ಕಲ್ಯಾಣ ನಗರದಲ್ಲಿ ಕಲರ್ಸ್ ಹೆಲ್ತ್ ಕೇರ್  ಶಾಖೆ ಆರಂಭ; ನಟಿ ಆಶಿಕಾ ರಂಗನಾಥ್ ಚಾಲನೆ

Most read

ಬೆಂಗಳೂರು: ಬೆಂಗಳೂರಿನ ಕಲ್ಯಾಣ ನಗರದಲ್ಲಿ ಕಲರ್ಸ್ ಹೆಲ್ತ್ ಕೇರ್ ನ ಏಳನೇ ಶಾಖೆಯನ್ನು ಚಿತ್ರನಟಿ ಆಶಿಕಾ ರಂಗನಾಥ್ ಉದ್ಘಾಟಿಸಿದರು. ಕಳೆದ ಎರಡು ದಶಕಗಳಿಂದ ಗುಣಮಟ್ಟವನ್ನು ಕಾಪಾಡಿಕೊಂಡು ಬಂದಿರುವ ಕಲರ್ಸ್‌ 55 ಶಾಖೆಗಳನ್ನು ಹೊಂದಿದ್ದು, ಬೆಂಗಳೂರು ಒಂದರಲ್ಲಿಯೇ 7 ಶಾಖೆಗಳನ್ನು ಹೊಂದಿದೆ.

ಆಧುನಿಕ ಯುಗದಲ್ಲಿ ಲುಕ್ ಅನ್ನೋದು ಬಹಳ ಮುಖ್ಯ. ಯಾರಿಗೆ ತಾನೆ ತಾನು ಅಂದವಾಗಿ ಕಾಣಿಸಬೇಕು ಎಂದು ಅನ್ನಿಸುವುದಿಲ್ಲ? ಎಲ್ಲರಿಗೂ ತಮ್ಮ ಲುಕ್‌ ಚೆನ್ನಾಗಿರಬೇಕು ಎನ್ನುವುದು ಸಹಜ ಆಸೆಯಾಗಿರುತ್ತದೆ. ಆತ್ಮವಿಶ್ವಾಸ ಮೂಡಬೇಕಾದರೆ ಹೊರಗಿನ ಪ್ರಪಂಚಕ್ಕೆ ನಾವು ಹೇಗೆ ಕಾಣಿಸುತ್ತೇವೆ ಎನ್ನುವುದೂ ಮುಖ್ಯವಾಗಿರುತ್ತದೆ. ಅಂತಹ ಸೆಲ್ಫ್‌ ಕಾನ್ಫಿಡೆನ್ಸ್‌ ಮೂಡಿಸುವ ಕೆಲಸವನ್ನು ಕಲರ್ಸ್ ಹೆಲ್ತ್ ಕೇರ್ ಮಾಡುತ್ತಾ ಬಂದಿದೆ. ಸ್ಪರ್ಧಾತ್ಮಕ ಪ್ರಪಂಚದಲ್ಲಿ ಗುಣಮಟ್ಟವೇ ಪ್ರಧಾನ. ಈ ಕಾರಣಕ್ಕಾಗಿಯೇ ಕಲರ್ಸ್ ಹೆಲ್ತ್ ಕೇರ್ ಮನೆ ಮಾತಾಗಿದೆ.

ಇತ್ತೀಚೆಗಷ್ಟೇ ಲೋಕಾರ್ಪಣೆಯಾದ ಕಲ್ಯಾಣ ನಗರದಲ್ಲಿ ಕಲರ್ಸ್ ಹೆಲ್ತ್ ಕೇರ್ ತುಂಬಾ ಅಪ್ ಗ್ರೇಡ್ ಆಗಿದೆ.  ಕಂಪ್ಲೀಟ್ ಟ್ರಾನ್ಸಫರ್ಮೇಷನ್ ಗೆ ಒನ್ ಸಲ್ಯೂಷನ್ ಅಂದ್ರೆ ಅದು ಕಲರ್ಸ್ ಎಂದು ಧಾರಾಳವಾಗಿ ಹೇಳಬಹುದು.

