ಕ್ಷಮೆ ಕೇಳಲು ಕಮಲ್‌ ಹಾಸನ್‌ ಗೆ ನಾಳೆಯವರೆಗೂ ಅವಕಾಶ; ಇಲ್ಲಾಂದ್ರೆ ರಾಜ್ಯದಲ್ಲಿ ಥಗ್‌ ಲೈಫ್‌ ಸಿನಿಮಾ ಬಿಡುಗಡೆ ಇಲ್ಲ

ಬೆಂಗಳೂರು: ಥಗ್ ಲೈಫ್’ ವಿತರಕರ ಮನವಿಯ ಮೇರೆಗೆ ಕ್ಷಮೆ ಕೋರಲು ಚಿತ್ರನಟ ಕಮಲ್‌ ಹಾಸನ್‌ ಅವರಿಗೆ ಮಂಗಳವಾರ ಮಧ್ಯಾಹ್ನ 12 ಗಂಟೆಯವರೆಗೆ ಕಾಲಾವಕಾಶ ನೀಡಲಾಗಿದೆ. ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದೆ ಎಂದು ಹೇಳಿಕೆ ನೀಡಿದ್ದ ಕಮಲ್‌ ಹಾಸನ್‌ ನಟನೆಯ ಥಗ್‌ ಲೈಫ್‌ ಚಿತ್ರದ ಬಿಡುಗಡೆಗೆ ರಾಜ್ಯದಲ್ಲಿ ಅವಕಾಶ ನೀಡದಿರಲು ಕರ್ನಾಟಕ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ಧಾರ ಕೈಗೊಂಡಿತ್ತು. ಆದರೆ ಆದರೆ ವಿತರಕ ವೆಂಕಟೇಶ್‌ ಅವರು ಕ್ಷಮೆಯಾಚಿಸಲು ಕಮಲ್‌ ಹಾಸನ್‌ ಗೆ ಮತ್ತೆ ಒಂದು ದಿನದ ಕಾಲಾವಕಾಶ ಕೇಳಿದ್ದರಿಂದ ಈ ಅವಕಾಶ ನೀಡಲಾಗಿದೆ.

ಕಮಲ್ ಹಾಸನ್ ಕ್ಷೆಮ ಕೇಳುವರೇ ಎಂದು ಕಾದು ನೋಡಬೇಕಿದೆ.  ಕಮಲ್ ಹಾಸನ್ ಸದ್ಯ ದುಬೈ ಪ್ರವಾಸದಲ್ಲಿದ್ದು, ನಾಳೆ (ಜೂನ್ 3) ಚೆನ್ನೈಗೆ  ಮರಳಲಿದ್ದಾರೆ. ಮಂಗಳವಾರ ಮಧ್ಯಾಹ್ನ 12 ಗಂಟೆಯವರೆಗೆ ಕಾಲಾವಕಾಶ ನೀಡಿ ಎಂದು ವಿತರಕರು ಕಮನವಿ ಮಾಡಿಕೊಂಡಿದ್ದಾರೆ ಎಂದು ಮಂಡಳಿ ಅಧ್ಯಕ್ಷ ನರಸಿಂಹಲು ತಿಳಿಸಿದ್ದಾರೆ.

ಥಗ್ ಲೈಫ್’ ಚಿತ್ರದ ಸಮಾರಂಭವೊಂದರಲ್ಲಿ ಮಾತನಾಡಿದ್ದ ಕಮಲ್ ಹಾಸನ್ ಅವರು, ‘ಕನ್ನಡ ಹುಟ್ಟಿದ್ದು ತಮಿಳಿನಿಂದ’ ಎಂದು ಹೇಳಿದ್ದರು. ಈ ವಿಚಾರ ಚರ್ಚೆಗೆ ಸಾಕಷ್ಟು ಗ್ರಾಸವೊದಗಿಸಿತ್ತು. ಕ್ಷಮೆ ಕೇಳಬೇಕು ಎಂದು ಒತ್ತಡ ಹೇರಿದರೂ ಕಮಲ್ ಹಾಸನ್ ಕ್ಷಮೆ ಕೇಳಲು ನಿರಾಕರಿಸಿದ್ದರು.  

More articles

Latest article

Most read