ಕೋಲಾರ. ಅಕ್ರಮ ಸಂಬಂಧ ಕುರಿತು ಮಾತುಕತೆ ನಡೆಸುತ್ತಿದ್ದ ಸಂದರ್ಭದಲ್ಲೇ ವ್ಯಕ್ತಿಯೊಬ್ಬನನ್ನು ಆತನ ಸ್ನೇಹಿತನೇ ಮಚ್ಚಿನಿಂದ ಧಾರುಣವಾಗಿ ಕೊಲೆ ಮಾಡಿರುವ ಘಟನೆ ಗಲ್ಫೇಟೆ ಪೋಲೀಸು ಠಾಣೆ ವ್ಯಾಪ್ತಿಯ ಪ್ರಶಾಂತ್ ನಗರದಲ್ಲಿ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಮೂಲದ ಅಮೀನ್ (30) ಕೊಲೆಯಾದ ವ್ಯಕ್ತಿ. ಈತನ ಜತೆ ಮಾತುಕತೆಗೆ ಎಂದು ಆಗಮಿಸಿದ್ದ ಇರ್ಫಾನ್ ಹಾಗೂ ಸಹಚರರು ಈ ಕೊಲೆ ಮಾಡಿದ್ದಾರೆ.
ಕೊಲೆ ಆರೋಪಿ ಇರ್ಫಾನ್ ಪತ್ನಿ ಜತೆಗೆ ಅಮೀನ್ ಅಕ್ರಮ ಸಂಬಂಧ ಹೊಂದಿದ್ದ. ಈ ಬಗ್ಗೆ ಮಾತನಾಡಲು ಇರ್ಫಾನ್ ಪತ್ನಿಯ ಸಹೋದರಿಯ ಮನೆಯಲ್ಲಿ ರಾಜಿ ಪಂಚಾಯ್ತಿ ನಡೆಯುತ್ತಿತ್ತು. ಆಗ ಮಾತಿಗೆ ಮಾತು ಬೆಳೆದು ಗಲಾಟೆ ವಿಕೋಪಕ್ಕೆ ತಿರುಗಿ ಇರ್ಫಾನ್ ಮತ್ತು ಆತನ ಸಹಚರರು ಮನೆಯಲ್ಲಿಯೇ ಅಮೀನ್ ನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಭೇಟೆ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆ ಮಾಡಿದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.