Saturday, December 7, 2024

ಕುಮಾರ್‌ ಬಂಗಾರಪ್ಪ ಬೆಂಬಲಿಗರ ಉಚ್ಚಾಟಿಸಿದ ಶಿವಮೊಗ್ಗ ಜಿಲ್ಲಾ ಘಟಕ

Most read

ಶಿವಮೊಗ್ಗ: ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ನಡುವಿನ ಸಮರ ತಾರಕಕ್ಕೇರಿದೆ. ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿರುವ ಮುಖಂಡರು ಬೀದಿಗಿಳಿದು ಜಗಳವಾಡುತ್ತಿದ್ದಾರೆ.  ಒಂದು ಕಡೆ ವಿಜಯೇಂದ್ರ ಬೆಂಬಲಿಗರು ಕೋಲಾರದ ಕುರುಡುಮಲೆ ಗಣಪತಿ ದೇವಾಲಯದಿಂದ ರಾಜ್ಯ ಪ್ರವಾಸ ಆರಂಭಿಸಿದ್ದರೆ ಮತ್ತೊಂದು ಕಡೆ ಯತ್ನಾಳ್ ತಂಡ ಈಗಾಗಲೇ ‌ವಕ್ಫ್‌ ಹೋರಾಟದ ಹೆಸರಿನಲ್ಲಿ ವಿಜಯೇಂದ್ರ ವಿರುದ್ದ ಅಪಪ್ರಚಾರ ಆರಂಭಿಸಿದ್ದಾರೆ.

ವರಿಷ್ಠರ ಕಟ್ಟಪ್ಪಣೆಯ ನಡುವೆಯೂ ಮಾಜಿ ಸಚಿವ ಕುಮಾರ್‌ ಬಂಗಾರಪ್ಪ ಯತ್ನಾಳ್‌ ತಂಡವನ್ನು ಸೇರಿಕೊಂಡಿರುವುದು ಅದೇ ಜಿಲ್ಲೆಯ ಯಡಿಯೂರಪ್ಪ ಕುಟುಂಬದ ಕಣ್ಣು ಕೆಂಪಗಾಗಿಸಿದೆ. ಕುಮಾರ್‌ ಬಂಗಾರಪ್ಪ ಶಕ್ತಿಯನ್ನು ಕುಗ್ಗಿಸಲು ಅವರ ಬೆಂಬಲಿಗರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಈ ನಡುವೆ ಕುಮಾರ್‌ ಬಂಗಾರಪ್ಪ ಬೆಂಬಲಿಗರು ಜಿಲ್ಲಾಧ್ಯಕ್ಷರ ವಿರುದ್ಧ ಬಹಿರಂಗವಾಗಿ ಪತ್ರಿಕಾಗೋಷ್ಠಿ ನಡೆಸಿ ಹೇಳಿಕೆ ನೀಡಿದ್ದಾರೆ.


ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆಪಾದನೆ ಮೇಲೆ ಸೊರಬದ ಪದಾಧಿಕಾರಿಗಳಾದ ಎಂ.ಡಿ. ಉಮೇಶ್‌, ವೃತ್ತಿಕೊಪ್ಪ ಮಲ್ಲಿಕಾರ್ಜುನ್‌, ಗುರುಕುಮಾರ್‌ ಪಾಟೀಲ್‌, ಶಿವನಗೌಡ, ಕೃಷ್ಣಮೂರ್ತಿ ಅವರನ್ನು ಉಚ್ಚಾಟಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ ಅವರು ಶುಕ್ರವಾರ ಆದೇಶ ಹೊರಡಿಸಿದ್ದಾರೆ.

More articles

Latest article