ಕಂಠೀರವ ಕ್ರೀಡಾಂಗಣದಲ್ಲಿ ನಾಳೆ ಸಂಜೆ ಜಾವಲಿನ್ ಥ್ರೋ ಸ್ಪರ್ಧೆ: ಸಂಚಾರದಲ್ಲಿ ಮಾರ್ಪಾಡು; ಈ ರಸ್ತೆಗಳಲ್ಲಿ ಪಾರ್ಕಿಂಗ್‌ ನಿಷೇಧ

Most read

ಬೆಂಗಳೂರು: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಾಳೆ ಶನಿವಾರ ಸಂಜೆ  “ಜಾವಲಿನ್ ಥ್ರೋ ಸ್ಪರ್ಧೆ- ನೀರಜ್ ಚೋಪ್ರಾ ಕ್ಲಾಸಿಕ್ 2025” ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಜಾವಲಿನ್ ಥ್ರೋ ಆಟಗಾರ ನೀರಜ್ ಚೋಪ್ರಾ ಸೇರಿದಂತೆ ಖ್ಯಾತ ಅಂತರಾಷ್ಟ್ರೀಯ ಜಾವಲಿನ್ ಥ್ರೋ ಆಟಗಾರರು ಭಾಗಹಿಸುತ್ತಾರೆ. ಈ ಕಾರ್ಯಕ್ರಮದಲ್ಲಿ ಗಣ್ಯರು ಸೇರಿದಂತೆ ಸುಮಾರು 15 ರಿಂದ 16 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ.

ಆದ್ದರಿಂದ  ಸಾರ್ವಜನಿಕರ ಸುಗಮ ಸಂಚಾರದ ದೃಷ್ಟಿಯಿಂದ ಕ್ರೀಡಾಂಗಣದ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಜೆ 4ರಿಂದ ರಾತ್ರಿ 10 ಗಂಟೆಯವರೆಗೆ ಸಂಚಾರಿ ಪೊಲೀಸರು ಸಂಚಾರ ಮಾರ್ಪಾಡು ಮಾಡಿದ್ದಾರೆ. ಈ ಅವಧಿಯಲ್ಲಿ ಕ್ರೀಡಾಂಗಣದ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಸಾರ್ವಜನಿಕರು ಮೆಟ್ರೋ ಮತ್ತು ಇತರ ಸಾರ್ವಜನಿಕ ಸಾರಿಗೆಯನ್ನು ಬಳಸುವಂತೆ ಸೂಚಿಸಿದ್ದಾರೆ.

ವಾಹನಗಳಿಗೆ ಪಾರ್ಕಿಂಗ್ ಸ್ಥಳಗಳು

ಸೆಂಟ್ ಜೋಸೆಫ್ ಕಾಲೇಜ್ (ಕಾರ್ಯಕ್ರಮದ ವೀಕ್ಷಣೆಗೆ ಬರುವ ಮತ್ತು ಪಾಸ್ ಹೊಂದಿರುವ ವಾಹನಗಳಿಗೆ ಪಾರ್ಕಿಂಗ್), ಯುಬಿಸಿಟಿ ಮಾಲ್ ಪಾರ್ಕಿಂಗ್ (ಪೇ ಅಂಡ್ ಪಾರ್ಕಿಂಗ್), ಕಿಂಗ್ ವೇ/ ಲೇನ್ (ಪೇ ಅಂಡ್ ಪಾರ್ಕಿಂಗ್).

ಪಾರ್ಕಿಂಗ್ ನಿಷೇಧಿಸಿರುವ ರಸ್ತೆಗಳು :

ಕೆಬಿ ರಸ್ತೆ, ವಿಠಲ್ ಮಲ್ಯ ರಸ್ತೆ, ಆ‌ರ್.ಆ‌ರ್.ಎಂ.ಆರ್ ರಸ್ತೆ, ಕೆಜಿ ರಸ್ತೆ, ದೇವಾಂಗ ರಸ್ತೆ, ಎನ್.ಆರ್. ರಸ್ತೆ, ನೃಪತುಂಗ ರಸ್ತೆ, ಶೇಷಾದ್ರಿ ರಸ್ತೆ, ಅಂಬೇಡ್ಕ‌ರ್ ವೀದಿ (ಎರಡು ಬದಿ)

ಪರ್ಯಾಯ ಮಾರ್ಗ

ಹೆಚ್.ಎಲ್.ಡಿ ಜಂಕ್ಷನ್ ನಿಂದ ಕೆಬಿ ರಸ್ತೆಯ ಮುಖಾಂತರ ಕ್ರೀನ್ಸ್ ಜಂಕ್ಷನ್ ಮತ್ತಯ ಶಾಂತಿನಗರ ಕಡೆ ಸಂಚರಿಸುವ ಗೂಡ್ಸ್ ವಾಹನಗಳು ಹೆಚ್.ಎಲ್.ಡಿ ಜಂಕ್ಷನ್ ಬಳಿ ಬಲತಿರುವು ಪಡೆದು ಹಡ್ನನ್ ಜಂಕ್ಷನ್ ದೇವಾಂಗ್ ಜಂಕ್ಷನ್ ಎಡತಿರುವು ಮಿಷನ್ ರಸ್ತೆ-ಫೈ ಓವರ್-ರೆಸಿಡೆನ್ಸಿ ರಸ್ತೆ ಮೂಲಕ ಸಾಗುವುದು.

