ಹೊಸದಿಲ್ಲಿ: ಜನತಂತ್ರದ ಹಬ್ಬವಾದ ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನ ಭರದಿಂದ ನಡೆಯುತ್ತಿದ್ದು, 11 ಗಂಟೆಯ ವೇಳೆಗೆ ಶೇ. 25ರಷ್ಟು ಮತದಾನವಾಗಿದೆ.
ಘಟಾನುಘಟಿ ನಾಯಕರುಗಳಾದ ಅಮಿತ್ ಶಾ, ಶಿವರಾಜ್ ಚೌಹಾಣ್, ಡಿಂಪಲ್ ಯಾದವ್, ದಿಗ್ವಿಜಯ ಸಿಂಗ್, ಪ್ರಹ್ಲಾದ್ ಜೋಷಿ ಅವರ ರಾಜಕೀಯ ಭವಿಷ್ಯವನ್ನು ಇಂದಿನ ಚುನಾವಣೆ ನಿರ್ಧರಿಸಲಿದೆ.
ದೇಶದ ಹನ್ನೊಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 93 ಕ್ಷೇತ್ರಗಳಿಗೆ ಇಂದು ಬೆಳಿಗ್ಗೆಯಿಂದ ಮತದಾನ ನಡೆಯುತ್ತಿದೆ.
ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆ ಹದಿನಾಲ್ಕು ಕ್ಷೇತ್ರಗಳಲ್ಲಿ ನಡೆದಿತ್ತು. ಈಗ ಇನ್ನುಳಿದ ಹದಿನಾಲ್ಕು ಕ್ಷೇತ್ರಗಳಿಗೆ ಎರಡನೇ ಹಂತದ ಮತದಾನ ನಡೆಯುತ್ತಿದೆ.
ರಾಜ್ಯದಲ್ಲಿ ಬೆಳಗ್ಗೆ 11ರವರೆಗೆ ಶೇ.24.48 ಮತದಾನ ನಡೆದಿದ್ದು ಯಾವ ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನವಾಗಿದೆ ಎಂಬ ವಿವರ ಈ ಕೆಳಕಂಡಂತಿದೆ.
• ಬಾಗಲಕೋಟೆ – 23.80%
• ಬೆಳಗಾವಿ -23.91%
• ಬಳ್ಳಾರಿ – 26.45%
• ಬೀದರ್ – 22.33%
• ವಿಜಯಪುರ – 23.91%
• ಚಿಕ್ಕೋಡಿ – 27.23%
• ದಾವಣಗೆರೆ – 23.73%
• ಧಾರವಾಡ – 24.0%
• ಕಲಬುರಗಿ – 22.64%
• ಹಾವೇರಿ -24.24%
• ಕೊಪ್ಪಳ -24.64%
• ರಾಯಚೂರು -22.05%
• ಶಿವಮೊಗ್ಗ -27.22%
• ಉತ್ತರ ಕನ್ನಡ -27.65%
ಉತ್ತರ ಕನ್ನಡದಲ್ಲಿ ಈವರೆಗೆ ಅತಿಹೆಚ್ಚು ಮತದಾನ ನಡೆದಿದೆ.
ಹಂತ 1: ಏಪ್ರಿಲ್ 19 (ಚುನಾವಣೆ ನಡೆದಿದೆ)
ಹಂತ 2: ಏಪ್ರಿಲ್ 26 ( ಚುನಾವಣೆ ನಡೆದಿದೆ)
ಹಂತ 3: ಮೇ 7 (ಚುನಾವಣೆ ನಡೆಯುತ್ತಿದೆ)
ಹಂತ 4: ಮೇ 13 (ಚುನಾವಣೆ ನಡೆಯಬೇಕಿದೆ)
ಹಂತ 5: ಮೇ 20 (ಚುನಾವಣೆ ನಡೆಯಬೇಕಿದೆ)
ಹಂತ 6: ಮೇ 25 (ಚುನಾವಣೆ ನಡೆಯಬೇಕಿದೆ)
ಹಂತ 7: ಜೂನ್ 1(ಚುನಾವಣೆ ನಡೆಯಬೇಕಿದೆ)
ಜೂನ್ 4 : ಎಲ್ಲ 543 ಸ್ಥಾನಗಳ ಮತ ಎಣಿಕೆ