ಕಲರ್ಸ್‌ ಶಾಖೆಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಆಶಿಕಾ ರಂಗನಾಥ್, ವೆಲ್‌ ನೆಸ್ ಕೇರ್ ಗೆ ಹೆಸರು ವಾಸಿಯಾಗಿರುವ ಕಲರ್ಸ್, ನನಗೆ ವೈಯಕ್ತಿಕವಾಗಿ ತುಂಬಾ ಚೆನ್ನಾಗಿ ಕನೆಕ್ಟ್ ಆಗಿದೆ. ಕಲರ್ಸ್ ಬ್ರಾಂಡ್ ಬಗ್ಗೆ ಕೇಳಿದ್ದೆ. ಆದರೆ ಹೇಗೆ ವರ್ಕ್ ಆಗುತ್ತೆ ಅಂತ ಗೊತ್ತಿರಲಿಲ್ಲ. ಉದ್ಘಾಟನೆಗೆ ನನ್ನನ್ನು ಬರ ಮಾಡಿಕೊಂಡಿದ್ದಕ್ಕೆ ಧನ್ಯವಾದಗಳು ಎಂದದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಲರ್ಸ್ ಹೆಲ್ತ್ ಕೇರ್ ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ವೆಂಕಟ್ ಶಿವಾಜಿ ಖುನ್ನಾ ಮಾತನಾಡಿ, ದೇಹವನ್ನು ಸಮತೋಲನವಾಗಿ ಹೇಗೆ ಇಟ್ಟುಕೊಳ್ಳಬೇಕು ಎನ್ನುವುದು ಎಲ್ಲರಿಗೂ ಸಾಮಾನ್ಯವಾಗಿ ಗೊತ್ತಿರುವ ವಿಚಾರ . ಅಂದರೆ ಹೇಗೆ ಕ್ಯಾಲರಿಗಳನ್ನು ಬರ್ನ್ ಮಾಡಬೇಕು ಎನ್ನುವುದಕ್ಕೆ ಎಲ್ಲರೂ ಒತ್ತು ಕೊಡುತ್ತಾರೆ.  ಯಾವುದೇ ಇಂಜೆಕ್ಷನ್ ಅಥವಾ ಸರ್ಜರಿಯ ಮೊರೆ ಹೋಗದೆ ಹೇಗೆ ನಮ್ಮನ್ನು ಫಿಟ್ ಆಗಿ ಇಟ್ಟುಕೊಳ್ಳಬಹುದು ಎಂಬುದನ್ನು ಕಲರ್ಸ್ ನಲ್ಲಿ ಹೇಳಿಕೊಡಲಾಗುತ್ತದೆ ಎಂದರು.

ಆಪರೇಷನ್ ಡೈರೆಕ್ಟರ್ ಕೃಷ್ಣ ರಾಜ್ ತುಮ್ಮಲಾ ಮಾತನಾಡಿ, ಕಲ್ಯಾಣ ನಗರದಲ್ಲೂ ಶಾಖೆ ಆರಂಭವಾಗಿರುವುದು ಸಂತಸ ತಂದಿದೆ. ಒಂದು ಬ್ರಾಂಡ್ ಯಶಸ್ವಿಯಾಗಿ ಎಲ್ಲೆಡೆ ಪ್ರಚಾರ ಆಗಬೇಕು. ಈ ಯಶಸ್ಸಿಗೆ ಕಲರ್ಸ್‌ ಅಧ್ಯಕ್ಷ  ಜಯಕೃಷ್ಣ ಅವರೇ ಕಾರಣ. ಇಂಜೆಕ್ಷನ್, ಮೆಡಿಸಿನ್ ಇದ್ಯಾವುದನ್ನೂ ಕಲರ್ಸ್ ಪ್ರೋತ್ಸಾಹಿಸುವುದಿಲ್ಲ.  ಹೌದು, ಇವತ್ತು ತುಂಬಾನೇ ಕಾಂಪಿಟೇಷನ್ ಇದೆ. ಆದರೆ ಕಲರ್ಸ್ ಜನರ ನಂಬಿಕೆಗೆ ಪೂರಕವಾಗಿದೆ. ಶೀಘ್ರದಲ್ಲಿಯೇ ಇನ್ನಷ್ಟು ಬ್ರಾಂಚ್ ಗಳನು ತೆರೆಯುತ್ತೇವೆ ಎಂದು ತಿಳಿಸಿದರು. ಕಲರ್ಸ್ ಹೆಲ್ತ್ ಕೇರ್ ನ ಮ್ಯಾನೇಜಿಂಗ್ ಡೈರೆಕ್ಟರ್ ಡಿ.ವಿಜಯ ಕೃಷ್ಣ ಮೊದಲಾದವರು ಹಾಜರಿದ್ದರು.

More articles

Latest article