ಕುಣಿಗಲ್‌ ಭೈಪಾಸ್‌ ಬಳಿ ಅಪಘಾತ; ಇಬ್ಬರು ಡ್ಯಾನ್ಸರ್ಸ್‌ ಸಾವು

ನೆಲಮಂಗಲ: ಲಾರಿ ಡಿಕ್ಕಿಯಾಗಿ ಬೈಕ್​ನಲ್ಲಿದ್ದ ಇಬ್ಬರು ನರ್ತಕರು ಸ್ಥಳದಲ್ಲೇ ಸಾವನ್ನಪ್ಪಿರುವ ದುರಂತ ಘಟನೆ ನೆಲಮಂಗಲದ ಕುಣಿಗಲ್ ಬೈಪಾಸ್​ ನಲ್ಲಿ ಸಂಭವಿಸಿದೆ. ಬೆಂಗಳೂರಿನ ಶ್ರೀರಾಮಪುರದ ನಿವಾಸಿಗಳಾದ ಪ್ರಜ್ವಲ್ (22) ಮತ್ತು ಸಹನಾ(21) ಮೃತ ದುರ್ದೈವಿಗಳು. ಬೈಕ್‌ ಗೆ ಗುದ್ದಿದ ಲಾರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದು ಚಾಲಕನನ್ನು ಬಂಧಿಸಿದ್ದಾರೆ. ಲಾರಿ ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಭಾವಂತ ಡ್ಯಾನ್ಸರ್‌ ಆದ ಪ್ರಜ್ವಲ್ ಕೆಲವು ಸಿನಿಮಾ ಮತ್ತು ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಸಹನಾ ಕೂಡ ಪ್ರತಿಭಾವಂತೆಯಾಗಿದ್ದು, ಉತ್ತಮ ನರ್ತಕಿಯಾಗಿದ್ದರು. ಇದೀಗ ಇಬ್ಬರ ಕನಸು ನುಚ್ಚು ನೂರಾಗಿದೆ. ಇವರಿಬ್ಬರೂ ಮದುವೆ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಕುಣಿಗಲ್ ​ನಿಂದ ಬೆಂಗಳೂರಿಗೆ ಹಿಂತಿರುಗುತ್ತಿದ್ದಾಗ ಈ ಭೀಕರ ಅಪಘಾತ ಸಂಭವಿಸಿದೆ.

More articles

Latest article

Most read