ರಾಜ್ಯದ ಹಲವೆಡೆ ಸರ್ಕಾರಿ ಅಧಿಕಾರಿಗಳ ಮನೆ ಮತ್ತು ಕಚೇರಿ ಮೇಲೆ ಲೋಕಾಯುಕ್ತ ದಾಳಿ

ಕೋಲಾರ, ಹಾಸನ, ಚಿತ್ರದುರ್ಗ ಸೇರಿದಂತೆ ರಾಜ್ಯದಲ್ಲಿ 50 ಕ್ಕೂ ಹೆಚ್ಚು ಕಡೆಗಳಲ್ಲಿ ಏಕಕಾಲದಲ್ಲಿ ಲೋಕಾಯುಕ್ತ ದಾಳಿ ನಡೆಸಿದೆ.

ಚಿತ್ರದುರ್ಗದಲ್ಲಿ ಇಬ್ಬರು ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ರೇಡ್ ಆಗಿದೆ. ಕೋಲಾರ ತಹಶಿಲ್ದಾರ್ ಆಗಿದ್ದ ವಿಜಿಯಣ್ಣ ಮನೆ ಮೇಲೆ ದಾಳಿಯಾಗಿದೆ. ಪ್ರಸಕ್ತ ರಾಮನಗರ ಜಿಲ್ಲೆ ಆರೋಹಳ್ಳಿ ತಹಶೀಲ್ದರ್ ಆಗಿರುವ ವಿಜಿಯಣ್ಣ ಅವರಿಗೆ ಸಂಬಂಧಿಸಿದಂತೆ 6 ಕಡೆ ದಾಳಿಯಾಗಿದೆ.

ಬಿಬಿಎಂಪಿ ಸೂಪರಿಂಡೆಂಟ್ ಇಂಜಿನಿಯರ್ ಜಗದೀಶ್ ಮನೆ ಮೇಲೆ ರೇಡ್ ಆಗಿದೆ. ಬಿಬಿಎಂಪಿ ಯಿಂದ ಇತ್ತೀಚೆಗೆ ಭದ್ರಾ ಮೇಲ್ದಂಡೆಗೆ ಜಗದೀಶ್ ವರ್ಗಾವಣೆಯಾಗಿದ್ದರು. ಜಗದೀಶ್ ಅವರ ಚಿತ್ರದುರ್ಗದ ಮನೆ ಸೇರಿ ದಾವಣಗೆರೆಯ ನಾಲ್ಕು ಕಡೆ ಲೋಕಾಯುಕ್ತ ದಾಳಿ ಆಗಿದೆ.

ಮೈಸೂರಿನ ನೀರಾವರಿ ಇಲಾಖೆಯ ಸೂಪರಿಂಡೆಂಟ್ ಇಂಜಿನಿಯರ್ ಮಹೇಶ್ ಕೆ ಮನೆಯನ್ನು ಜಪ್ತಿ ಮಾಡಿ ಶೋಧ ನಡೆಸುತ್ತಿದ್ದಾರೆ. ಜೆಸಿ ನಗರದಲ್ಲಿರುವ ಮನೆ ಹಾಗೂ ಗೋಕುಲಂ ಕಚೇರಿಯಲ್ಲಿ ಕಡತಗಳ ಪರಿಶೀಲನೆ ನಡೆಸುತ್ತಿದ್ದಾರೆ.

More articles

Latest article

Most read