ಕುವೈತ್‌ ನೀರು ಸಂಸ್ಕರಣಾ ಘಟಕದ ಮೇಲೆ ದಾಳಿ ಮಾಡಿದ್ದು ನಾವಲ್ಲ, ಇಸ್ರೇಲ್ : ಇರಾನ್‌ ಆರೋಪ

ಟೆಹ್ರಾನ್ : ಕುವೈತ್‌ನ ನೀರು ಸಂಸ್ಕರಣಾ (ಡಿಸಾಲಿನೇಷನ್) ಘಟಕದ ಮೇಲಿನ ದಾಳಿಯ ಹೊಣೆ ಹೊರಲು ನಿರಾಕರಿಸಿರುವ ಇರಾನ್ ತಿರಸ್ಕರಿಸಿ, “ಇದು ನಾವು ಮಾಡಿದ್ದಲ್ಲ, ಇಸ್ರೇಲ್ (ಜಿಯೋನಿಸ್ಟ್ ಸರ್ಕಾರ) ಮಾಡಿದ ಕ್ರೂರ ದಾಳಿ” ಎಂದು ಆರೋಪಿಸಿದೆ.

ಇರಾನ್‌ನ ಸುದ್ದಿ ಸಂಸ್ಥೆ ತಸ್ನೀಮ್ ಮೂಲಕ ಇರಾನ್‌ ಸೈನ್ಯ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಇರಾನ್ ಗಣರಾಜ್ಯವನ್ನು ಆರೋಪಿಸುವ ನೆಪದಲ್ಲಿ ಕುವೈತ್‌ನ ನೀರು ಸಂಸ್ಕರಣಾ ಘಟಕದ ಮೇಲೆ ಜಿಯೋನಿಸ್ಟ್ ಸರ್ಕಾರ ಕ್ರೂರ ದಾಳಿ ನಡೆಸಿದೆ. ಇದು ಜಿಯೋನಿಸ್ಟ್ ಆಕ್ರಮಣಕಾರರ ಕೆಟ್ಟತನ ಮತ್ತು ಕೀಳುಮಟ್ಟವನ್ನು ತೋರಿಸುತ್ತದೆ ಎಂದು ಹೇಳಿದೆ.

ಅಮೆರಿಕಾ ಸೈನ್ಯ ತಾಣಗಳು, ಅಲ್ಲಿರುವ ಸೈನಿಕರು, ಅವರ ಹಿತಾಸಕ್ತಿಗಳು ಹಾಗೂ ಜಿಯೋನಿಸ್ಟ್ ಸರ್ಕಾರದ ಸೈನ್ಯ, ಭದ್ರತಾ ಮತ್ತು ಆರ್ಥಿಕ ಮೂಲಸೌಕರ್ಯಗಳು ಮುಂದೆಯೂ ನಮ್ಮ ಗುರಿಗಳಾಗಿರುತ್ತವೆ. ನಾವು ಅವುಗಳನ್ನು ತೀವ್ರ ಸ್ವರೂಪದಲ್ಲಿ ಹಾಣಿ ಮಾಡುತ್ತೇವೆ ಎಂದು ಇರಾನ್‌ ಸೈನ್ಯ ಎಚ್ಚರಿಸಿದೆ.

