ಬೆಂಗಳೂರು: ಇರಾನ್-ಇಸ್ರೇಲ್ ಸಂಘರ್ಷ ಮುಗಿಯದ ಹಿನ್ನೆಲೆ ಅಡುಗೆ ಅನಿಲದಲ್ಲಿ ಹೆಚ್ಚು ವ್ಯತ್ಯಯ ಉಂಟಾಗಿದೆ. ಈ ಹಿನ್ನಲೆಯಲ್ಲಿ ಬೆಂಗಳೂರಿನ ಕೆಲವು ಹೋಟೆಲ್‌ಗಳಿಗೆ ಬೀಗ ಹಾಕಲಾಗಿದೆ. ಮತ್ತೆ ಕೆಲವು ಹೋಟೆಲ್‌ಗಳು ರಜೆ ಎಂಬ ಬೋರ್ಡ್‌ಗಳನ್ನು ಹಾಕಿಕೊಂಡಿವೆ.
ಹೋಟೆಲ್ ರಜೆ ಬೋರ್ಡ್ ಹಾಕಿದ ಮಾಲಿಕ : ಕಡಿಮೆ ದರಕ್ಕೆ ತಿಂಡಿ ವಿತರಿಸುತ್ತಿದ್ದ ಚಾಮರಾಜಪೇಟೆಯ ಹೆಸರುವಾಸಿ ಕನ್ನಡ ತಿಂಡಿ ಕೇಂದ್ರ, ನಿತ್ಯ 30 ಬಡ ಜನರಿಗೆ ಉಚಿತವಾಗಿ ತಿಂಡಿ ವಿತರಣೆ ಮಾಡುತ್ತಿತ್ತು.
ಸದ್ಯ ಗ್ಯಾಸ್ ಸಿಗದ ಕಾರಣ ಹೋಟೆಲ್ ಬಂದ್ ಆಗಿದೆ. ಸಮಸ್ಯೆ ಬಗೆಹರಿಯುವವರಿಗೂ ಹೋಟೆಲ್ ಬಂದ್ ಮಾಡಲಾಗುತ್ತದೆ ಎಂದು ಕನ್ನಡ ತಿಂಡಿ ಹೋಟೆಲ್ ಮಾಲಿಕ ಮಾಹಿತಿ ನೀಡಿದ್ದಾರೆ.