ರಿಚ್ಮಂಡ್​ ಜಂಕ್ಷನ್​ನಿಂದ ಮೈಸೂರು ಬ್ಯಾಂಕ್ ಕಡೆ ಸಂಚರಿಸುವ ಗೂಡ್ಸ್ ವಾಹನಗಳು ಶಾಂತಿನಗರ-ಮಿಷನ್ ಮಿಷನ್ ರಸ್ತೆ-ಸುಬ್ಬಯ್ಯ ಸರ್ಕಲ್-ಲಾಲ್‌ಬಾಗ್ ಪೂರ್ಣಿಮಾ ಜಂಕ್ಷನ್​ನಲ್ಲಿ ಬಲತಿರುವು ಪಡೆದು ಶಿವಾಜಿ ಜಂಕ್ಷನ್-ಬಲತಿರುವು-ಪುರಭವನದ ಬಳಿ ಎಡ ತಿರುವು ಪಡೆದು ಮೈಸೂರು ರಸ್ತೆ ಅಥವಾ ಎನ್.ಆರ್ ಜಂಕ್ಷನ್-ಪೊಲೀಸ್ ಠಾಣೆ ಜಂಕ್ಷನ್-ಕೆಜಿ ರಸ್ತೆ ಮುಖಾಂತರ ಮೈಸೂರು ಬ್ಯಾಂಕ್ ತಲುಪಬಹುದು.

ಕುತೂಹಲ ಕೆರಳಿಸಿದ ಸ್ಪರ್ಧೆ:

ಭಾರತದಲ್ಲಿ ಮೊದಲ ಬಾರಿಗೆ ಅಂತರರಾಷ್ಟ್ರೀಯ ಜಾವೆಲಿನ್ ಥ್ರೋ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದ್ದು, ಇದಕ್ಕೆ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಅನುಮೋದನೆ ನೀಡಿದೆ. ಹೀಗಾಗಿ ಈ ಸ್ಪರ್ಧೆ ತೀವ್ರ ಕುತೂಹಲ ಕೆರಳಿಸಿದ್ದು, ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಸ್ಪರ್ಧೆಯಲ್ಲಿ 12 ಆಟಗಾರರು ಭಾಗವಹಿಸುತ್ತಿದ್ದಾರೆ.

ಯಾರೆಲ್ಲಾ ಬಾಗವಹಿಸುತ್ತಿದ್ದಾರೆ?

ಇನ್ನು ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಸ್ಪರ್ಧೆಯಲ್ಲಿ, ಎರಡು ಬಾರಿಯ ವಿಶ್ವ ಚಾಂಪಿಯನ್ ಗ್ರೆನಡಾದ ಆಂಡರ್ಸನ್ ಪೀಟರ್ಸ್, 2016 ರ ಒಲಿಂಪಿಕ್ ಚಿನ್ನದ ಪದಕ ವಿಜೇತ ಜರ್ಮನಿಯ ಥಾಮಸ್ ರೋಹ್ಲರ್, 2015 ರ ವಿಶ್ವ ಚಾಂಪಿಯನ್ ಕೀನ್ಯಾದ ಜೂಲಿಯಸ್ ಯೆಗೊ, ಅಮೆರಿಕದ ಕರ್ಟಿಸ್ ಥಾಂಪ್ಸನ್, ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತ ಜಪಾನ್‌ನ ಜೆಂಕಿ ಡೀನ್, ಶ್ರೀಲಂಕಾದ ರುಮೇಶ್ ಪತಿರಾಜ್ ಮತ್ತು ಬ್ರೆಜಿಲ್‌ನ ಲೂಯಿಜ್ ಮೌರಿಸಿಯೊ ಡಾ ಸಿಲ್ವಾ ಭಾಗವಹಿಸುತ್ತಿದ್ದಾರೆ. ನೀರಜ್ ಚೋಪ್ರಾ ಅವರಲ್ಲದೆ, ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ಸಚಿನ್ ಯಾದವ್, ಕಿಶೋರ್ ಜೆನಾ, ರೋಹಿತ್ ಯಾದವ್ ಮತ್ತು ಸಾಹಿಲ್ ಸಿಲ್ವಾಲ್ ಭಾರತದಿಂದ ಭಾಗವಹಿಸುತ್ತಿದ್ದಾರೆ.

More articles

Latest article