Wednesday, May 22, 2024

ಜನವರಿ 17ರಂದು ʼರಾಮʼನ ಮೂರ್ತಿ ಅಧಿಕೃತವಾಗಿ ಲೋಕಾರ್ಪಣೆ

Most read

ಆಯೋಧ್ಯೆಯ ರಾಮಮಂದಿರಲ್ಲಿ ಪ್ರತಿಷ್ಠಾಪಿಸಲಿರುವ ರಾಮನ ಮೂರ್ತಿಯನ್ನು ಜನವರಿ 17ರಂದು ಅಧಿಕೃತವಾಗಿ ಲೋಕಾರ್ಪಣೆ ಮಾಡಲಾಗುವುದು ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟಿ ಮತ್ತು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ  ಸ್ವಾಮೀಜಿ ತಿಳಿಸಿದ್ದಾರೆ.

ದೇವಾಲಯದ ಉದ್ಘಾಟನೆಗೆ ಪ್ರಾತಿನಿಧ್ಯದ ಆಧಾರದ ಮೇಲೆ ಕರೆಯಲಾಗಿದೆ. ದೇವಸ್ಥಾನದಲ್ಲಿ ಸ್ಥಳಾವಕಾಶ ಕಡಿಮೆ ಇರುವುದರಿಂದ ಎಲ್ಲರಿಗೂ ಭಾಗವಹಿಸಲು ಅವಕಾಶವಿಲ್ಲ. ಮೂರ್ತಿ ಪ್ರತಿಷ್ಠಾಪನೆಯ ನಂತರ ಎಲ್ಲ ಭಕ್ತರಿಗೆ ಪ್ರವೇಶ ಇರುತ್ತದೆ ಎಂದು ಉಡುಪಿಯಲ್ಲಿ ಮಾಧ್ಯಮದ ಪ್ರತಿನಿಧಿಗಳಿಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಬಿಜೆಪಿಯಿಂದ ಯಾವುದೇ ದೇಣಿಗೆ ಪಡೆದು ರಾಮಮಂದಿರ ನಿರ್ಮಿಸಿಲ್ಲ. ಭಕ್ತರ ಹಣದಿಂದ ರಾಮಮಂದಿರ ನಿರ್ಮಾಣದಿಂದ ಮಾಡಿದ್ದೇವೆ ಎಂದು ಸ್ಪಷ್ಟನೆ ಸಹ ಕೊಟ್ಟಿದ್ದಾರೆ.

ಹುಬ್ಬಳ್ಳಿಯಲ್ಲಿ ಕರಸೇವಕನನ್ನು ಬಂಧಿಸಿರುವುದು ಸರಿಯಲ್ಲ. ರಾಮಮಂದಿರ ಉದ್ಘಾಟನೆ ಹತ್ತಿರ ಇರುವಾಗ ಇಂತಹ ಘಟನೆ ನಡೆಯಬಾರದು. ಯಾವುದೇ ಗೊಂದಲಗಳಿಗೆ ಸರ್ಕಾರ ಆಸ್ಪದ ನೀಡಬಾರದು ಎಂದೂ ಹೇಳಿದರು.

More articles

Latest article