ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿಯಾಗಿ ಡಾ.ಕೆ. ಪ್ರಕಾಶ್‌ ಆಯ್ಕೆ

Most read

ತುಮಕೂರು: ಕರ್ನಾಟಕ ರಾಜ್ಯ ಸಿಪಿಐ(ಎಂ) ಕಾರ್ಯದರ್ಶಿಯಾಗಿ ಹಿರಿಯ ಕಾರ್ಮಿಕ ಮುಖಂಡ ಡಾ.ಕೆ. ಪ್ರಕಾಶ್‌ ಆಯ್ಕೆಯಾಗಿದ್ದಾರೆ. ತುಮಕೂರಿನಲ್ಲಿ ಇತ್ತೀಚೆಗೆ ನಡೆದ ಪಕ್ಷದ 24 ನೇ ರಾಜ್ಯ ಸಮ್ಮೇಳನದಲ್ಲಿ ಪ್ರಕಾಶ್‌ ಅವರನ್ನು ಆಯ್ಕೆ ಮಾಡಲಾಗಿದೆ. ನೂತನ ರಾಜ್ಯ ಸಮಿತಿ ಸದಸ್ಯರಾಗಿ 35 ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ. ರಾಜ್ಯ ಕಾರ್ಯದರ್ಶಿ ಮಂಡಳಿಗೆ ೧೨ ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ನೂತನ ಕಾರ್ಯದರ್ಶಿ ಮಂಡಳಿಯಲ್ಲಿ ಯು. ಬಸವರಾಜ್‌, ಜಿ.ಸಿ. ಬಯ್ಯಾರೆಡ್ಡಿ,  ಮೀನಾಕ್ಷಿ ಸುಂದರಂ, ಎಸ್.‌ ವರಲಕ್ಷ್ಮಿ, ಕೆ. ನೀಲಾ, ಎಂ.ಪಿ ಮುನಿವೆಂಕಟಪ್ಪ, ಗೋಪಾಲಕೃಷ್ಣ ಹರಳಹಳ್ಳಿ, ಸೈಯದ್‌ ಮುಜೀಬ್‌, ಯಾದವ ಶೆಟ್ಟಿ, ಕೆ. ಮಹಾಂತೇಶ್‌, ಚಂದ್ರಪ್ಪ ಹೊಸ್ಕೇರಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. 

ನೂತನ ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಡಾ.ಕೆ. ಪ್ರಕಾಶ್, ಈ ಹಿಂದೆ ಕೆಎಸ್ಆರ್‌ಟಿಸಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಕೆಎಸ್ಆರ್‌ಟಿಸಿ ನೌಕರರ ಪರವಾಗಿ ಹಲವಾರು ಹೋರಾಟಗಳನ್ನು ಸಂಘಟಿಸಿ ಯಶಸ್ವಿಯಾಗಿದ್ದಾರೆ.  ದೇವಿ, ವಿಮಲಾ ಕೆ.ಎಸ್.‌ ಪುಟ್ಟಮಾದು, ಎಸ್‌.ವೈ. ಗುರುಶಾಂತ್‌, ಜಿ.ನಾಗರಾಜ, ಬಿ. ಮಾಳಮ್ಮ, ಯಶ್ವಂತ್‌ ಟಿ,  ಎಚ್‌.ಎಸ್.‌ ಸುನಂದ, ಮುನೀರ್‌ ಕಾಟಿಪಳ್ಳ, ಸಿದ್ದಗಂಗಪ್ಪ, ನಿರುಪಾದಿ, ಸೂರ್ಯನಾರಾಯಣ ಪಿ, ಯಮುನಾ ಗಾಂವ್ಕರ್‌, ಸುರೇಶ್‌ ಕಲಾಗಾರ್‌, ಬಿ.ಎನ್.‌ ಮಂಜುನಾಥ್‌, ಎನ್.‌ ಪ್ರತಾಪಸಿಂಹ, ರಘುರಾಮರೆಡ್ಡಿ, ಕೆ.ಜಿ.ವಿರೇಶ್‌, ಸೂರಜ್‌ ನಿದಿಯಂಗ್‌, ಕೃಷ್ಣೇಗೌಡ ಟಿ.ಎಲ್, ಸತ್ಯಬಾಬು, ಭೀಮರಾಯ ಪೂಜಾರಿ, ಎನ್.ಕೆ.ಸುಬ್ರಮಣ್ಯ ರಾಜ್ಯ ಸಮಿತಿ ಸದಸ್ಯರಾಗಿದ್ದಾರೆ.

ಖಾಯಂ ಆಹ್ವಾನಿತರಾಗಿ ಬಾಸ್ಕರ್‌ ರೆಡ್ಡಿ, ಸುನೀಲ್‌ಕುಮಾರ್‌ ಬಜಾಲ್‌, ಡಾ. ಅನೀಲ್‌ ಕುಮಾರ್‌, ಗುರುರಾಜ ದೇಸಾಯಿ, ಮಾಲಿನಿ ಮೇಸ್ತಾ, ಮೀನಾಕ್ಷಿ ಬಾಳಿ ಆಯ್ಕೆಯಾಗಿದ್ದಾರೆ. ವಿಶೇಷ ಆಹ್ವಾನಿತರಾಗಿ ಹಿರಿಯ ನಾಯಕರಾದ ವಿಜೆಕೆ ನಾಯರ್‌, ಜಿ.ಎನ್.‌ ನಾಗರಾಜ್‌, ಬಾಲಕೃಷ್ಣ ಶೆಟ್ಟಿ ಆಯ್ಕೆಯಾಗಿದ್ದಾರೆ. ಕಂಟ್ರೋಲ್‌ ಕಮೀಷನ್‌ನ ಸಂಚಾಲಕರಾಗಿ ಎನ್.ಕೆ ವಸಂತರಾಜ್‌, ಸದಸ್ಯರಾಗಿ ಗೌರಮ್ಮ ಮತ್ತು ಎಸ್‌ಕೆ ಗೀತಾ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಪೊಲಿಟ್‌ ಬ್ಯೂರೋ ಸದಸ್ಯರಾದ ಎಂ.ಎ ಬೇಬಿ, ಬಿ.ವಿ. ರಾಘವಲು, ಎ. ವಿಜಯರಾಘವನ್‌, ಕೇಂದ್ರ ಸಮಿತಿ ಸದಸ್ಯರಾದ ಕೆ.ಎನ್.‌ ಉಮೇಶ್‌ ಇದ್ದರು.

More articles

Latest article