ಖ್ಯಾತ ತಬಲಾ ಮಾಂತ್ರಿಕ ಜಾಕೀರ್ ಹುಸೇನ್ ಇನ್ನಿಲ್ಲ; ಸ್ಯಾನ್​ಫ್ರಾನ್ಸಿಸ್ಕೋದಲ್ಲಿ ನಿಧನ

Most read

ನವದೆಹಲಿಖ್ಯಾತ ತಬಲಾ ಮಾಂತ್ರಿಕ ಜಾಕಿರ್ ಹುಸೇನ್ ಭಾನುವಾರ ನಿಧನರಾಗಿದ್ದಾರೆ.  ಅವರಿಗೆ 73 ವರ್ಷ ವಯಸ್ಸಾಗಿತ್ತು. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಅಮೆರಿಕದ ಸ್ಯಾನ್​ಫ್ರಾನ್ಸಿಸ್ಕೋದ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಅಗಲಿದ್ದಾರೆ. ಇವರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಮಾರ್ಚ್ 9, 1951 ರಂದು ಆಗಿನ ಬಾಂಬೆಯಲ್ಲಿ ಜನಿಸಿದ ಝಾಕಿರ್ ಹುಸೇನ್ ಅಲ್ಲಾರಕಾ ಖುರೇಷಿ. ಇವರ ತಂದೆ ಉಸ್ತಾದ್ ಅಲ್ಲಾ ರಖಾ ಖಾನ್ ಅವರೂ ವಿಶ್ವ ಪ್ರಸಿದ್ದ ತಬಲಾ ವಾಸಕರು. ತಮ್ಮ ಮೂರನೇ ವಯಸ್ಸಿನಿಂದಲೇ ಝಾಕಿರ್ ಹುಸೇನ್ ಅವರು ತಬಲಾದೊಂದಿಗೆ ಸಂಬಂಧ ಬೆಳೆಸಿಕೊಂಡರು. ಕಠಿಣ ಅಭ್ಯಾಸದಿಂದ ತಬಲಾ ನುಡಿಸುವಿಕೆಯ ಮೇಲೆ ಹಿಡಿತ ಸಾಧಿಸಿದರು. ತಮ್ಮ ಏಳನೇ ವಯಸ್ಸಿನಲ್ಲೇ ಸ್ವತಂತ್ರವಾಗಿ ಸಂಗೀತ ಕಚೇರಿ ನಡೆಸಿಕೊಡಲು ಆರಂಭಿಸಿದ ಅವರು ಹಿಂತಿರುಗಿ ನೋಡಲೇ ಇಲ್ಲ.

