Saturday, July 27, 2024

ಯಾರ ಜೊತೆಯೂ ಮಾತನಾಡೋಕೆ ಆಗ್ಲಿಲ್ಲ ಕ್ಷಮಿಸಿ : ಕರವೇ ಕಾರ್ಯಕರ್ತರಿಗೆ ಕ್ಷಮೆಯಾಚಿಸಿದ ನಾರಾಯಣಗೌಡ

Most read

ಕನ್ನಡ ನಾಮಫಲಕ ಕಡ್ಡಾಯ ಹೋರಾಟ ಹಿನ್ನೆಲೆ ಹಲವು ಪ್ರಕರಣಗಳಲ್ಲಿ ಬಂಧನಕ್ಕೀಡಾಗಿದ್ದ ಕರ್ನಾಟಕ ರಕ್ಷಣಾ ವೇದಿಕೆ ಟಿ.ಎ ನಾರಾಯಣ ಗೌಡ ಅವರು ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿ ಬೆನ್ನಲ್ಲೆ ಕನ್ನಡ ಹೋರಾಟಗಾರರಿಗೆ ಕ್ಷಮೆಯಾಚಿಸುತ್ತಾ ಸಾಮಾಜಿಕ ಜಾಲತಾಣದಲ್ಲಿ ನಾರಾಯಣಗೌಡ ಸಂದೇಶವನ್ನು ನೀಡಿದ್ದಾರೆ.

ಬಿಡುಗಡೆಯ ಬಳಿಕ ತಡರಾತ್ರಿಯೇ ಫೇಸ್ ಬುಕ್ ಮೂಲಕ ಮಾತನಾಡಿದ ಅವರು, ” ಆರೋಗ್ಯದ ಸಮಸ್ಯೆಯಿಂದ ಇಂದು ಯಾರ ಜೊತೆಯೂ ಮಾತನಾಡೋಕೆ ಆಗ್ಲಿಲ್ಲ. ಅದಕ್ಕಾಗಿ ಕ್ಷಮೆ ಕೇಳುತ್ತೇನೆ. ನನ್ನ ದೇಹದ ಕೊನೆಯ ಹನಿ ರಕ್ತ ಇರುವವರೆಗೂ ಕನ್ನಡದ ಹೋರಾಟ ಮಾಡುತ್ತೇನೆ ” ಎಂದು ಹೇಳಿದರು.

ಕನ್ನಡ ನಾಮಫಲಕ ಆಂದೋಲನ ಯಶಸ್ವಿಯಾಗಿದೆ. ಸರ್ಕಾರ ಈ ಬಗ್ಗೆ ಸುಗ್ರೀವಾಜ್ಞೆ ಹೊರಡಿಸಿದೆ. ಇದು ಕನ್ನಡಿಗರ ಜಯ, ಕರವೇ ಜಯ. ಕೆಲವೊಮ್ಮೆ ಹೋರಾಟದಲ್ಲಿ ತೊಡಕಾಗುವುದು ಸಹಜ. ಪ್ರಾಮಾಣಿಕ ಹೋರಾಟದಲ್ಲಿ ಹೀಗೆಲ್ಲಾ ಆಗುತ್ತೆ. 15 ದಿನ ನಾವು ಜೈಲು ಶಿಕ್ಷೆ ಅನುಭವಿಸಿದ್ದೇವೆ. ಕಾನೂನಿನ ಚೌಕಟ್ಟಿನೊಳಗೆ ಈ ಹೋರಾಟ ಮುಂದುವರಿಸಿಕೊಂಡು ಹೋಗಬೇಕೆನ್ನುವುದು ನಮ್ಮ ಉದ್ದೇಶವಾಗಿತ್ತು ಎಂದು ತಿಳಿಸಿದರು.

ಈ ವೇಳೆ ಕನ್ನಡ ಪರ ಚಳುವಳಿಗಾರರು, ಕರವೇ ಮುಖಂಡರು ಹಾಗೂ ಮಾಧ್ಯಮದವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ನಾಮಫಲಕಗಳಲ್ಲಿಕನ್ನಡ ಕಡ್ಡಾಯ ಬಳಕೆಗೆ ಆಗ್ರಹಿಸಿ ರಾಜಧಾನಿಯಲ್ಲಿ 2023ರ ಡಿ.27ರಂದು ಮಾಲ್‌ ಮತ್ತು ಹೋಟೆಲ್‌ಗಳ ವಿರುದ್ಧ ಪ್ರತಿಭಟನೆ ನಡೆಸಿ ಹಾಗೂ ಅನ್ಯ ಭಾಷೆಯ ನಾಮಫಲಕಗಳನ್ನು ಧ್ವಂಸಗೊಳಿಸಿ ಪ್ರತಿಭಟನೆ ಮಾಡಿದ ಆರೋಪದಡಿ ಪೊಲೀಸರು ನಾರಾಯಣಗೌಡ ಹಾಗೂ ರಕ್ಷಣಾ ವೇದಿಕೆಯ 32 ಕಾರ್ಯಕರ್ತರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. 

More articles

Latest article