ಕುಮಾರಸ್ವಾಮಿಯವರೇ, ಯಾಕೆ ಮೌನವಾದಿರಿ? ಪೆನ್ ಡ್ರೈವ್ ಹಗರಣ ಕುರಿತು ನಿಕೇತ್ ರಾಜ್ ಮೌರ್ಯ ಪ್ರಶ್ನೆ

ಬೆಂಗಳೂರು: ಹಾಸನದಲ್ಲಿ ಯುವ ರಾಜಕೀಯ ಮುಖಂಡನ ಲೈಂಗಿಕ ಹಗರಣದ ಕುರಿತು ಈಗ ಅನೇಕ ಮುಖಂಡರು ಪ್ರತಿಕ್ರಿಯೆ ನೀಡುತ್ತಿದ್ದು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೌನಕ್ಕೆ ಶರಣಾಗಿರುವುದು ಯಾಕೆ ಎಂದು ಕಾಂಗ್ರೆಸ್ ವಕ್ತಾರ ನಿಕೇತ್ ರಾಜ್ ಮೌರ್ಯ ಪ್ರಶ್ನಿಸಿದ್ದಾರೆ.

ಈ ಕುರಿತು ಫೇಸ್ ಬುಕ್ ನಲ್ಲಿ ಬರೆದಿರುವ ಅವರು
ಕುಮಾರಸ್ವಾಮಿಯವರೇ, ನೀವು ತೋರಿಸಿ, ತೋರಿಸಿ ಜೇಬೋಳಗೆ ಇಳಿಸಿಕೊಳ್ಳುತ್ತಿದ್ದ ಪೆನ್ ಡ್ರೈವ್‌ನಲ್ಲಿನ ರಹಸ್ಯ ಈಗ ಹೊರಬಂದಿದೆಯೇ? ಹಾಸನದ ಬೀದಿ ಬೀದಿಗಳಲ್ಲಿ ಚೆಲ್ಲಾಡುತ್ತಿರುವ ಪೆನ್ ಡ್ರೈವ್ ನಿಮ್ಮದೇನಾ?‌ ಎಂದು ಪ್ರಶ್ನಿಸಿದ್ದಾರೆ.

ಕುಮಾರಸ್ವಾಮಿಯವರೇ, ರಾಜ್ಯದ ಮಹಿಳೆಯರ ಬಗ್ಗೆ ನಾಲಿಗೆ ಹರಿಬಿಟ್ಟು ದಾರಿ ತಪ್ಪಿದ್ದಾರೆ ಎಂದಿದ್ದ ನೀವು ಯಾಕೆ ಈಗ ಗಾಢ ಮೌನ ವಹಿಸಿದ್ದೀರಿ? ಎಂದು ಅವರು ಕೇಳಿದ್ದಾರೆ.

ದಾರಿ ತಪ್ಪಿ ನಡೆದವರು ಯಾರು ಎನ್ನುವ ಸಂಗತಿ ಬಟಾಬಯಲಾಗಿರುವಾಗ ರಾಜ್ಯದ ಜನರಿಗೆ ಮುಖ ತೋರಿಸಲಾಗುತ್ತಿಲ್ಲವೇ?? ಎಂದು ನಿಕೇತ್ ರಾಜ್ ಪ್ರಶ್ನಿಸಿದ್ದಾರೆ.

ಹಾಸನ ಯುವ ನಾಯಕನ ಅತಿದೊಡ್ಡ ಲೈಂಗಿಕ ಹಗರಣವನ್ನು ಕನ್ನಡ ಪ್ಲಾನೆಟ್ https://kannadaplanet.com/is-there-a-pen-drive-of-obscene-videos-lying-around-in-hassan/ ಏ. 22 ರಂದು ಮೊಟ್ಟ ಮೊದಲ ಬಾರಿ ವಿಶೇಷ ವರದಿಗಳು, ವಿಡಿಯೋಗಳ ಮೂಲಕ ಬಯಲಿಗೆಳೆದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

More articles

Latest article

Most read