ಸಿಮೆಂಟ್ ಮಿಕ್ಸರ್ ಲಾರಿಯಲ್ಲಿ ಮದ್ಯ ಸಾಗಾಣೆ; ಲಾರಿ ಜಪ್ತಿ

Most read

ಠಾಣೆ: ನವಿ ಮುಂಬೈನಲ್ಲಿ ಸಿಮೆಂಟ್ ಮಿಕ್ಸರ್ ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ರೂ.34.39 ಲಕ್ಷ ಮೌಲ್ಯದ ಇಂಡಿಯನ್‌ ಮೇಡ್‌ ಫಾರಿನ್‌ ಲಿಕ್ಕರ್‌ (ಐಎಂಎಫ್‌ಎಲ್‌) ಅನ್ನು ಮಹಾರಾಷ್ಟ್ರ ಅಬಕಾರಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಅಬಕಾರಿ ಅಧಿಕಾರಿಗಳು ಮಂಗಳವಾರ ತಡರಾತ್ರಿ ಬೇಲಾಪುರ ರಸ್ತೆಯಲ್ಲಿ ಸಿಮೆಂಟ್ ಮಿಕ್ಸರ್ ಲಾರಿಯನ್ನು ತಡೆದು ತಪಾಸಣೆ ನಡೆಸಿದ್ದಾರೆ.

ಲಾರಿಯ ಕಂಪಾರ್ಟ್‌ಮೆಂಟ್‌ಗಳಲ್ಲಿ ಬಚ್ಚಿಟ್ಟಿದ್ದ ಐಎಂಎಫ್‌ಎಲ್‌ನ 495 ಬಾಕ್ಸ್‌ ಗಳು ಪತ್ತೆಯಾಗಿವೆ. ಗೋವಾದಲ್ಲಿ ತಯಾರಿಸಲಾದ ಮದ್ಯವನ್ನು ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಸಾಗಿಸಲಾಗುತ್ತಿತ್ತು ಎಂದು ಅಬಕಾರಿ ಅಧೀಕ್ಷಕ ಪ್ರವೀಣ್ ತಾಂಬೆ ತಿಳಿಸಿದ್ದಾರೆ.

ಸದ್ಯ ಲಾರಿ ಚಾಲಕನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಕಳ್ಳಸಾಗಣೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಮದ್ಯ ಸಾಗಣೆದಾರನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

More articles

Latest article