ಈ ವರ್ಷ ಹೋಳಿ ಹಬ್ಬ ಮತ್ತು ಎಸ್ ಎಸ್ ಎಲ್ ಸಿ ಪರೀಕ್ಷೆ ಎರಡು ಒಟ್ಟಿಗೆ ಬಿದ್ದಿರುವುದರಿಂದ ಯಾರದಾರೂ ಪರೀಕ್ಷೆಗೆ ತೆರೆಳುತ್ತಿರುವ ವಿದ್ಯಾರ್ಥಿಗಳ ಮೇಲೆ ಬಣ್ಣ ಹಾಕಿದರೆ ಅಂತವರ ಮೇಲೆ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಆದೇಶದಲ್ಲಿ, ಈ ವರ್ಷ ಹೋಳಿ ಹಬ್ಬ ಹಾಗೂ ಎಸ್. ಎಸ್.ಎಲ್.ಸಿ ಪರೀಕ್ಷೆಗಳು ಒಂದೇ ದಿನ ಬಂದಿರುವುದರಿಂದ ಪರೀಕ್ಷೆಗೆ ಹಾಜರಾಗುತ್ತಿರುವ ಪರೀಕ್ಷಾರ್ಥಿ ಹಾಗೂ ಶಿಕ್ಷಕರು, ಮೇಲ್ವಿಚಾರಕರ ಮೇಲೆ ಬಣ್ಣ ಲೇಪಿಸುವುದರಿಂದ ಪರೀಕ್ಷೆ ಬರೆಯಲು ಮಕ್ಕಳಿಗೆ ತೊಂದರೆ/ಅಡೆತಡೆಯಾಗುವ ಸಂಭವ ಹೆಚ್ಚಿರುತ್ತದೆ. ಇದು ಸಂಪೂರ್ಣವಾಗಿ ನಿಷೇಧಿಸಿದೆ. ಒಂದು ವೇಳೆ ಇಂತಹ ಘಟನೆಗಳು ಜರುಗಿದ್ದಲ್ಲಿ ಅಂತವರ ಮೇಲೆ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶಿಸಿದೆ.
ಪೂರ್ತಿ ಆದೇಶದಲ್ಲಿ, ಮಾರ್ಚ್/ಏಪ್ರೀಲ್-2024ರ ಎಸ್.ಎಸ್.ಎಲ್.ಸಿ ಮುಖ್ಯ ಪರೀಕ್ಷೆ-1 ಗಳು ದಿನಾಂಕ 25-03-2024 ರಿಂದ 06-04-2024 ವರೆಗೆ ರಾಜ್ಯಾದ್ಯಂತ ಜರುಗಲಿದ್ದು, ಉತ್ತರ ಕನ್ನಡ ಜಿಲ್ಲೆಯ 73 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯುತ್ತಿವೆ. ದಿನಾಂಕ 25-03-2024 ರಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಹೋಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ಹೋಳಿ ಹಬ್ಬದ ಪ್ರಯುಕ್ತ ಬಣ್ಣ ಹಚ್ಚುವುದು, ಬಣ್ಣದ ನೀರೆರಚುವುದು ಮಾಡಲಾಗುತ್ತಿದ್ದು, ಈ ವರ್ಷ ಹೋಳಿ ಹಬ್ಬ ಹಾಗೂ ಎಸ್. ಎಸ್.ಎಲ್.ಸಿ ಪರೀಕ್ಷೆಗಳು ಒಂದೇ ದಿನ ಬಂದಿರುವುದರಿಂದ ಪರೀಕ್ಷೆಗೆ ಹಾಜರಾಗುತ್ತಿರುವ ಪರೀಕ್ಷಾರ್ಥಿ ಹಾಗೂ ಶಿಕ್ಷಕರು, ಮೇಲ್ವಿಚಾರಕರ ಮೇಲೆ ಬಣ್ಣ ಲೇಪಿಸುವುದರಿಂದ ಪರೀಕ್ಷೆ ಬರೆಯಲು ಮಕ್ಕಳಿಗೆ ತೊಂದರೆ/ಅಡೆತಡೆಯಾಗುವ ಸಂಭವ ಹೆಚ್ಚಿರುತ್ತದೆ. ಪ್ರಯುಕ್ತ ಶಾಲಾ ಮಕ್ಕಳ ಸುರಕ್ಷತೆ ಹಿತದೃಷ್ಟಿಯಿಂದ ದಿನಾಂಕ 25-03-2024 ರಂದು ಎಸ್.ಎಸ್.ಎಲ್.ಸಿ ಪರೀಕ್ಷೆಗೆ ತೆರಳಲಿರುವ ಮಕ್ಕಳು, ಪಾಲಕರು/ಪೋಷಕರು, ಶಿಕ್ಷಕರು ಮೇಲ್ವಿಚಾರಕ ಮೈ ಮೇಲೆ ರಾಸಾಯನಿಕ ದ್ರಾವಣದಿಂದ ಕೂಡಿದ ಬಣ್ಣ ಎರಚುವುದು/ವಿವಿಧ ಬಣ್ಣ / ಬಣ್ಣದ ನೀರು ಎರಚುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಒಂದು ವೇಳೆ ಇಂತಹ ಘಟನೆಗಳು ಜರುಗಿದ್ದಲ್ಲಿ ಅಂತವರ ಮೇಲೆ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.
ಈ ಆದೇಶವನ್ನು ಪೊಲೀಸ್ ಅಧೀಕ್ಷಕರು, ಉತ್ತರ ಕನ್ನಡ ಕಾರವಾರರವರು ಜಾರಿಯಲ್ಲಿ ತರುವ ಬಗ್ಗೆ ಕ್ರಮ ಜರುಗಿಸತಕ್ಕದ್ದು ಎಂದು ಸೂಚಿಸಿದೆ.