ಸುರಕ್ಷತಾ ಕ್ರಮ ಪಾಲಿಸದ 40 ಖಾಸಗಿ ಬಸ್  ಜಪ್ತಿ; ಕೋಲಾರ ಆರ್ ಟಿ ಓ ಕಾರ್ಯಾಚರಣೆ

Most read

ಕೋಲಾರ: ಸುರಕ್ಷತಾ ಕ್ರಮಗಳನ್ನು ಪಾಲಿಸದ ಹಾಗೂ ತೆರಿಗೆ ವಂಚಿಸುತ್ತಿದ್ದ ಸುಮಾರು 40ಕ್ಕೂ ಹೆಚ್ಚು ಖಾಸಗಿ ಬಸ್ ಗಳನ್ನು ಕೋಲಾರ ಆರ್ ಟಿ ಓ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

 ಅ. 24ರಂದು ಹೈದರಾಬಾದ್ ನಿಂದ ಬೆಂಗಳೂರಿನ ಕಡೆಗೆ ಹೊರಟಿದ್ದ ಖಾಸಗಿ ಕಂಪನಿಯ ಎಸಿ ಸ್ಲೀಪರ್ ಬಸ್ ಬೆಂಕಿ ಹೊತ್ತಿಕೊಂಡು 19 ಜನ ಸಜೀವ ದಹನವಾದ ನಂತರ ಬಸ್‌ ಗಳ ತಪಾಸಣೆ ನಡೆಸಲು ಸಾರಿಗೆ ಇಲಾಖೆ ಸೂಚನೆ ನೀಡಿತ್ತು. ಈ ನಿಟ್ಟಿನಲ್ಲಿ ಇಂದು ಮುಂಜಾನೆಯಿಂದಲೇ ರಾಷ್ಟ್ರೀಯ ಹೆದ್ದಾರಿ- 75ರ ಬೆಂಗಳೂರು ಚೆನ್ನೈ ಹಾಗೂ ತಿರುಪತಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಂತರ ರಾಜ್ಯ  ಖಾಸಗಿ ಬಸ್ ಗಳನ್ನು ಆರ್ ಟಿ ಓ ಅಧಿಕಾರಿಗಳು ತಪಾಸಣೆಗೊಳಪಡಿಸಿದರು.

ಜಂಟ ಆಯುಕ್ತರಾದ ಗಾಯಿತ್ರಿ ದೇವಿ ನೇತೃತ್ವದಲ್ಲಿ  ಈ ಕಾರ್ಯಾಚರಣೆ ನಡೆಯಿತು. ಜಪ್ತಿ ಮಾಡಲಾದ ಬಸ್‌ ಗಳನ್ನು ಆರ್ ಟಿ ಓ ಕಚೇರಿಯ ಆವರಣದಲ್ಲಿ ನಿಲ್ಲಿಸಲಾಗಿದ್ದು,  ಕಠಿಣ ಕ್ರಮ ಜರುಗಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

More articles

Latest article