ಐದು ಗ್ರ್ಯಾಮಿ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಭಾರತದ ಹಿರಿಮೆಯನ್ನು ಅತಿ ಎತ್ತರಕ್ಕೆ ಕೊಂಡೊಯ್ದ ಸಂಗೀತ ಸಾಧಕ ಇವರು. ರವಿಶಂಕರ್‌, ಆಲಿ ಅಕ್ಬರ್‌ ಖಾನ್‌, ಪಂ. ಶಿವಕುಮಾರ್‌ ಶರ್ಮಾ ಸೇರಿದಂತೆ ದೇಶದ ಎಲ್ಲ ಸಂಗೀತಗಾರರೊಂದಿಗೆ ಕಚೇರಿ ನಡೆಸಿಕೊಟ್ಟ ಪ್ರತಿಭಾವಂತರೂ ಹೌದು.  ಝಾಕಿರ್ ಅವರು 1988 ರಲ್ಲಿ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದಾಗ ಅವರಿಗೆ ಕೇವಲ 37 ವರ್ಷ ವಯಸ್ಸು. ಈ ವಯಸ್ಸಿನಲ್ಲಿ ಈ ಪ್ರಶಸ್ತಿ ಪಡೆದ ಅತ್ಯಂತ ಕಿರಿಯ ವ್ಯಕ್ತಿ ಇವರು.  2002 ರಲ್ಲಿ ಸಂಗೀತ ಕ್ಷೇತ್ರದಲ್ಲಿ ಅವರ ಕೊಡುಗೆಗಾಗಿ ಅವರಿಗೆ 2023 ರಲ್ಲಿ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಇವರು ಹಲವಾರು ಚಲನಚಿತ್ರಗಳಿಗೆ ತಬಲಾ ನುಡಿಸಿದ್ದಾರೆ. ಹೀಟ್ ಅಂಡ್ ಡಸ್ಟ್ ಚಿತ್ರದಲ್ಲಿ ನಟಿಸಿ ಸಂಗೀತವನ್ನೂ ನೀಡಿದ್ದಾರೆ. ಆ ಚಿತ್ರಕ್ಕೆ ಅವರ ಸಂಗೀತ ಕೊಡುಗೆಗಳಿಗಾಗಿ 1983ರ ಕಾನ್ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು. ಶಶಿ ಕಪೂರ್ ಜತೆ ಹಾಲಿವುಡ್ ಸಿನಿಮಾದಲ್ಲಿ ನಟಿಸಿದ್ದರು. ಝಾಕಿರ್ ಹುಸೇನ್ 1998 ರ ಸಾಜ್ ಚಿತ್ರದಲ್ಲಿ ಶಬಾನಾ ಅಜ್ಮಿ ಜತೆ ನಟಿಸಿದ್ದರು. ಮೊಘಲ್-ಎ-ಆಜಮ್ (1960) ಚಿತ್ರದಲ್ಲಿ ಸಲೀಂ ಅವರ ಕಿರಿಯ ಸಹೋದರನ ಪಾತ್ರದಲ್ಲಿ ಝಾಕಿರ್ ಹುಸೇನ್ ನಟಿಸಿದ್ದರು. 1996 ರಲ್ಲಿ ಅವರು ಅಟ್ಲಾಂಟಾದಲ್ಲಿ ನಡೆದ ಬೇಸಿಗೆ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭಕ್ಕೆ ಸಂಗೀತ ಸಂಯೋಜನೆ ಮಾಡಿದ್ದರು.

ಉಸ್ತಾದ್ ಝಾಕಿರ್ ಹುಸೇನ್ ಅವರಿಗೆ ಎಲ್ಲವೂ ತಬಲಾದಂತೆ ಕಾಣಿಸುತ್ತಿತು. ಚಪ್ಪಟೆಯಾದ ನೆಲ, ಅಡುಗೆ ಮನೆಯ ಪಾತ್ರೆಗಳೂ, ಹರಿವಾಣ ಏನೇ ಸಿಕ್ಕರೂ ಲಯಬದ್ಧವಾಗಿ ನುಡಿಸುತ್ತಿದ್ದರು.

1978 ರಲ್ಲಿ, ಜಾಕಿರ್ ಹುಸೇನ್ ಕಥಕ್ ನೃತ್ಯಗಾರ್ತಿ ಆಂಟೋನಿಯಾ ಮಿನಿಕೋಲಾ ಅವರನ್ನು ವಿವಾಹವಾದರು. ಝಾಕಿರ್ ಅವರಿಗೆ ಅನಿಸಾ ಖುರೇಷಿ ಮತ್ತು ಇಸಾಬೆಲ್ಲಾ ಖುರೇಷಿ ಎಂಬ ಇಬ್ಬರು ಹೆಣ್ಣುಮಕ್ಕಳು. ಝಾಕಿರ್ ಹುಸೇನ್ ಅವರು ಬಿಲ್ ಲೌಸ್ವೀಸ್ ಅವರ ಜಾಗತಿಕ ಸಂಗೀತ ಸೂಪರ್ ಗ್ರೂಪ್ ‘ತಬಲಾ ಬೀಟ್ ಸೈನ್ಸ್’ ನ ಸ್ಥಾಪಕ ಸದಸ್ಯರೂ ಆಗಿದ್ದರು. ಇನ್ನು ಮುಂದೆ ಅವರು ನೆನಪು ಮಾತ್ರ. ಆದರೆ ತಬಲಾ ಎಂದರೆ ತಟ್ಟನೆ ನೆನಪಾಗುವುದು ಝಾಕೀರ್‌ ಹುಸೇನ್‌ ಮಾತ್ರ.

More articles

Latest article