ರಾಜ್ಯದಲ್ಲಿ ಯಡಿಯೂರಪ್ಪ ಅಸ್ತಿತ್ವ ಉಳಿದಿಲ್ಲ: ಅಮಿತ್ ಶಾಗೆ ಯತ್ನಾಳ ಸಲಹೆ

ವಿಜಯಪುರ: ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಸ್ತಿತ್ವ ಉಳಿದಿಲ್ಲ ಎನ್ನುವುದನ್ನು ಗೃಹ ಸಚಿವ ಅಮಿತ್ ಶಾ ಅವರು ಅರಿತುಕೊಳ್ಳಬೇಕು. ಅಮಿತ್‌ ಶಾ ಅವರು ಇನ್ನೂ ಯಡಿಯೂರಪ್ಪಾಜಿ, ಯಡಿಯೂರಪ್ಪಾಜಿ  ಎಂದು ಜಪ ಮಾಡುತ್ತಿದ್ದರೆ ಭವಿಷ್ಯದಲ್ಲಿ ರಾಜ್ಯದಲ್ಲಿ ಬಿಜೆಪಿಗೆ ಹೀನಾಯವಾದ ಸೋಲು ಕಟ್ಟಿಟ್ಟ ಬುತ್ತಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ತಾಂಡವವಾಡುತ್ತಿದೆ. ಬಿಜೆಪಿ ಸಂಘಟನೆ ಉಳಿದುಕೊಂಡಿಲ್ಲ. ಪಕ್ಷದ ಯಾವುದೇ ಹೋರಾಟಗಳಲ್ಲೂ 10-15 ಜನ ಸೇರುತ್ತಿಲ್ಲ. ಮಿತ್ರಪಕ್ಷ ಜೆಡಿಎಸ್‌ ಅನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಒಟ್ಟಾರೆ ರಾಜ್ಯದಲ್ಲಿ ನಾಯಕತ್ವವೇ ಸರಿಯಿಲ್ಲ ಎಂದು ಆರೋಪಿಸಿದರು.

More articles

Latest article

Most read