2025 ರ ಐಪಿಎಲ್‌ ರದ್ದು : ಬಿಸಿಸಿಐ ಆದೇಶ

Most read

ದೇಶವು ಯುದ್ಧದಲ್ಲಿರುವಾಗ ನಾವು ಕ್ರಿಕೆಟ್‌ ಆಡುವುದು ಸರಿಯಲ್ಲ. ಆದ್ದರಿಂದ ನಾವು ಈ ಐಪಿಎಲ್‌ ಸೀಸನ್‌ ಅನ್ನು ರದ್ದುಗೊಳಿಸುತ್ತಿದ್ದೆವೆ ಎಂದು ಬಿಸಿಸಿಐ ಹೇಳಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಗಡಿಯಾಚೆಗಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಬಿಸಿಸಿಐ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಪಿಟಿಐ ವರದಿ ಮಾಡಿದೆ.

ಗುರುವಾರ ನಡೆಯಬೇಕಿದ್ದ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಮತ್ತು ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ನಡುವಿನ ಪಂದ್ಯವನ್ನು ಮೊದಲ ಇನ್ನಿಂಗ್ಸ್‌ನ ಮಧ್ಯದಲ್ಲಿಯೇ ಕೈಬಿಡಲು ಐಪಿಎಲ್ ನಿರ್ಧರಿಸಿದ ನಂತರ ಈ ಬೆಳವಣಿಗೆ ಸಂಭವಿಸಿದೆ. ಧರ್ಮಶಾಲಾ ವಿಮಾನ ನಿಲ್ದಾಣ ಮತ್ತು ಹತ್ತಿರದ ಪ್ರದೇಶಗಳಲ್ಲಿರುವ ವಿಮಾನ ನಿಲ್ದಾಣಗಳು ಮುಚ್ಚಲ್ಪಟ್ಟಿದ್ದರಿಂದ, ಪಂಜಾಬ್ ಮತ್ತು ಡೆಲ್ಲಿಯ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಶುಕ್ರವಾರ ಬೆಳಿಗ್ಗೆ ಐಪಿಎಲ್ ಆಯೋಜಿಸಿದ್ದ ವಿಶೇಷ ರೈಲಿನ ಮೂಲಕ ದೆಹಲಿಗೆ ಪ್ರಯಾಣ ಬೆಳೆಸಿದರು.

ಹಿಮಾಚಲ ಪ್ರದೇಶದ ಧರ್ಮಶಾಲಾ ಪಠಾಣ್‌ಕೋಟ್‌ನಿಂದ 100 ಕಿಲೋಮೀಟರ್‌ಗಿಂತಲೂ ಕಡಿಮೆ ದೂರದಲ್ಲಿದೆ. ಅಲ್ಲಿ ನೆನ್ನೆ ರಾತ್ರಿ ನಡೆದ ವಾಯುದಾಳಿಯ ಸೈರನ್‌ಗಳು ಕೇಳಿಸುತ್ತಿದ್ದಂತೆ ಬಿಸಿಸಿಐ ಎಚ್ಚರಗೊಂಡು ತಕ್ಷಣವೇ ಅಲ್ಲಿಂದ ಕ್ರಿಕೆಟ್‌ ಅಭಿಮಾನಿಗಳನ್ನು ಮನೆಗೆ ಕಳುಹಿಸುವ ಕೆಲಸ ಮಾಡಿದೆ.

2025ರ ಐಪಿಎಲ್ ಪ್ರಸ್ತುತ ಧರ್ಮಶಾಲಾದಲ್ಲಿ ನಡೆದ ಪಂದ್ಯವೂ ಸೇರಿ 58 ಪಂದ್ಯಗಳನ್ನು ಪೂರ್ಣಗೊಳಿಸಿದೆ, ಇನ್ನು ಆಡಲು 12 ಪಂದ್ಯಗಳು ಉಳಿದಿತ್ತು. ಇನ್ನು ಉಳಿದ ಪಂದ್ಯಾವಳಿಯನ್ನು ರದ್ದುಗೊಳಿಸುವ ಬಗ್ಗೆ ಕೆಲವೇ ಹೊತ್ತಿನಲ್ಲಿ ಐಪಿಎಲ್‌ ಅಧಿಕೃತ ಪ್ರಕಟಣೆ ಮೂಲಕ ಘೋಷಿಸಲಿದೆ.

More articles

Latest article