ಕೋಲ್ಕತ್ತಾ: ದೇಶಾದ್ಯಂತ ಆಕ್ರೋಶದ ಅಲೆಯನ್ನೇ ಎಬ್ಬಿಸಿರುವ ವೈದ್ಯೆಯೊಬ್ಬರ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಸಿದ್ಧ. ಭಾನುವಾರದೊಳಗೆ ಕೋಲ್ಕತ್ತಾ ಪೊಲೀಸರು ಪ್ರಕರಣವನ್ನು ಭೇದಿಸದಿದ್ದಲ್ಲಿ ಮಾತ್ರ ಸಿಬಿಐಗೆ ಒಪ್ಪಿಸುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಆರೋಪಿಗೆ ಮರಣದಂಡನೆ ವಿಧಿಸುವುದಕ್ಕೆ ತಮ್ಮಅಭ್ಯಂತರವಿಲ್ಲ. ಪ್ರತಿಭಟನಾನಿರತ ವಿದ್ಯಾರ್ಥಿಗಳು ಹೇಳುತ್ತಿರುವಂತೆ ಸಿಬಿಐ ತನಿಖೆಗೆ ಒಪ್ಪಿಸಲು ಸಿದ್ಧ. ಆದರೆ ಸಿಬಿಐ ಸಂಸ್ಥೆ ಇಂಥ ಪ್ರಕರಣಗಳನ್ನು ಭೇದಿಸಿ, ಶಿಕ್ಷೆ ಕೊಡಿಸಿರುವ ಸಂಖ್ಯೆ ಕಡಿಮೆ. ಆದರೂ ಭಾನುವಾರದೊಳಗೆ ಪ್ರಕರಣವನ್ನು ಕೋಲ್ಕತ್ತಾ ಪೊಲೀಸರು ಭೇದಿಸದಿದ್ದಲ್ಲಿ ಸಿಬಿಐಗೆ ವಹಿಸಲಾಗುವುದು ಎಂದರು.
ಕೋಲ್ಕತ್ತಾದ ಆರ್ ಜಿ ಕರ್ ಹಾಸ್ಪಿಟಲ್ ನಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದ ತರಬೇತಿಯಲ್ಲಿದ್ದ ವೈದ್ಯೆಯನ್ನು ದಾರುಣವಾಗಿ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಘಟನೆ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದು, ಎಲ್ಲೆಡೆ ವೈದ್ಯರು, ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ.