ಸುಳ್ಳು ಹೇಳಿ ಟ್ರಂಪ್‌ ಭೇಟಿಗೆ ಯತ್ನಿಸಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ; ಮುಜುಗರಕ್ಕೀಡಾದ ಭಾರತ, ಅಮಾನತಿಗೆ ಆಗ್ರಹ

Most read

ಬೆಂಗಳೂರು: ಪಾಕಿಸ್ತಾನ ವಿರುದ್ಧಭಾರತ ನಡೆಸಿದ ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಕುರಿತು ವಿಶ್ವಕ್ಕೆ ಮನವರಿಕೆ ಮಾಡಿಕೊಡಲು ಕೇಂದ್ರ ಸರ್ಕಾರ ವಿವಿಧ ದೇಶಗಳಿಗೆ ನಿಯೋಗಗಳನ್ನು ಕಳುಹಿಸಿತ್ತು. ಅಮೆರಿಕಕ್ಕೆ ಸಂಸದ ಶಶಿ ತರೂರ್‌ ಅವರ ನೇತೃತ್ವದ ನಿಯೋಗ ಹೋಗಿತ್ತು. ಆದರೆ ಈ ನಿಯೋಗದಲ್ಲಿದ್ದ ಬಿಜೆಪಿ ಮುಖಂಡ ಬೆಂಗಳೂರು ದಕ್ಷಿಣ ಕ್ಷೇತ್ರ ಸಂಸದ ತೇಜಸ್ವಿ ಸೂರ್ಯ ಮಾಡಿದ ಎಡವಟ್ಟಿನಿಂದ ಈ ನಿಯೋಗ ಮುಜುಗರಕ್ಕೀಡಾದ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.

ಅಮೆರಿಕಕ್ಕೆ ತೆರಳಿದ ನಿಯೋಗದಲ್ಲಿದ್ದ ಮತ್ತೊಬ್ಬ ಸಂಸದ ಮಿಲಿಂದ್ ದಿಯೊರಾ ಅವರು ಡೊನಾಲ್ಡ್‌ ಟ್ರಂಪ್‌ ಜೂನಿಯರ್‌ ಅವರನ್ನು ಭೇಟಿಯಾಗಿದ್ದರು. ಈ ಭೇಟಿಗೆ ಟ್ರಂಪ್‌ ಅವರಿಂದ ಸಮಯ ಮತ್ತು ಅನುಮತಿ ಪಡೆದುಕೊಂಡಿದ್ದರು. ನಾನೇನೂ ಕಡಿಮೆ ಇಲ್ಲ, ನಾನೂ ಅವರನ್ನು ಭೇಟಿ ಮಾಡುವೆ ಎಂಬ ಹುಂಬತನದಿಂದ ತೇಜಸ್ವಿ ಸೂರ್ಯ ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ. ಆದರೆ ಅವರಿಗೆ ಜೂನಿಯರ್‌ ಟ್ರಂಪ್‌ ಅವರಿಂದ ಅನುಮತಿ ಸಿಕ್ಕಿಲ್ಲ. ಇದರಿಂದ ತೇಜಸ್ವಿ ಸುಮ್ಮನಾಗಲಿಲ್ಲ. ಬದಲಾಗಿ ಟ್ರಂಪ್‌ ಅವರನ್ನು ನೇರವಾಗಿ ಭೇಟಿ ಮಾಡುವ ಅನಿರೀಕ್ಷಿತ ಘೋಷಣೆ ಮಾಡಿದ್ದಾರೆ. ಅಮೆರಿಕದಲ್ಲಿದ್ದ ತನ್ನ ಗೆಳೆಯನ ನೆರವನ್ನು ಪಡೆದು ಟ್ರಂಪ್‌ ಅವರನ್ನು ಭೇಟಿ ಮಾಡಲು ಹೊರಟಿದ್ದಾರೆ.

ತೇಜಸ್ವಿ ಸೂರ್ಯ ಮತ್ತು ಅವರ ಗೆಳೆಯ ಇಬ್ಬರೂ ಟ್ರಂಪ್‌ ಅವರ ಫ್ಲೊರಿಡಾ ನಗರದಲ್ಲಿರುವ ಖಾಸಗಿ ನಿವಾಸ  ಮಾರ್‌ ಅ ಲಾಗೊ ಎಸ್ಟೇಟ್‌ ಗೆ ಹೊರಟಿದ್ದಾರೆ. ಈ ನಿವಾಸದಲ್ಲಿ ಟ್ರಂಪ್‌ 1985 ರಿಂದ ವಾಸಿಸುತ್ತಿದ್ದಾರೆ. ಇದೇನೂ ಸಾಮಾನ್ಯ ನಿವಾಸ ಅಲ್ಲ, ಅರಮನೆಯನ್ನೂ ಮೀರಿಸುವ ಬಂಗಲೆ. 62,500 ಚ.ಅಡಿಯಲ್ಲಿ ವಿಸ್ತರಿಸಿರುವ ಈ ಬಂಗಲೆಯಲ್ಲಿ 126 ಕೊಠಡಿಗಳಿವೆ. 1994 ರಲ್ಲಿ ಈ ಎಸ್ಟೇಟ್‌ ಅನ್ನು ಖಾಸಗಿ ಕ್ಲಬ್‌ ಆಗಿ ಪರಿವರ್ತಿಸಲಾಗಿದೆ. ಈ ಕ್ಲಬ್‌ ಗೆ ದುಬಾರಿ ಶುಲ್ಕವನ್ನು ವಿಧಿಸಲಾಗುತ್ತಿದೆ.

