ಬೆಂಗಳೂರು: ಬೆಂಗಳೂರಿನ ಕೆಂಗೇರಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದ್ವಚಕ್ರ ವಾಹನಕ್ಕೆ ಸಿಮೆಂಟ್ ಮಿಕ್ಸರ್ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ದಂಪತಿ ಸ್ತಳದಲ್ಲೇ ಅಸು ನೀಗಿದ್ದಾರೆ.
ಕೆ.ಜಿ.ಹಳ್ಳಿಯ ಅಬ್ದುಲ್ ಬಾಷಾ (68) ಮತ್ತು ಅವರ ಪತ್ನಿ ಸಬಾನಾ ಬೇಗಂ (55) ಮೃತ ದುರ್ದೈವಿಗಳು. ಘಟನೆ ಸಂಬಂಧ ಲಾರಿ ಚಾಲಕ ಜಾರ್ಖಂಡ್‌ನ ಪ್ರೀತಮ್ ಚೌಹಾಣ್ (35) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಕೆ.ಜಿ.ಹಳ್ಳಿಯಿಂದ ಉತ್ತರಹಳ್ಳಿಯ ಕೋಣಸಂದ್ರದ ದರ್ಗಾಕ್ಕೆ ದ್ವಿಚಕ್ರ ವಾಹನದಲ್ಲಿ ಅಬ್ದುಲ್ ಬಾಷಾಮಮತ್ತು ಸಬಾನಾ ಬೇಗಂ ದಂಪತಿ ಹೋಗುತ್ತಿದ್ದರು. ಅದೇ ಮಾರ್ಗದಲ್ಲಿ ಲಾರಿ ಸಾಗುತ್ತಿತ್ತು. ಮಧು ಪೆಟ್ರೋಲ್ ಬಂಕ್‌ನ ಕೋಡಿಪಾಳ್ಯದ ಸರ್ಕಲ್ ಬಳಿ ಅಬ್ದುಲ್ ಬಾಷಾ ಅವರು ಬಲಕ್ಕೆ ಬೈಕ್ ತಿರುಗಿಸಿದ್ದಾರೆ. ಹಿಂದಿನಿಂದ ವೇಗವಾಗಿ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಕೆಳಗೆ ಬಿದ್ದ ದಂಪತಿ ಮೇಲೆ ಲಾರಿ ಚಕ್ರಗಳು ಹರಿದು, ತೀವ್ರ ರಕ್ತಸ್ರಾವದಿಂದ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಬೈಕ್‌ಗೆ ಡಿಕ್ಕಿ ಹೊಡೆದ ಬಳಿಕ, ಲಾರಿ ನಿಯಂತ್ರಿಸಲು ಸಾಧ್ಯವಾಗದೆ ಸುಮಾರು 200 ಮೀಟರ್ ದೂರದವರೆಗೆ ಬೈಕ್ ಅನ್ನು ಚಾಲಕ ಎಳೆದೊಯ್ದಿದ್ದಾನೆ. ಅಪಘಾತದ ದೃಶ್ಯ ಸಮೀಪದ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.