ಹಿನ್ನೆಲೆ: ಕುವೈತ್‌ನ ವಿದ್ಯುತ್ ಮತ್ತು ನೀರು ಸಂಸ್ಕರಣಾ ಘಟಕದ ಮೇಲೆ ದಾಳಿ ನಡೆದಿತ್ತು.ಇದನ್ನು “ಇರಾನ್ ಆಕ್ರಮಣ” ಎಂದು ಘೋಷಿಸಿದ್ದರ ಬೆನ್ನಲ್ಲೇ ಇರಾನ್ ಈ ಪ್ರತಿಕ್ರಿಯೆ ನೀಡಿದೆ. ದಾಳಿಯಲ್ಲಿ ಒಂದು ಸರ್ವಿಸ್ ಬಿಲ್ಡಿಂಗ್ ಸಂಪೂರ್ಣವಾಗಿ ಹಾನಿಗೊಳಗಾಗಿ ವಿದ್ಯುತ್ ಸರಬರಾಜು ಸ್ವಲ್ಪ ಸಮಯಕ್ಕೆ ನಿಂತುಹೋಗಿತ್ತು. ಈ ಘಟನೆಯಲ್ಲಿ ಒಬ್ಬ ಭಾರತೀಯ ಕಾರ್ಮಿಕ ಸಾವಿಗೀಡಾಗಿದ್ದಾನೆ ಎಂದು ಕುವೈತ್ ಸಚಿವಾಲಯವು ತನ್ನ ಅಧಿಕೃತ X ಖಾತೆಯಲ್ಲಿ ತಿಳಿಸಿತ್ತು.

ಕುವೈತ್ ಸಚಿವಾಲಯದ ವಕ್ತಾರೆ ಫಾತಿಮಾ ಅಬ್ಬಾಸ್ ಜವಾರ್ ಹಯಾತ್ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದರು.

ಅಮೆರಿಕ-ಇಸ್ರೇಲ್ ಒಕ್ಕೂಟದ ಇರಾನ್ ವಿರುದ್ಧದ ಯುದ್ಧ ಈಗ ಐದನೇ ವಾರಕ್ಕೆ ಕಾಲಿಟ್ಟಿದೆ. ಇರಾನ್ ತನ್ನ ಪ್ರತೀಕಾರದ ಭಾಗವಾಗಿ ಗಲ್ಫ್ ದೇಶಗಳ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸುತ್ತಿದೆ. ಇರಾನ್ ಈಗ ಇಸ್ರೇಲ್‌ಗೆ ತಿರುಗಿ ಆರೋಪ ಹೊರಿಸುತ್ತಿದೆ. ಈ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು “ಇರಾನ್‌ನ ತೈಲವನ್ನು ವಶಕ್ಕೆ ಪಡೆಯುವುದೇ ನನ್ನ ಅಚ್ಚುಮೆಚ್ಚಿನ ಯೋಜನೆ” ಎಂದು ಫೈನಾನ್ಷಿಯಲ್ ಟೈಮ್ಸ್‌ಗೆ ಹೇಳಿ ತೀವ್ರ ವಿವಾದ ಸೃಷ್ಟಿಸಿದ್ದಾರೆ.

ಗಲ್ಫ್ ದೇಶಗಳಲ್ಲಿ ನೀರು ಶುದ್ಧೀಕರಣ ಘಟಕಗಳು ಕುಡಿಯುವ ನೀರಿನ ಶೇ.90ಕ್ಕಿಂತ ಹೆಚ್ಚು ಪೂರೈಸುತ್ತವೆ. ಇಂತಹ ಘಟಕಗಳ ಮೇಲಿನ ದಾಳಿ ಪ್ರದೇಶದಲ್ಲಿ ತೀವ್ರ ನೀರು-ವಿದ್ಯುತ್ ಕೊರತೆಯನ್ನು ಉಂಟುಮಾಡುವ ಸಾಧ್ಯತೆ ಇದೆ. ತೈಲ ಬೆಲೆಗಳು ಜಾಗತಿಕ ಮಾರುಕಟ್ಟೆಯಲ್ಲಿ ಏರಿಕೆಯಾಗುತ್ತಿವೆ. ಗಲ್ಫ್ ದೇಶಗಳಲ್ಲಿ ಭೀತಿ ಮತ್ತು ಉದ್ವಿಗ್ನತೆ ತೀವ್ರಗೊಳ್ಳುತ್ತಿದೆ. ಶಾಂತಿ ಮಾತುಕತೆಗಳು ನಡೆಯುತ್ತಿದ್ದರೂ ಯುದ್ಧ ಇನ್ನಷ್ಟು ವ್ಯಾಪಕಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

More articles

Latest article

Most read