ಹೆಣ್ ಮಕ್ಳೆ ಸ್ಟ್ರಾಂಗು ಗುರು ಎಂದು ಹೇಳಿದ್ದ ಡಾಕ್ಟರ್ ಪುನೀತ್ ರಾಜ್‍ಕುಮಾರ್ ಅವರ ಹುಟ್ಟು ಹಬ್ಬದ ದಿನದಂದೇ IPL ಮಹಿಳಾ ಪ್ರೀಮಿಯರ್ ಲೀಗ್ ನಲ್ಲಿ ಆರ್‌ಸಿಬಿ ಟ್ರೋಫಿ ಗೆಲ್ಲುವ ಮೂಲಕ ಫ್ರಾಂಚೈಸಿ ಲೀಗ್ ಇತಿಹಾಸದಲ್ಲಿ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಹೌದು, ಬೆಂಗಳೂರು (ಆರ್‌ಸಿಬಿ) ತಂಡದ ಕೋಟ್ಯಂತರ ನಿಷ್ಠಾವಂತ ಅಭಿಮಾನಿಗಳ ಈ ಸಲ ಕಪ್ ನಮ್ದೆ ಅನ್ನೊ ಘೋಷವಾಕ್ಯ ಇದೀಗ ನಿಜವಾಗಿದೆ.
ಇಂದು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ 2024ರ ಮಹಿಳಾ ಪ್ರೀಮಿಯರ್ ಲೀಗ್‌ನ (WPL) ಎರಡನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (DC) ಮಹಿಳಾ ತಂಡವನ್ನು ಸೋಲಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮಹಿಳಾ ತಂಡ ಚೊಚ್ಚಲ ಬಾರಿಗೆ ಟ್ರೋಫಿ ಎತ್ತಿ ಹಿಡಿದು ಇತಿಹಾಸ ನಿರ್ಮಿಸಿದೆ.
ಕಳೆದ 16 ವರ್ಷಗಳಿಂದ ಪುರುಷರ ಐಪಿಎಲ್ ನಲ್ಲಿ ಆರ್‌ಸಿಬಿ ಗೆಲುವನ್ನು ನಿರೀಕ್ಷಿಸುತ್ತಿರುವ RCB ಅಭಿಮಾನಿಗಳಿಗೆ ಮಹಿಳಾ ಆರ್ ಸಿ ಬಿ ತಂಡ ಟ್ರೋಫಿ ಗೆದ್ದಿರುವುದು ಭರ್ಜರಿ ಸಂತಸ ತಂದಿದೆ. ಈಗ ಅಭಿಮಾನಿಗಳ ಘೋಷವಾಕ್ಯ ಈ ಸಲ ಕಪ್ ನಮ್ದೆ ಆಗ್ಬೇಕು ಬಿ ರೆಡಿ ಎಂದು ಕೋಹ್ಲಿ ತಂಡಕ್ಕೆ ಸಂದೇಶ ರವಾನಿಸಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡದ ಉತ್ತಮ ಆರಂಭದಕ್ಕೆ ಆರ್‌ಸಿಬಿ ಸ್ಪಿನ್ನರ್‌ಗಳ ಮಾರಕ ದಾಳಿ ಮಾಡಿದರು. ಇದರ ಪರಿಣಾಮ 18.3 ಓವರ್‌ಗಳಲ್ಲಿ ಕೇವಲ 113 ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡರು.
ಆರ್‌ಸಿಬಿ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ನಾಯಕಿ ಸ್ಮೃತಿ ಮಂಧಾನ ಮತ್ತು ಸೋಫಿ ಡಿವೈನ್ ಉತ್ತಮ ಜೊತೆಯಾಟ ಆಡಿ ವಿಕೆಟ್‌ಗೆ 8.1 ಓವರ್‌ಗಳಲ್ಲಿ 49 ರನ್‌ಗಳನ್ನು ದಾಖಲಿಸಿ ಸೋಫಿ ಡಿವೈನ್ ಎಲ್‌ಬಿಡಬ್ಲ್ಯು ಆದರು.
ಎಲ್ಲಿನ್ ಪೆರ್ರಿ ಜೊತೆ ಮತ್ತೆ ಜೊತೆಗೂಡಿದ ಸ್ಮೃತಿ ಮಂಧಾನ ಇನ್ನಿಂಗ್ಸ್ ಕಟ್ಟಲು ನಿಧಾನಗತಿ ಆಟಕ್ಕೆ ಮೊರೆ ಹೋಗಿದ್ದಾರೂ 15 ಓವರ್‌ಗಳಲ್ಲಿ 82 ರನ್ ಗಳಿಸಿದ ಸ್ಮೃತಿ ಮಂಧಾನ ಔಟಾದರು.
ನಂತರ ಆಗಿದೆಲ್ಲ ಮ್ಯಾಜಿಕ್, ಎಲ್ಲಿಸ್ ಪೆರ್ರಿಗೆ ಅಜೇಯ ಸಾಥ್ ನೀಡಿದಲ್ಲದೆ, ಬೌಂಡರಿ ಬಾರಿಸುವ ಮೂಲಕ ತಂಡವನ್ನು ಗೆಲುವಿಗೆ ಕಾರಣವಾದರು.
ಕನ್ನಡತಿ ಶ್ರೆಯಾಂಕ್ ಪಾಟೀಲ್ ಅವರಿಗೆ ಅತೀ ಹೆಚ್ಚು ವಿಕೆಟ್ ಪಡೆದಿದಕ್ಕೆ ಪಿಂಕ್ ಕ್ಯಾಪ್ ನೀಡಿ ಗೌರವಿಸಲಾಯ್ತು. ಅತೀ ಹೆಚ್ಚು ರಸ್ ಬಾರಿಸಿದ ಪೆರ್ರಿ ಅವರಿಗೆ ಕೂಡ ಬಣ್ಣದ ಕ್ಯಾಪ್ ನೀಡುವ ಮೂಲಕ ಗೌರವಿಸಿದರು.
ಈ ಸಮಯದಲ್ಲಿ ಯುವರತ್ನ ಚಿತ್ರದಲ್ಲಿ ಡಾ. ಪುನೀತ್ ರಾಜ್‍ಕುಮಾರ್ ಅವರು ಹೇಳಿದಂತ, IPLನಲ್ಲಿ ಹುಡುಗರು ಗೆದ್ರು ಕಪ್ಪೇ ಹುಡುಗಿಯರು ಗೆದ್ರು ಕಪ್ಪೇ ಒಟ್ನಲ್ಲಿ ಈ ಸಲ ಕಪ್ ನಮ್ದೆ ಎಂಬ ಡಾಲಾಗ್ ಅನ್ನು ಸ್ಮರಿಸಬಹುದು. ಜೊತೆಗೆ ಇಂಟರ್ನೆಟ್ ನಲ್ಲಿ ಈ ಕ್ಲಿಪ್ ವೈರಲ್ ಆಗುತ್ತಿದೆ.