ಲೋಕಸಭಾ ಚುನಾವಣೆ| ಬಿಜೆಪಿಯ 2ನೇ ಪಟ್ಟಿ ಬಿಡುಗಡೆ : ಯಾರಿಗೆಲ್ಲ ಕೈ ತಪ್ಪಿತು ಟಿಕೆಟ್? ಹೊಸಮುಖಗಳಿಗೆ ಮಣೆ!

Most read

ಲೋಕಸಭಾ ಚುನಾವಣೆಗೆ(Lok Sabha Elections 2024) ಬಿಜೆಪಿಯ ಎರಡನೇ ಪಟ್ಟಿ ಪ್ರಕಟವಾಗಿದ್ದು, ಕರ್ನಾಟಕದ 28 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗಿದೆ. ಅದರಲ್ಲೂ ಮುಖ್ಯವಾಗಿ ಹಲವು ಹಾಲಿ ಸಂಸದರಿಗೆ ಟಿಕೆಟ್​ ಮಿಸ್ ಆಗಿದ್ದು, ಹೊಸ ಮುಖಗಳಿಗೆ ಮಣೆ ಹಾಕಿದೆ. 

ಲೋಕಸಭೆ ಚುನಾವಣೆ 2024ರ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದ್ದು, ಹಾಲಿ ಸಂಸದರಾದ ಪ್ರತಾಪ್‌ ಸಿಂಹ, ನಳಿನ್‌ ಕುಮಾರ್‌ ಕಟೀಲ್‌ ಸೇರಿ 8 ಸಂಸದರಿಗೆ ಟಿಕೆಟ್‌ ಕೈತಪ್ಪಿದೆ.

ಯಾವೆಲ್ಲಾ ಸಂಸದರಿಗೆ ಬಿಜೆಪಿ ಟಿಕೆಟ್‌ ಮಿಸ್‌?

ಬಳ್ಳಾರಿವೈ ದೇವೇಂದ್ರಪ್ಪ
ಮೈಸೂರುಪ್ರತಾಪ್‌ ಸಿಂಹ
ದಾವಣಗೆರೆಜಿಎಂ ಸಿದ್ದೇಶ್ವರ
ದಕ್ಷಿಣ ಕನ್ನಡನಳಿನ್‌ ಕುಮಾರ್‌ ಕಟೀಲ್‌
ಕೊಪ್ಪಳಕರಡಿ ಸಂಗಣ್ಣ ಅಮರಪ್ಪ
ಬೆಂಗಳೂರು ಉತ್ತರಡಿ.ವಿ.ಸದಾನಂದ ಗೌಡ
ತುಮಕೂರುಜಿಎಸ್‌ ಬಸವರಾಜು
ಚಾಮರಾಜನಗರವಿ. ಶ್ರೀನಿವಾಸ್‌ ಪ್ರಸಾದ್‌

ಈ ಸಂಸದರ ಬದಲು ಯಾರಿಗೆ ಟಿಕೆಟ್‌ ?

ಬಿ ಶ್ರೀರಾಮುಲುಬಳ್ಳಾರಿ
ಯದುವೀದ್‌ ಒಡೆಯರ್‌ಮೈಸೂರು
ಗಾಯತ್ರಿ ಸಿದ್ದೇಶ್ವರದಾವಣಗೆರೆ
ಬ್ರಿಜೇಶ್‌ ಚೌಟಮಂಗಳೂರು
ಡಾ.ಬಸವರಾಜ ಕ್ಯಾವತೂರ್‌ಕೊಪ್ಪಳ
ಶೋಭಾ ಕರಂದ್ಲಾಜೆಬೆಂಗಳೂರು ಉತ್ತರ
ವಿ ಸೋಮಣ್ಣತುಮಕೂರು
ಎಸ್‌. ಬಾಲರಾಜ್‌ಚಾಮರಾಜನಗರ

ಲೋಕಸಭಾ ಚುನಾವಣೆಗೆ ಹೊಸಮುಖಗಳು

  • ಡಾ. ಸಿ.ಎನ್. ಮಂಜುನಾಥ್-ಬೆಂಗಳೂರು ಗ್ರಾಮಾಂತರ
  • ಯದುವೀರ ಕೃಷ್ಣದತ್ತ ಒಡೆಯರ್-ಮೈಸೂರು-ಕೊಡಗು
  • ಕ್ಯಾ. ಬ್ರಿಜೇಶ್ ಚೌಟ-ದಕ್ಷಿಣ ಕನ್ನಡ
  • ಕೋಟ ಶ್ರೀನಿವಾಸ ಪೂಜಾರಿ-ಉಡುಪಿ-ಚಿಕ್ಕಮಗಳೂರು
  • ಗಾಯತ್ರಿ ಸಿದ್ದೇಶ್ವರ-ದಾವಣಗೆರೆ
  • ಡಾ. ಬಸವರಾಜ ಕ್ಯಾವತ್ತೂರ್-ಕೊಪ್ಪಳ

ಜೆಡಿಎಸ್​ಗೆ ಬಿಟ್ಟುಕೊಟ್ಟ ಮೂರು ಕ್ಷೇತ್ರಗಳು

  • ಮಂಡ್ಯ
  • ಹಾಸನ
  • ಕೋಲಾರ

More articles

Latest article