ಬೆಳಗಾವಿಯ ನಾಲ್ವರು ಉದ್ಯಮಿಗಳ ಮನೆ ಮೇಲೆ ಐಟಿ ದಾಳಿ

ಬೆಳಗಾವಿ: ನಗರದ ನಾಲ್ವರು ಪ್ರಸಿದ್ಧ ಉದ್ಯಮಿಗಳ ನಿವಾಸಗಳ ಮೇಲೆ‌ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ಮಂಗಳವಾರ ಬೆಳ್ಳಂಬೆಳಗ್ಗೆ ಐಟಿ ಶಾಕ್‌ ನೀಡಿದ್ದಾರೆ. ಉದ್ಯಮಿಗಳಾದ ವಿನೋದ್ ದೊಡ್ಡಣ್ಣವರ, ಪುಷ್ಪದಂತ ದೊಡ್ಡಣ್ಣವರ ಮನೆ, ಕಚೇರಿ ಮೇಲೆ, ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿರುವ ಉದ್ಯಮಿ ಅಜಿತ್ ಪಟೇಲ, ಗಣೇಶ ಪುರದಲ್ಲಿರುವ ಅಶೋಕ ಐರಾನ್ ಕಂಪನಿ ಮಾಲೀಕ ಅಶೋಕ ಹುಂಬರವಾಡಿ ಮನೆ ಮೇಲೆ ದಾಳಿ ನಡೆಸಿ ತಪಾಸಣೆ ಆರಂಭಿಸಿದ್ದಾರೆ.  ಗೋವಾ, ಬೆಂಗಳೂರು ಅಧಿಕಾರಿಗಳು ಈ ದಾಳಿ ತಂಡದಲ್ಲಿದ್ದಾರೆ.

ದೊಡ್ಡಣ್ಣವರ ಕುಟುಂಬದವರು ಕಾಗವಾಡ ತಾಲೂಕಿನಲ್ಲಿ ಎರಡು ಸಕ್ಕರೆ ಕಾರ್ಖಾನೆ, ಐರಾನ್ ಹಾಗೂ ಗ್ರೈನೆಟ್ ಉದ್ಯಮದಲ್ಲಿ ಖ್ಯಾತಿ ಪಡೆದಿದ್ದಾರೆ‌. ಅವರ ಐರಾನ್ ಹಾಗೂ ಗ್ರಾನೈಟ್ ಉತ್ಪನ್ನಗಳನ್ನು ವಿದೇಶಗಳಿಗೂ ರಫ್ತು ಮಾಡಲಾಗುತ್ತದೆ. ಇಂದು ಬೆಳಿಗ್ಗೆಯಿಂದಲೇ ಅಧಿಕಾರಿಗಳ ತಂಡ ದಾಖಲೆಗಳು, ಆಸ್ತಿಪಾಸ್ತಿ ಪರಿಶೀಲನೆ‌ ನಡೆಸುತ್ತಿದೆ.

More articles

Latest article

Most read