ಕನ್ನಡ ಅನುವಾದದಲ್ಲಿ ಲೋಪ: ಕ್ಷಮೆ ಕೋರಿದ ‘ಮೆಟಾ’; ಕಳವಳ  ವ್ಯಕ್ತಪಡಿಸಿದ್ದ ಸಿಎಂ ಸಿದ್ದರಾಮಯ್ಯ

Most read

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಸ್ವಯಂ ಚಾಲಿತ ಕನ್ನಡ ಅನುವಾದ ತಪ್ಪಾಗಿದ್ದಕ್ಕೆ ಮೆಟಾ ಕ್ಷಮೆಯಾಚಿಸಿದೆ. ಕನ್ನಡ ಅನುವಾದಕ್ಕೆ ಕಾರಣವಾದ ಕಾರಣವಾದ ಸಮಸ್ಯೆಯನ್ನು ಸಂಕ್ಷಿಪ್ತವಾಗಿ ಸರಿಪಡಿಸಲಾಗಿದೆ ಎಂದೂ ತಿಳಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೇಸ್‌ ಬುಕ್‌ ಮತ್ತು ಇನ್‌ ಸ್ಟಾಗ್ರಾಂನಂತಹ ಮೆಟಾದ ವೇದಿಕೆಗಳಲ್ಲಿ ಕನ್ನಡದ ದೋಷಯುಕ್ತ ಅನುವಾದವು ಸತ್ಯವನ್ನು ತಿರುಚುತ್ತಿದೆ ಮತ್ತು ಬಳಕೆದಾರರ ದಾರಿತಪ್ಪಿಸುತ್ತಿದೆ ಎಂದು ಅಪಾದಿಸಿದ್ದರು.

ಸಾಮಾಜಿಕ ಮಾಧ್ಯಮ ವೇದಿಕೆಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಅಧಿಕೃತವಾಗಿ ಸಂವಹನ ನಡೆಸುವಾಗ, ವ್ಯವಹರಿಸುವಾಗ ಈ ವೇದಿಕೆಗಳಲ್ಲಿನ ಸ್ವಯಂಚಾಲಿತ ಅನುವಾದಗಳು  ತಪ್ಪಾಗಿರುವುದರ ಜತೆಗೆ ಅತ್ಯಂತ ಅಪಾಯಕಾರಿಯೂ ಅಗಿರುತ್ತವೆ. ತಂತ್ರಜ್ಞಾನದ ದಿಗ್ಗಜರು ಮಾಡುವ ಈ ರೀತಿಯ ನಿರ್ಲಕ್ಷ್ಯವು ಸಾರ್ವಜನಿಕ ತಿಳಿವಳಿಕೆ ಮತ್ತು ನಂಬಿಕೆಗೆ ಹಾನಿ ಮಾಡುತ್ತದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದ್ದರು.

ಅನುವಾದದಲ್ಲಿ ಆದ ಲೋಪಗಳನ್ನು ಕುರಿತು ನನ್ನ ಮಾಧ್ಯಮ ಸಲಹೆಗಾರರಾದ ಕೆವಿ ಪ್ರಭಾಕರ್‌ ಅವರು ಮೆಟಾಗೆ ಪತ್ರ ಬರೆದು ತಕ್ಷಣವೇ ಸರಿಪಡಿಸುವಂತೆ ಒತ್ತಾಯಿಸಿದ್ದಾರೆ. ಎಂದು ಅವರು ಎಕ್ಸ್‌ ನಲ್ಲಿ ತಿಳಿಸಿದ್ದರು.

ಕೆ.ವಿ.ಪ್ರಭಾಕರ್‌ ಅವರು, ಜುಲೈ 16ರಂದು ಮೆಟಾಗೆ ಇ–ಮೇಲ್‌ ಮೂಲಕ ಅನುವಾದದಿಂದಾದ ಲೋಪಗಳನ್ನು ಕುರಿತು ಮಾಹಿತಿ ನೀಡಿದ್ದರು. ಅನುವಾದದ ನಿಖರತೆಯನ್ನು ವಿಶ್ವಾಸಾರ್ಹವಾಗಿ ಸುಧಾರಿಸುವವರೆಗೆ ಕನ್ನಡ ವಿಷಯದ ಸ್ವಯಂಚಾಲಿತ ಅನುವಾದ ವೈಶಿಷ್ಟ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆಯೂ ಅವರು ತಿಳಿಸಿದ್ದರು.

More articles

Latest article