ಬೆಂಗಳೂರು: ಪ್ರಜ್ವಲ್ ರೇವಣ್ಣರ ಪೈನ್ ಡ್ರೈವ್ ಡಿಕೆ ಬ್ರದರ್ಸ್ ಗೆ ನನಗಿಂತ ಮುಂಚೆ ತಲುಪಿತ್ತು ಎಂಬ ದೇವರಾಜೇಗೌಡರ ಹೇಳಿಕೆ ವಿಚಾರಕ್ಕೆ ಸಂಸದ ಡಿಕೆ ಸುರೇಶ್ ಪ್ರತಿಕ್ರಿಯೆ ನೀಡಿದ್ದು, ನಮ್ಮ ಗಮನಕ್ಕೆ ಬಂದಿದ್ರೆ, ಮುಂಚೆನೆ ಹೊರಗೆ ಬರ್ತಿತ್ತು. ಗುಸುಗುಸು ಸುದ್ದಿ ಹಾಸನ ಜಿಲ್ಲೆಯಲ್ಲಿ ಇತ್ತು. ದೇವರಾಜೇಗೌಡರು ಬಿಜೆಪಿ ಹೈಕಮಾಂಡ್ ಗೆ ಪತ್ರ ಬರೆದಿದ್ರು. ರೇವಣ್ಣ ಹಳೆಯ ವಿಡಿಯೋ ಎಂದು ಒಪ್ಪಿಕೊಂಡಿದ್ದಾರೆ.
ಸಂತ್ರಸ್ತ ಮಹಿಳೆಯರ ರಕ್ಷಣೆ ಮಾಡಬೇಕು. 500ಕ್ಕೂ ಹೆಚ್ಚು ಸಂತ್ರಸ್ತ ಮಹಿಳೆಯರಿದ್ದಾರೆ ಎಂಬ ಮಾಹಿತಿ ಇದೆ. ಕುಟುಂಬ ನಮ್ಮದಲ್ಲ ಎಂದು ಹೇಳಬಹುದು, ದೇವೇಗೌಡರ ಕುಟುಂಬ ಇದಕ್ಕೆ ನೇರ ಹೊಣೆ. ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ. ಗೊತ್ತಿರುವ ವಿಚಾರ ಮುಚ್ಚಿಟ್ಟು ಪ್ರಚಾರ ಮಾಡಿದ್ದಾರೆ. ನನಗೂ ಇದಕ್ಕೂ ಸಂಬಂಧ ಇಲ್ಲ ಎಂದು ಹೇಳೊದು ಸುಲಭ. ಪ್ರಚಾರದ ಸಂದರ್ಭದಲ್ಲಿ ನನ್ನ ಮಗ ಎಂದು ಹೇಳಿದ್ದಾರೆ. ಪ್ರಧಾನಿಗಳು ತಿರುಚುವ ಹೇಳಿಕೆ ನೀಡಿದ್ದಾರೆ. ದೆಹಲಿಯಲ್ಲಿ ಕುಸ್ತಿ ಪಟುಗಳ ಪ್ರಕರಣವನ್ನ ಹೀಗೆ ಮಾಡಿದ್ರು. ಯಡಿಯೂರಪ್ಪರನ್ನ ಇಳಿಸಿದ ಸಂದರ್ಭದಲ್ಲಿ, ಬಾಂಬೆ ಬಾಯ್ಸ್ ಸಂದರ್ಭದಲ್ಲೂ ಈ ರೀತಿಯ ವಿಚಾರ ಕೇಳಿ ಬಂದಿತ್ತು. ಮಾಜಿ ಪ್ರಧಾನಿ ಕುಟಂಬದಿಂದ ಕನ್ನಡಿಗರು ತಲೆ ತಗ್ಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮಹಿಳೆಯರ ರಕ್ಷಣೆ ಮಾಡುವ ಕೆಲಸ ಸರ್ಕಾರ ಮಾಡಬೇಕು. ರೇವಣ್ಣ 4 ವರ್ಷಗಳ ಹಿಂದಿನ ವಿಡಿಯೋ ಎಂದು ಹೇಳಿದ್ದಾರೆ, ಷಡ್ಯಂತ್ರ ಎಲ್ಲಿ ಬರುತ್ತದೆ? ಬಿಜೆಪಿ ಪ್ರಜ್ವಲ್ ರೇವಣ್ಣ ವಿಚಾರವಾಗಿ ಡಬಲ್ ಸ್ಟ್ಯಾಂಡ್ ಹೊಂದಿದೆ. ದೇಶದಲ್ಲೇ ದೊಡ್ಡ ಹಗರಣ ಇದಾಗಿದೆ. ಸಂತ್ರಸ್ತರಿಗೆ ರಕ್ಷಣೆ ಕೊಡೋದು ಸರ್ಕಾರದ ಜವಾಬ್ದಾರಿ. ಎಂಪಿ ಮನೆ, ಪಾರ್ಮ್ ಹೌಸ್, ಕ್ವಾಟ್ರಸ್ ನಲ್ಲಿ ನಡೆದ ಘಟನೆ ಇದಾಗಿದೆ ಎಂದಿದ್ದಾರೆ.
ರಾಜ್ಯ ಸರ್ಕಾರ ಪ್ರಜ್ವಲ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂಬ ಅಮಿತ್ ಶಾ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಅವರು ಗೃಹ ಸಚಿವರು. ಈ ಎಲ್ಲಾ ವಿಚಾರವನ್ನ ಅಮಿತ್ ಶಾ ರಿಗೆ ಪತ್ರದ ಮೂಲಕ ಬರೆದಿದ್ದಾರೆ. ರಾಜ್ಯದ ನಾಯಕರು ಟಿಕೆಟ್ ಕೊಡಬಾರ್ದು ಅಂತ ರಾಜ್ಯ, ರಾಷ್ಟ್ರೀಯ ನಾಯಕರಿಗೆ ಪತ್ರ ಬರೆದಿದ್ದಾರೆ. ಹೀಗಿದ್ದರೂ ಅವರಿಗೆ ಟಿಕೆಟ್ ಕೊಟ್ಟಿದ್ದಾರೆ, ಅವರ ಪರ ಪ್ರಚಾರ ಮಾಡಿದ್ದಾರೆ. ಅಮಿತ್ ಶಾ ಅವರ ಈ ಹೇಳಿಕೆ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುತ್ತದೆ. ದೊಡ್ಡ ಕುಟುಂಬದ ಹೆಸರಿಗೆ ಧಕ್ಕೆ ಆಗುತ್ತದೆ. ಮೊದಲು ಅವರನ್ನ ವಿದೇಶದಿಂದ ಕರೆ ತರುವ ಕೆಲಸ ಮಾಡಲಿ. ತಾಳಿ ಭಾಗ್ಯವನ್ನ ನೀವು ಯಾವ ರೀತಿ ಕೊಡ್ತಿದ್ದೀರಿ? ಆ ಸಂತ್ರಸ್ತ ಹೆಣ್ಣು ಮಕ್ಕಳ ಕತೆ ಏನು? ಅಮಿತ್ ಶಾ, ಮೋದಿ, ದೇವೇಗೌಡರು, ಹೆಚ್‌ಡಿಕೆ ಸೆಲೆಕ್ಟ್ ಮಾಡಿದ ಕ್ಯಾಂಡಿಟೇಟ್ ಇದು. ಇದಕ್ಕೆಲ್ಲ ಅವರೇ ಉತ್ತರ ಕೊಡ್ಬೇಕು ಅಂತ ಅಮಿತ್ ಶಾ ಹೇಳಿಕೆಗೆ ಸಂಸದ ಡಿಕೆ ಸುರೇಶ್ ತಿರುಗೇಟು ನೀಡಿದ್ದಾರೆ.