ಗೇಮ್‌ ಚೇಂಜರ್‌ ನಿರ್ಮಾಪಕ ದಿಲ್‌ ರಾಜುಗೆ ಐಟಿ ಶಾಕ್‌

Most read

ಹೈದರಾಬಾದ್:‌ ನಟ ರಾಮ್‌ ಚರಣ್‌ ಅಭಿನಯದ ʻಗೇಮ್‌ ಚೇಂಜರ್‌ʼ ಸೇರಿದಂತೆ ಸೂಪರ್‌ ಹಿಟ್‌ ಸಿನಿಮಾಗಳ ನಿರ್ಮಾಪಕ ದಿಲ್‌ ರಾಜು ಅವರಿಗೆ ಆದಾಯ ತೆರಿಗೆ ಇಲಾಖೆ ಇಂದು ಬೆಳ್ಳಂಬೆಳಗ್ಗೆ ಶಾಕ್‌ ಕೊಟ್ಟಿದೆ.

ಆದಾಯ ತೆರಿಗೆ ಇಲಾಖೆಯ 55 ತಂಡಗಳು ನಿರ್ಮಾಪಕ ದಿಲ್‌ ರಾಜು ಅವರ ಮನೆ, ಕಚೇರಿ ಸೇರಿದಂತೆ 8 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದೆ. ಹೈದರಾಬಾದ್‌ನ ಜೂಬಿಲಿ ಹಿಲ್ಸ್ ಮತ್ತು ಬಂಜಾರ ಹಿಲ್ಸ್‌ನಲ್ಲಿರುವ ದಿಲ್‌ ರಾಜು  ಅವರ ನಿವಾಸಗಳು,  ದಿಲ್ ರಾಜು ಸಹೋದರ ಶಿರೀಷ್, ಪುತ್ರಿ ಹನ್ಸಿತಾ ರೆಡ್ಡಿ ಹಾಗೂ ಸಂಬಂಧಿಕರು ಮತ್ತು ಆಪ್ತರ ಮನೆಗಳ ಮೇಲೂ ಐಟಿ ದಾಳಿ ನಡೆಸಿದ್ದು, ತೀವ್ರ ಶೋಧ ನಡೆಯುತ್ತಿದೆ

ದಿಲ್‌ ರಾಜು ಅವರು ಇತ್ತೀಚೆಗಷ್ಟೇ ಅತಿ ದೊಡ್ಡ ಬಜೆಟ್‌ನ ಸಿನಿಮಾ ʻಗೇಮ್ ಚೇಂಜರ್ʼ ನಿರ್ಮಿಸಿದ್ದರು. ಇದು ಬಾಕ್ಸ್‌ಆಫೀಸ್‌ನಲ್ಲಿ ಭಾರಿ ಕಲೆಕ್ಷನ್‌ ಮಾಡಿತ್ತು.  ಇದೇ ಸಂದರ್ಭದಲ್ಲಿ ಕಡಿಮೆ ಬಜೆಟ್‌ನಲ್ಲಿ ನಿರ್ಮಾಣ ಮಾಡಿದ ʻಸಂಕ್ರಾಂತಿಕಿ ವಸ್ತುನ್ನಾಂʼ ಸಿನಿಮಾ ಕೂಡ ಭರ್ಜರಿ ಕಲೆಕ್ಷನ್‌ ಮಾಡುತ್ತಿದೆ. ಇದೀಗ ಐಟಿ ಅಧಿಕಾರಿಗಳು ನಿರ್ಮಾಪಕರಿಗೆ ಶಾಕ್‌ ಕೊಟ್ಟಿದ್ದಾರೆ.

More articles

Latest article