ಮಾಡುವ ಪ್ರತಿ ಪ್ರಯತ್ನಕ್ಕೂ ತಡೆಯೊಡ್ಡುವ ಯತ್ನ ಮಾಡುತ್ತಿದ್ದೇವೆ ಎಂದು ಸದನಕ್ಕೆ ಭರವಸೆ ನೀಡಿದ್ದಾರೆ.

ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರನ್ನು ನಾನು ಖುದ್ದು ಭೇಟಿಯಾಗಿ, ಈ ವಿಚಾರದ ಕುರಿತು ಚರ್ಚಿಸಿದ್ದೇನೆ. ನದಿ ನೀರು ತಿರುಗಿಸುವ ಚಟುವಟಿಕೆಗಳನ್ನು ನಡೆಸಲು ಕರ್ನಾಟಕಕ್ಕೆ ಅನುಮತಿ ನೀಡುವುದಿಲ್ಲ. ಈ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿಯೂ ಕರ್ನಾಟಕದ ವಿರುದ್ಧ ಅರ್ಜಿ ಸಲ್ಲಿಸಲಾಗುವುದು ಎಂದು ಸಾವಂತ್ ತಿಳಿಸಿದ್ದಾರೆ.

More articles

Latest article

Most read