ಬೆಂಗಳೂರು: ನಮ್ಮ ಕುಟುಂಬದ ಆಸ್ತಿ ಮತ್ತು ನೋಂದಣಿಯೇ ಆಗದ ವಿಶ್ವದ ಅತ್ಯಂತ ಶ್ರೀಮಂತ NGO ಆರ್‌ಎಸ್‌ಎಸ್ ಅಸ್ತಿ ಕುರಿತು ತನಿಖೆ ನಡೆಯಲಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಅವರು ಸಂಘ ಪರಿವಾರದ ವಿರುದ್ಧ ಕಿಡಿ ಕಾರಿ ಈ ಸವಾಲು ಹಾಕಿದ್ದಾರೆ.
ಬಿಜೆಪಿ ನಾಯಕರೇ ಕಳೆದ 50 ವರ್ಷಗಳಲ್ಲಿ ನಾವು ಗಳಿಸಿದ ಆಸ್ತಿ, ಆದಾಯಗಳೆಲ್ಲದರ ವಿವರಗಳೂ ಜನತೆಯ ಮುಂದಿದೆ, ಮತ್ತು ನಮ್ಮ ಆದಾಯಕ್ಕೆ ತೆರಿಗೆ ಪಾವತಿಸಲಾಗುತ್ತದೆ.
ಆದರೆ, ಕಳೆದ 100 ವರ್ಷಗಳಲ್ಲಿ ನಿಮ್ಮ ಮಾತೃ ಸಂಸ್ಥೆಯಾದ RSS ನೋಂದಾಯಿಸಿಲ್ಲ, ತೆರಿಗೆ ಪಾವತಿಸಿಲ್ಲ ಮತ್ತು ವಿಶ್ವದ ಅತ್ಯಂತ ಶ್ರೀಮಂತ NGO ಎನಿಸಿಕೊಂಡಿದೆ? ಇದು ಸಾಧ್ಯವಾಗಿದ್ದು ಹೇಗೆ?
ನಮ್ಮ ಆದಾಯ ಮತ್ತು ನಿಮ್ಮ ಆರ್‌ಎಸ್‌ಎಸ್ ಆದಾಯಗಳ ಮೂಲಗಳ ಬಗ್ಗೆ IT,ED ಆಡಿಟ್ ಆಗಲಿ, ತನಿಖೆಗೆ ನಾವು ಸಿದ್ದ, ನಿಮ್ಮ RSS ಸಿದ್ದವೇ ಎಂದು ಪ್ರಶ್ನಿಸಿದ್ದಾರೆ

