ಬಿಗ್ ಬಾಸ್ ಕನ್ನಡ 10 ಸ್ಪರ್ಧಿ ಸಿರಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಜೂನ್ 13ರಂದು ಉದ್ಯಮಿ ಪ್ರಭಾಕರ್ ಭೋರೆಗೌಡ ಜೊತೆ ಸಿರಿ ಹಸೆಮಣೆ ಏರಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗ್ರಾಮದಲ್ಲಿನ ಭೋಗ ನಂದೀಶ್ವರ ದೇವಾಲಯದಲ್ಲಿ ಸಿರಿ ಮತ್ತು ಉದ್ಯಮಿ ಪ್ರಭಾಕರ್ ಮದುವೆ ಗುರುಹಿರಿಯರ ಸಮ್ಮುಖದಲ್ಲಿ ಜರುಗಿದೆ.
ಪ್ರಭಾಕರ್ ಅವರು ಮೂಲತಃ ಮಂಡ್ಯದವರಾಗಿದ್ದು, ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಗುರುಹಿರಿಯರು ನಿಶ್ಚಯಿಸಿದ ಮದುವೆ ಇದಾಗಿದ್ದು, ಜೂನ್ 13ರಂದು ಸರಳವಾಗಿ ಮದುವೆ ನಡೆದಿದೆ.
ಎರಡು ದಿನಗಳ ಹಿಂದೆ ಸಿರಿ ಅವರಿಗೆ ಮೈತುಂಬ ಅರಿಷಿಣ ಹಚ್ಚಿರುವ ವಿಡಿಯೋ ವೈರಲ್ ಆಗಿತ್ತು. ಇದು ಸಿನಿಮಾ ಅಥವಾ ಧಾರಾವಾಹಿ ಶೂಟಿಂಗ್ ಇರಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಸಿರಿ ಅವರು ರಿಯಲ್ ಲೈಫ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಅಂದಹಾಗೆ, ಮನೆಯೊಂದು ಮೂರು ಬಾಗಿಲು, ರಂಗೋಲಿ, ಬದುಕು ಸೀರಿಯಲ್ಗಳು ಮೂಲಕ ಟಿವಿ ಪ್ರೇಕ್ಷಕರ ಗಮನ ಸೆಳೆದಿದ್ದರು. ಸೀಸನ್ 10ರ ಬಿಗ್ ಬಾಸ್ ಕನ್ನಡ ಶೋನಿಂದ (Bigg Boss Kannada 10) ನಟಿ ಸಿರಿ ಹೆಚ್ಚಿನ ಜನಪ್ರಿಯತೆ ಗಳಿಸಿದ್ದಾರೆ.