Friday, December 6, 2024

ಬಾಲಿವುಡ್ ನಟಿ ಪೂನಂ ಪಾಂಡೆ ನಿಧನ

Most read

ಬಾಲಿವುಡ್ ನಟಿ ಹಾಗೂ ಮಾಡೆಲ್ ಪೂನಂ ಪಾಂಡೆ ಕ್ಯಾನ್ಸರ್‌ಗೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಅವರಿಗೆ 32 ವರ್ಷ ವಯಸ್ಸಾಗಿತ್ತು.

ಪೂನಮ್‌ ಪಾಂಡೆ ಅವರ ಮ್ಯಾನೇಜರ್‌ ಹಾಗೂ ಅವರ ಟೀಮ್‌ ಈ ಕುರಿತಾಗಿ ಇನ್ಸ್‌ಟಾಗ್ರಾಮ್‌ನಲ್ಲಿ ಅಧಿಕೃತವಾಗಿ ಪೋಸ್ಟ್‌ ಮಾಡಿದ್ದು,  ಗರ್ಭಕೋಶದ ಕ್ಯಾನ್ಸರ್‌ನಿಂದ ಸಾವನನ್ನಪ್ಪಿದ್ದಾರೆ ಎಂದು ಖಚಿತಪಡಿಸಿದ್ದಾರೆ.

ಪೋಸ್ಟ್ ನಲ್ಲಿ, “ಇಂದಿನ ಬೆಳಗ್ಗೆಯು ನಮಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಪೂನಂ ಪಾಂಡೆ ಅವರು ಗರ್ಭಕಂಠ ಕ್ಯಾನ್ಸರ್‌ನಿಂದ ಅಗಲಿದರು ಎಂದು ಹೇಳಲು ಭಾರಿ ದುಃಖವಾಗುತ್ತಿದೆ. ಜೀವನದಲ್ಲಿ ಅವರು ಯಾರನ್ನೇ ಭೇಟಿಯಾದರೂ, ಪ್ರೀತಿ ಹಾಗೂ ವಿನಯದಿಂದ ವರ್ತಿಸಿದ್ದರು. ಅವರ ಖಾಸಗಿ ಹಾಗೂ ವ್ಯಯಕ್ತಿಕ ಬದುಕಿನ ಬಗ್ಗೆ ಯಾರೂ ಮಾತನಾಡಬಾರದು ಎಂಬುದಾಗಿ ಮನವಿ ಮಾಡುತ್ತೇವೆ” ಎಂದು ಅವರ ಮ್ಯಾನೇಜರ್‌ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ.

More articles

Latest article