Thursday, May 23, 2024

ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾಗಿ ನ್ಯಾ.ಪಿ ಎಸ್ ದಿನೇಶ್ ಕುಮಾರ್ ನೇಮಕಕ್ಕೆ ಸುಪ್ರೀಕೋರ್ಟ್ ಕೊಲಿಯಜಂ ಶಿಫಾರಸು

Most read

ಹೊಸದಿಲ್ಲಿ: ಕರ್ನಾಟಕ ರಾಜ್ಯ ಹೈಕೋರ್ಟ್ ಹಾಲಿ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ (Prasanna B Varale) ಅವರು ಸುಪ್ರೀಂ ಕೋರ್ಟಿನ ನ್ಯಾಯಾಧೀಶರಾಗಿ ವರ್ಗಾವಣೆಯಾಗಲಿರುವ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್ (Karnataka High Court) ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಪಿ ಎಸ್ ದಿನೇಶ್ ಕುಮಾರ್ (Justice P.S.Dinesh Kumar) ಅವರನ್ನು ನೇಮಕಗೊಳಿಸಲು ನ್ಯಾ. ಡಿ ವೈ ಚಂದ್ರಚೂಡ್, ಸಂಜೀವ್ ಖನ್ನಾ ಹಾಗೂ ಬಿ ಆರ್ ಗವಾಯಿ ಒಳಗೊಂಡ ಕೊಲಿಜಿಯಂ ಇಂದು ಶಿಫಾರಸು ಸಲ್ಲಿಸಿದೆ. ಪ್ರತ್ಯೇಕವಾಗಿ ಸುಪ್ರೀಂಕೋರ್ಟ್ ಕೊಲಿಜಿಯಂ ನ್ಯಾ.ಪ್ರಸನ್ನ ಬಿ ವರಾಳೆ ಅವರನ್ನು ಸುಪ್ರೀಂ ಕೋರ್ಟಿನ ನ್ಯಾಯಾಧೀಶರಾಗಿ ನೇಮಕಗೊಳಿಸಲು ಶಿಫಾರಸು ಸಲ್ಲಿಸಿರುವ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಅವರ ವರ್ಗಾವಣೆಯಿಂದ ತೆರವಾಗುವ  ಮುಖ್ಯ ನ್ಯಾಯಾಧೀಶರ ಸ್ಥಾನಕ್ಕೆ ನ್ಯಾಯಮೂರ್ತಿ ಪಿ ಎಸ್ ದಿನೇಶ್ ಕುಮಾರ್ ಅವರನ್ನೇ ನೇಮಿಸಲು ಕೊಲಿಜಿಯಂ ತೀರ್ಮಾನಿಸಿದೆ.

ನ್ಯಾ. ಪಿ ಎಸ್ ದಿನೇಶ್ ಕುಮಾರ್ ಅವರು 2,ಜನವರಿ 2015ರಂದು ಕರ್ನಾಟಕ ಹೈಕೋರ್ಟಿನ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. ಸೇವಾ ಹಿರಿತನದಿಂದ ಅವರು ಎರಡನೆಯವರಾಗಿದ್ದಾರೆ. ಆದರೆ ಅವರ ಸೇವಾವಧಿ ಕಿರಿದಾಗಿದ್ದು, ಇವರಿಗಿಂತ ಹಿರಿಯರಾಗಿರುವ ನ್ಯಾ ನರೇಂದರ್ ಜಿ ಅವರು ಸಧ್ಯ ಆಂಧ್ರ ಹೈಕೋರ್ಟಿನಲ್ಲಿದ್ದಾರೆ. ನ್ಯಾ. ಪಿ ಎಸ್ ದಿನೇಶ್ ಕುಮಾರ್ ಅವರು ಒಂದು ತಿಂಗಳ ಅವಧಿಯಲ್ಲೇ ನಿವೃತ್ತಿ ಹೊಂದಲಿರುವುದರಿಂದ ನ್ಯಾಯಮೂರ್ತಿ ಪಿ ಎಸ್ ದಿನೇಶ್ ಕುಮಾರ್ ಅವರನ್ನೇ ನೇಮಿಸಲು ಕೊಲಿಜಿಯಂ ತೀರ್ಮಾನಿಸಿದೆ

ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಪರಿಚಯ:

ಗೌರವಾನ್ವಿತ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರು 25 ಫೆಬ್ರವರಿ, 1962 ರಂದು ಜನಿಸಿದರು. ನ್ಯಾಷನಲ್ ಹೈಸ್ಕೂಲ್, ನ್ಯಾಷನಲ್ ಕಾಲೇಜು ಮತ್ತು ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದರು.

1990 ರಲ್ಲಿ ಕರ್ನಾಟಕ ಹೈಕೋರ್ಟ್‌ನಲ್ಲಿ ನಿವೃತ್ತ ನ್ಯಾಯಾಧೀಶರಾಧ ಶಿವರಾಜ್ ವಿ ಪಾಟೀಲ್ ಅವರ ಕೊಠಡಿಯಲ್ಲಿ ಕಾನೂನು ಪ್ರಾಕ್ಟೀಸ್ ಪ್ರಾರಂಭಿಸಿದ್ದರು.

02.01.2015 ರಂದು ಕರ್ನಾಟಕ ಉಚ್ಚ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶರಾಗಿ ಮತ್ತು 30.12.2016 ರಂದು ಖಾಯಂ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು.

More articles

Latest article