ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠವು ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ “ಭೀಕರ” ಅತ್ಯಾಚಾರ ಮತ್ತು ಹತ್ಯೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ, ವೈದ್ಯರಿಗೆ ಕೆಲಸದ ಸ್ಥಳದಲ್ಲಿ ಸುರಕ್ಷತೆಗಾಗಿ ಕಾನೂನು ರೂಪಿಸಲು 9 ಸದಸ್ಯರ ನ್ಯಾಷನಲ್ ಟಾಸ್ಕ್ ಪೋರ್ಸ್ ಸ್ಥಾಪಿಸಿ ಆದೇಶ ನೀಡಿದೆ.
ಎಫ್‌ಐಆರ್ ದಾಖಲಿಸಲು ವಿಳಂಬದ ಬಗ್ಗೆ ಪಶ್ಚಿಮ ಬಂಗಾಳ ಸರ್ಕಾರವನ್ನು ಟೀಕಿಸಿದ ಸುಪ್ರೀಂ ಕೋರ್ಟ್, “ಶವಪರೀಕ್ಷೆಯಲ್ಲಿ ವೈದ್ಯರನ್ನು ಕೊಲೆ ಮಾಡಲಾಗಿದೆ ಎಂದು ತಿಳಿದ ಮೇಲೂ ಎಫ್‌ಐಆರ್ ಅನ್ನು ರಾತ್ರಿ 11:45 ಕ್ಕೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಇಷ್ಟು ವಿಳಂಬ ಯಾಕೆ ಮತ್ತು ಘಟನೆ ನಡೆದಾಗ ಆಸ್ಪತ್ರೆಯಲ್ಲಿ ಅಧಿಕಾರಿಗಳು ಏನು ಮಾಡುತ್ತಿದ್ದರು? ಎಂದು ನ್ಯಾಯಾಲಯ ಪ್ರಶ್ನಿಸಿದೆ.
ನ್ಯಾ.ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ವಿಚಾರಣೆ. ಸುಮೋಟೋ ದಾಖಲಿಸಿಕೊಂಡಿದ್ದ ಸುಪ್ರೀಂಕೋರ್ಟ್. ಆಸ್ಪತ್ರೆ ಮಹಿಳಾ ವೈದ್ಯರು, ಸಿಬ್ಬಂದಿ ಸುರಕ್ಷತೆ ಬಗ್ಗೆ ಕಳವಳ ಇದೆ. ಆಸ್ಪತ್ರೆಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ ಇರಬೇಕು. ಮಹಿಳೆಯರು ಕೆಲಸ ಮಾಡುವ ಸ್ಥಳಗಳಲ್ಲಿ ಸುರಕ್ಷಿತವಾಗಿರಬೇಕು ಅದಕ್ಕಾಗಿ ನಾವು ರಾಷ್ಟ್ರೀಯ ಕಾರ್ಯಪಡೆ ಸ್ಥಾಪಿಸುತ್ತಿದ್ದೇವೆ ಎಂದು ಹೇಳಿದೆ.
ವೈದ್ಯರ ರಕ್ಷಣೆಗೆ ಟಾಸ್ಕ್ ಫೋರ್ಸ್ ರಚನೆ ಮಾಡಿದ್ದು, ಟಾಸ್ಕ್ ಫೋರ್ಸ್ ನಲ್ಲಿ ವಿವಿಧ ಹಿನ್ನೆಲೆಯ ವೈದ್ಯರು ಇರುತ್ತಾರೆ. ಅವರು ದೇಶಾದ್ಯಂತ ಅನುಸರಿಸಬೇಕಾದ ವಿಧಾನ ಸೂಚಿಸ್ತಾರೆ. ಇದರಿಂದಾಗಿ ನಾವು ವೈದ್ಯರಿಗೆ ಕೆಲಸ ಪುನಾರಂಭಿಸಲು ವಿನಂತಿಸುತ್ತೇವೆ. ರೋಗಿಗಳು ತಮ್ಮ ಪ್ರಾಣ ಕಳೆದುಕೊಂಡರೆ ಹೇಗೆ..? ಅವರ ಸುರಕ್ಷತೆ, ಭದ್ರತೆ ಖಚಿತ ಪಡಿಸಿಕೊಳ್ಳಲು ನಾವು ಇಲ್ಲಿದ್ದೇವೆ. ವೈದ್ಯರ ಪ್ರತಿಭಟನೆ ಕೈ ಬಿಡುವಂತೆ ಸಿಜೆಐ ಮನವಿ ಮಾಡಿದ್ದಾರೆ.