ಹೇಳಿ ಕೇಳಿ ಟ್ರಂಪ್‌ ಅಮೆರಿಕ ಅಧ್ಯಕ್ಷ. ಒಂದು ರೀತಿಯಲ್ಲಿ ವಿಲಕ್ಷಣ ಸ್ವಭಾವ ಹೊಂದಿರುವ ವ್ಯಕ್ತಿ. ಟ್ರಂಪ್‌ ತನ್ನ ಈ ಖಾಸಗಿ ನಿವಾಸದಲ್ಲಿ ಜಪಾನ್‌ ಮಾಜಿ ಪ್ರಧಾನಿ ಶಿಂಜೊ ಅಬೆ, ಚೀನಾ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್‌ ಅವರಂತಹ ದಿಗ್ಗಜರಿಗೆ ಔತಣ ನೀಡಿದ್ದಾರೆ. ಅವರು ಓರ್ವ ಸಂಸದನನ್ನು ಹತ್ತಿರಕ್ಕೆ ಬಿಟ್ಟುಕೊಂಡಾರೆಯೇ?

ಇಲ್ಲಿಗೆ ಹೋದ ತೇಜಸ್ವಿ ಸೂರ್ಯ ಟ್ರಂಪ್‌ ಬಳಿ ತನ್ನನ್ನು ಪರಿಚಯಿಸಿಕೊಳ್ಳುತ್ತಾ ಬಾರತ ಪ್ರಧಾನಿಯ ನಿಕಟವರ್ತಿ ಎಂದು ಹೇಳಿಕೊಂಡಿದ್ದಾರೆ. ಆದರೆ ಟ್ರಂಪ್‌ ಈ ಭೇಟಿಯನ್ನು ನಿರಾಕರಿಸಿದ್ದಾರೆ ಜತೆಗೆ ಅತ್ಯಂತ ಕಠಿಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಇದರಿಂದ ತೇಜಸ್ವಿ ಸೂರ್ಯ ಅವಮಾನಿತರಾಗಿದ್ದಾರೆ.

ಟ್ರಂಪ್ ಅವರು ಪ್ರಧಾನಿ ಮೋದಿ ಅವರ ಕಚೇರಿಯನ್ನು ಸಂಪರ್ಕಿಸಿದಾಗ ತೇಜಸ್ವಿ ಸೂರ್ಯ ಸುಳ್ಳು ಹೇಳುತ್ತಿರುವುದು ಬಯಲಾಗಿದೆ. ನಂತರ ತೇಜಸ್ವಿ ಸೂರ್ಯ ಅವರನ್ನು ತಮ್ಮ ನಿವಾಸದಿಂದ ಹೊರ ಹೋಗುವಂತೆ ಆದೇಶಿಸಲಾಗಿದೆ. ಪ್ರಧಾನಿ ಕಚೇರಿಯಿಂದಲೂ ಕೂಡಲೇ ಅಲ್ಲಿಂದ ಹೊರಟು ಬರುವಂತೆ ಸೂಚನೆ ನೀಡಲಾಗಿದೆ.

ಇದರಿಂದ ತೀವ್ರ ಮುಜುಗರಕ್ಕೊಳಗಾದ ತೇಜಸ್ವಿ ಸೂರ್ಯ ಭಾರತಕ್ಕೆ ಮೌನವಾಗಿ ಮರಳಿದ್ದಾರೆ. ಆದರೆ ಈ ಬೆಳವಣಿಗೆ ಅಥವಾ ತಾನು ಮಾಡಿದ ಎಡವಟ್ಟನ್ನು ಎಲ್ಲಿಯೂ ಬಾಯಿ ಬಿಟ್ಟಿಲ್ಲ ಆದರೆ ಸುದ್ದಿ ಹರಡದೆ ಇರಲು ಸಾಧ್ಯವೇ? ಸುದ್ದಿಗೂ ರೆಕ್ಕೆಗಳಿರುತ್ತವೆ. ಹೇಗೋ ಬಹಿರಂಗವಾಗಿದೆ. ತೇಜಸ್ವಿ ಸೂರ್ಯ ಅವರನ್ನು ರಾಷ್ಟ್ರಪತಿ ಭವನಕ್ಕೆ ಕರೆಯಿಸಿಕೊಂಡು ವಿವರಣೆ ಪಡೆದುಕೊಳ್ಳಲಾಗಿದೆ. ಪಕ್ಷ ದಹೈಕಮಾಂಡ್‌ ಕೂಡ ಇವರ ವರ್ತನೆಗೆ ಗರಂ ಆಗಿದೆ ಎಂದು ತಿಳಿದು ಬಂದಿದೆ.

ತೇಜಸ್ವಿ ವರ್ತನೆಗೆ ಖಂಡನೆ:

ತೇಜಸ್ವಿ ಸೂರ್ಯ ಅವರ ವರ್ತನೆ ಭಾರತ ದೇಶಕ್ಕೂ ಅವಮಾನ ಎಂದೇ ಪರಿಗಣಿಸಲಾಗಿದೆ. ಐಟಿಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಸಂಸದ ತೇಜಸ್ವಿ ಸೂರ್ಯ ವಿರುದ್ಧ ವಾಗ್ದಾಳಿ ನಡೆಸಿದ್ದು ಹಲವಾರು ಪ್ರಶ್ನೆಗಳಿಗೆ ಉತ್ತರಿಸುವಂತೆ ಆಗ್ರಹಪಡಿಸಿದ್ದಾರೆ. ಪ್ರೊಟೊಕಾಲ್‌ ಉಲ್ಲಂಘಿಸಿ ಅವರು ಹೋಗಿದ್ದು ಹೇಗೆ? ಈ ಭೇಟಿ ಕುರಿತು ಅವರು ವಿದೇಶಾಂಗ ಸಚಿವಾಲಯಕ್ಕೆ ಮಾಹಿತಿ ನೀಡಿದ್ದರೇ?  ಎಂದು ಪ್ರಶ್ನಿಸಿದ್ದಾರೆ.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಂಕರ್ ಗುಹಾ ದ್ವಾರಕನಾಥ್ ಪ್ರತಿಕ್ರಿಯಿಸಿ ಇಡೀ ರಾಷ್ಟ್ರವೇ ತಲೆ ತಗ್ಗಿಸುವಂತೆ ಮಾಡಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಪಡಿಸಿದ್ದಾರೆ. ಭಾರತದ ಸಂಸದರ ತಂಡ ಅಮೆರಿಕ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಸಂಸದ ತೇಜಸ್ವಿ ಸೂರ್ಯ ಮೂರ್ಖತನ ಪ್ರದರ್ಶಿಸಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿಶೇಷ ರಹಸ್ಯ ಸಂದೇಶ ಕಳುಹಿಸಿರುವುದಾಗಿ ಸುಳ್ಳು ಹೇಳಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ರನ್ನು ಭೇಟಿ ಮಾಡಲು ಪ್ರಯತ್ನಿಸಿ ವಿಫಲ ರಾಗಿದ್ದಾರೆ ಎಂದುಅವರು ಆಪಾದಿಸಿದ್ದಾರೆ.

ಟ್ರಂಪ್ ಅವರು ಪ್ರಧಾನಿ ಮೋದಿ ಅವರ ಕಚೇರಿಯನ್ನು ಸಂಪರ್ಕಿಸಿದಾಗ ತೇಜಸ್ವಿ ಸೂರ್ಯ ಸುಳ್ಳು ಹೇಳುತ್ತಿರುವುದು ಬಯಲಾಗಿದೆ. ನಂತರ ತೇಜಸ್ವಿ ಸೂರ್ಯ ಅವರನ್ನು ತಮ್ಮ ನಿವಾಸದಿಂದ ಹೊರ ಹೋಗುವಂತೆ ಆದೇಶಿಸಲಾಗಿದೆ. ಪ್ರಧಾನಿ ಕಚೇರಿಯಿಂದಲೂ ಕೂಡಲೇ ಅಲ್ಲಿಂದ ಹೊರಟು ಬರುವಂತೆ ಸೂಚನೆ ನೀಡಲಾಗಿದೆ.  ಪ್ರಧಾನಿ ಮೋದಿ ಅವರು ಬಿ.ಎಲ್. ಸಂತೋಷ್‌ ಅವರಿಗೆ ಕರೆ ಮಾಡಿ, ತೇಜಸ್ವಿ ಸೂರ್ಯ ಅವರಂತಹ ಮೂರ್ಖರನ್ನು ಏಕೆ ಸಂಸದರಾಗಿ ಮಾಡಿದ್ದೀರಿ ಎಂದು ಪ್ರಶ್ನಿಸಿದರು ಎಂದೂ ತಿಳಿದು ಬಂದಿದೆ ಎಂದು ಶಂಕರ್ ಗುಹಾ ಆಪಾದಿಸಿದ್ದಾರೆ.

More articles

Latest article